»   » ಕೃಷ್ಣ ಪಡಸಾಲೆಗೆ ಸಿನಿಮಾ ಕಿರಿಕ್ಕಿಗೆ ಪರಿಹಾರ ಕೋರಿ ಮನವಿ ಪತ್ರ

ಕೃಷ್ಣ ಪಡಸಾಲೆಗೆ ಸಿನಿಮಾ ಕಿರಿಕ್ಕಿಗೆ ಪರಿಹಾರ ಕೋರಿ ಮನವಿ ಪತ್ರ

Posted By:
Subscribe to Filmibeat Kannada

ಬೆಂಗಳೂರು : ಚಲನಚಿತ್ರ ವಾಣಿಜ್ಯ ಮಂಡಳಿ, ಎಚ್‌.ಡಿ.ಕುಮಾರ ಸ್ವಾಮಿ ನೇತೃತ್ವದ ನಿರ್ಮಾಪಕರ ವೇದಿಕೆ ಹಾಗೂ ಪ್ರದರ್ಶಕರ ಮಹಾಮಂಡಳ ತಮ್ಮ ಸಮಸ್ಯೆಗಳನ್ನು ಮಂಗಳವಾರ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಅವಗಾಹನೆಗೆ ತಂದವು.

ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ರಮೇಶ್‌, ಪ್ರದರ್ಶಕ ಮಹಾಮಂಡಳದ ಅಧ್ಯಕ್ಷ ಹಾಗೂ ಸಂಸದ ಆರ್‌.ಎಸ್‌.ಪಾಟೀಲ್‌, ಎಚ್‌.ಡಿ.ಕುಮಾರ ಸ್ವಾಮಿ, ತಲ್ಲಂ ನಂಜುಂಡ ಶೆಟ್ಟಿ ಮೊದಲಾದವರು ಕೃಷ್ಣ ಅವರಿಗೆ ಮನವಿ ಸಲ್ಲಿಸಿದರು. ಸದ್ಯಕ್ಕೆ ವಾರ್ತಾ ಸಚಿವ ಅಲ್ಲಂ ವೀರಭದ್ರಪ್ಪ ಬೆಂಗಳೂರಿನಲ್ಲಿ ಇಲ್ಲ. ಅವರು ಬಂದ ತಕ್ಷಣ ಸಮಸ್ಯೆಗೆ ಪರಿಹಾರ ಕೊಡುತ್ತೇವೆ ಎಂದು ಕೃಷ್ಣ ಭರವಸೆ ಕೊಟ್ಟರು.

ಸರ್ಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವವರೆಗೆ ಯಾವುದೇ ಹೊಸ ಚಿತ್ರ ಬಿಡುಗಡೆಯಾಗುವುದಿಲ್ಲ ಎಂದು ಆರ್‌.ಎಸ್‌.ಪಾಟೀಲ್‌ ತಮ್ಮ ಬಿಗಿ ಪಟ್ಟನ್ನು ಸುದ್ದಿಗಾರರಿಗೆ ತಿಳಿಸಿದರು.

(ಇನ್ಫೋ ವಾರ್ತೆ)


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada