For Quick Alerts
  ALLOW NOTIFICATIONS  
  For Daily Alerts

  ಅಧಿಕಾರಿಗಳ ಅಭಿನಯಕ್ಕೆ ಅಡಕತ್ತರಿ...

  By Staff
  |

  ಬೆಂಗಳೂರು : ರಾಜ್ಯ ಸರಕಾರಿ ನೌಕರರು ಹಾಗೂ ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇನ್ನು ಮುಂದೆ ಚಲನಚಿತ್ರ ಅಥವಾ ಕಿರುತೆರೆ ಧಾರಾವಾಹಿಯಲ್ಲಿ ನಟಿಸುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ.

  ಸರ್ಕಾರಿ ಅಧಿಕಾರಿಗಳು ಕಿರುತೆರೆ-ಸಿನಿಮಾದಲ್ಲಿ ನಟಿಸುವುದನ್ನು ನಿಷೇಧಿಸಿ ಸರ್ಕಾರ ಗುರುವಾರ (ಮಾ.11) ಸುತ್ತೋಲೆ ಹೊರಡಿಸಿದೆ. ಪೂರ್ವಾನುಮತಿ ಪಡೆದು ಚಲನಚಿತ್ರ ಅಥವಾ ಕಿರುತೆರೆಗಳಲ್ಲಿ ಪಾಲ್ಗೊಳ್ಳಬಹುದು ಎಂದು ಈ ಹಿಂದೆ ನೀಡಿದ್ದ ಆದೇಶವನ್ನು ಸರ್ಕಾರ ವಾಪಸ್ಸು ಪಡೆದಿದೆ.

  ಈ ಮುನ್ನವೂ ಸರ್ಕಾರಿ ನೌಕರರು ನಟಿಸುವ ಕುರಿತು ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು . ಆದರೆ, ಪೂರ್ವಾನುಮತಿ ಪಡೆಯುವ ಮೂಲಕ ನಟಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು . ಕೆಲವು ಅಧಿಕಾರಿಗಳು ಆ ಸವಲತ್ತನ್ನು ದುರುಪಯೋಗಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ , ನಟನೆಗೆ ಪೂರ್ಣ ಪ್ರಮಾಣದ ನಿಷೇಧವನ್ನು ಸರ್ಕಾರ ಹೇರಿದೆ.

  (ಇನ್ಫೋ ವಾರ್ತೆ)

  ನೀವೇನಂತೀರಿ : ಸರ್ಕಾರಿ ಅಧಿಕಾರಿಗಳು ನಟಿಸಬಾರದಾ ?

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X