For Quick Alerts
  ALLOW NOTIFICATIONS  
  For Daily Alerts

  ಸ್ಟೇಟ್ಸ್‌ ಚಿತ್ರಮಂದಿರಕ್ಕೆ ಸೆಕ್ಸ್‌ ಬಾಂಬ್‌ ಶಕೀಲಾ ಮೇಡಂ!

  By Staff
  |

  ಮಾ.9ರಿಂದ 11ರವರೆಗೆ ಸ್ಟೇಟ್ಸ್‌ ಚಿತ್ರಮಂದಿರದಲ್ಲಿ ‘16 ಟು 60’ ಚಿತ್ರ ನೋಡಿ, ಬಹುಮಾನ ಗೆಲ್ಲಿ. ಲಕ್ಕಿ ಡ್ರಾ ಅದೃಷ್ಟವಂತರಿಗೆ, ಶಕೀಲಾ ಅವರ ಅಮೃತ ಹಸ್ತದಿಂದ ಬಹುಮಾನ ಪಡೆಯುವ ಭಾಗ್ಯವುಂಟು! - - ಈ ಜಾಹೀರಾತು, ದಿನಪತ್ರಿಕೆಗಳಲ್ಲಿ ಇತ್ತೀಚೆಗೆ ಮೂಡಿಬಂದಿತ್ತು!

  • ತಾರಾ
  ಜಾಹೀರಾತಿನ ಮಹಾತ್ಮೆಯೋ, ಸಿನಿಮಾ ತಾಕತ್ತೋ(?) ಪ್ರೇಕ್ಷಕರಂತೂ ಸ್ಟೇಟ್ಸ್‌ ಚಿತ್ರಮಂದಿರಕ್ಕೆ ನುಗ್ಗುತ್ತಲೇ ಇದ್ದಾರೆ. ಈಗ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಶಕೀಲಾ ಮೇಡಂರನ್ನು ಬೆಂಗಳೂರಿಗೆ ಕರೆತರಲು, ‘16 ಟು 60’ ಚಿತ್ರತಂಡ ಮುಂದಾಗಿದೆ. ಮಾ.14ರಂದು ಸ್ಟೇಟ್ಸ್‌ ಚಿತ್ರಮಂದಿರಕ್ಕೆ ಭೇಟಿ ನೀಡಲಿರುವ ಶಕೀಲಾ, ತಮ್ಮ ಅಭಿಮಾನಿಗಳನ್ನು ಮುಖಾಮುಖಿ ಭೇಟಿಯಾಗಲಿದ್ದಾರೆ!

  ನಂತರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಬಗ್ಗೆ, ಚಿತ್ರದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಲಿದ್ದಾರೆ! ಬೆಂಗಳೂರು ಬೆಳೆಯುತ್ತಿದೆ... ಈ ಥರವೂ...!!

  ಏನಿದರ ವಿಶೇಷ?

  ಅಂದ ಹಾಗೇ ಏನಿದು ‘16ಟು 60’ ಎಂದು ನೋಡಲು ಹೋದರೆ, ಅಲ್ಲಿ ಅಂತಹ ವಿಶೇಷಗಳೇನೂ ಕಾಣಿಸುವುದಿಲ್ಲ. ಇದು 7ವರ್ಷಗಳ ಹಿಂದೆ, ಅಂದರೆ 2000ನೇ ಇಸವಿಯಲ್ಲಿ ತಯಾರಾದ ಚಿತ್ರ. ಅಣ್ಣಾವ್ರ ಅಪಹರಣ ಮತ್ತಿತರ ಕಾರಣಗಳಿಂದ ಚಿತ್ರ ಡಬ್ಬದಲ್ಲಿಯೇ ಕುಳಿತಿತ್ತು!

  ಸಿಲ್ಕ್‌ ಸ್ಮಿತಾ ಮತ್ತು ಡಿಸ್ಕೋ ಶಾಂತಿಗೆ ಚಿತ್ರದಲ್ಲಿ ಪ್ರಮುಖ ಪಾತ್ರ. ಶಕೀಲಾದು ಪುಟ್ಟ ಪಾತ್ರ. ಆದರೆ ಮಾರ್ಕೇಟ್‌ನಲ್ಲಿ ಸಿಲ್ಕ್‌ ಮತ್ತು ಡಿಸ್ಕೋ ಶಾಂತಿ ಹೆಸರು ಓಡುವುದಿಲ್ಲ. ಹೀಗಾಗಿ ಪುಟ್ಟ ಪಾತ್ರದ ಶಕೀಲಾದೇ ದೊಡ್ಡದೊಡ್ಡ ಪೋಸ್ಟರ್‌ಗಳು ರಾರಾಜಿಸುತ್ತಿವೆ. ರಕ್ಷಣಾ ವೇದಿಕೆಯವರು ಸ್ವಲ್ಪ ಗರಂ ಆಗದಿದ್ದರೆ, ಸ್ಟೇಟ್ಸ್‌ ಚಿತ್ರಮಂದಿರದ ಮುಂದೆ ಇಂದಿಗೂ 50ಅಡಿ ಎತ್ತರದ ಶಕೀಲಾ ಕಟೌಟು ಇರುತ್ತಿತ್ತು!

  ಇದು ಡಬ್ಬಿಂಗ್‌ ಚಿತ್ರ ಎಂದು ದೂರಿದ್ದ ರಕ್ಷಣಾ ವೇದಿಕೆ, ಪ್ರದರ್ಶನಕ್ಕೆ ಅಡ್ಡಿಪಡಿಸಿತ್ತು. ಆದರೂ ಪ್ರದರ್ಶಕರು ಮತ್ತು ಚಿತ್ರತಂಡ, ಪಟ್ಟುಬಿಡದೇ ಪ್ರದರ್ಶನ ಮುಂದುವರೆಸಿದೆ.

  ಶಕೀಲಾ ಯಾಕೆ ಬರ್ತಾರೆ ಗೊತ್ತೆ?

  ಈ ಚಿತ್ರಕ್ಕೆ ಇನ್ನಷ್ಟು ಪ್ರಚಾರ ನೀಡಿ, ಮತ್ತಷ್ಟು ದುಡ್ಡು ಬಾಚೋಣವೆಂದು ಶಕೀಲಾರನ್ನು ಬೆಂಗಳೂರಿಗೆ ಚಿತ್ರತಂಡ ಕರೆಸುತ್ತಿದೆ. ಶಕೀಲಾ ಭೇಟಿಗೆ ರಕ್ಷಣಾ ವೇದಿಕೆ ಈಗಾಗಲೇ ವಿರೋಧ ವ್ಯಕ್ತಪಡಿಸಿದೆ. ಈ ಮಧ್ಯೆ 5ನೇ ವಾರಕ್ಕೆ ಕಾಲಿಟ್ಟಿರುವ ಚಿತ್ರ, ಚಿತ್ರಮಂದಿರದ ಬಾಡಿಗೆ ತೆಗೆದಿಟ್ಟರೂ, 1ರಿಂದ 1.5ಲಕ್ಷ ರೂ. ಸಂಪಾದಿಸುತ್ತಿದೆ!

  ಒಂಡು ಕಾಲಕ್ಕೆ ಮಲಯಾಳಂ ಚಿತ್ರರಂಗದ ಅಸ್ಥಿತ್ವವನ್ನೇ ತನ್ನ ಮೈ ಕುಣಿಸಿದಂತೆ ಅಲ್ಲಾಡಿಸಿದ್ದ ದಢೂತಿ ಶಕೀಲಾ, ಗಾಂಧಿ ನಗರದಲ್ಲಿಂದು ಚರ್ಚೆಯ ವಿಷಯ.

  ನಾಗತಿ ಚಿತ್ರದಲ್ಲಿ ಶಕೀಲಾ!

  ಸದ್ಯಕ್ಕೆ ಶಕೀಲ ಕನ್ನಡದಲ್ಲಿ ಎರಡು ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವಿನೋದ್‌ ಪ್ರಭಾಕರ್‌ ಅಭಿನಯದ ‘ಸರ್ಕಲ್‌ ರೌಡಿ’ ಹಾಗೂ ನಾಗತಿಹಳ್ಳಿ ಚಂದ್ರಶೇಖರ್‌ ಅವರ ‘ಮಾತಾಡ್‌ ಮಾತಾಡ್‌’ ಮಲ್ಲಿಗೆಯಲ್ಲಿ ಶಕೀಲಾ ದರ್ಶನ ಉಂಟು.

  ಈ ಮಧ್ಯೆ ತನ್ನ ಸೆಕ್ಸಿ ಇಮೇಜ್‌ನಿಂದ ಹೊರಬಂದು, ಕಾಮಿಡಿ ರೋಲ್‌ಗಳತ್ತ ಸಾಗುತ್ತಿದ್ದಾರೆ. ‘ಸರ್ಕಲ್‌ ರೌಡಿ’ ಚಿತ್ರವನ್ನು ಒಪ್ಪಿಕೊಳ್ಳುವ ಮೊದಲು, ಚಿತ್ರದ ಕಥೆ ಹಾಗೂ ತಮ್ಮ ಪಾತ್ರದ ಬಗ್ಗೆ ಶಕೀಲಾ ಚರ್ಚಿಸಿದರು ಎನ್ನುತ್ತಾರೆ ಚಿತ್ರದ ನಿರ್ದೇಶಕ ರಾಮಮೂರ್ತಿ.

  ಸ್ಟೇಟ್ಸ್‌ ಮಾಲೀಕರಿಗೇನಾಗಿದೆ?

  ಬೆಂಗಳೂರು ಹೃದಯ ಭಾಗದಲ್ಲಿರುವ ಸ್ಟೇಟ್ಸ್‌ ಚಿತ್ರಮಂದಿರ ಒಂದು ಕಾಲದಲ್ಲಿ ಪ್ರತಿಷ್ಠಿತ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದ ತಾಣ. ಆದರೆ ಇಂದು ಆ ಚಿತ್ರಮಂದಿರದ ಮುಂದೆ ಸುತ್ತಾಡುವುದೇ, ಅನೇಕ ಅನುಮಾನಗಳಿಗೆ ಕಾರಣವಾಗುತ್ತದೆ! ನೀಲಿ ಚಿತ್ರಗಳ ಪ್ರದರ್ಶನದ ಮೂಲಕ ಸ್ಟೇಟ್ಸ್‌ ಈಗ ಸಕತ್ತು ಕುಖ್ಯಾತ!

  ಕೆಲವು ತಿಂಗಳ ಹಿಂದಷ್ಟೇ ‘ರಂಭಾ’ ಚಿತ್ರ ಇದೇ ಚಿತ್ರಮಂದಿರದಲ್ಲಿ ಶತಕ ಪೂರೈಸಿತ್ತು. ಇದೇ ಜಾಡಿನಲ್ಲಿ ಸಾಗಲು ಇನ್ನಷ್ಟು ಚಿತ್ರಗಳು ಕ್ಯೂ ನಿಂತಿವೆ!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X