»   » ‘ಮಂಗಲ್‌ಪಾಂಡೆ’ಗೆ ಹುಟ್ಟೂರಿನಲ್ಲಿಯೇ ಅಡ್ಡಗಾಲು

‘ಮಂಗಲ್‌ಪಾಂಡೆ’ಗೆ ಹುಟ್ಟೂರಿನಲ್ಲಿಯೇ ಅಡ್ಡಗಾಲು

Subscribe to Filmibeat Kannada

ಲಖನೌ : ಬಿಡುಗಡೆಗೆ ಮೊದಲೇ ವಿವಾದದ ಗಾಳಿ ಎಬ್ಬಿಸಿದ್ದ ಅಮೀರ್‌ಖಾನ್‌ ಅಭಿನಯದ ಹೊಸ ಚಲನಚಿತ್ರ‘ಮಂಗಲ್‌ಪಾಂಡೆ-ದಿ ರೈಸಿಂಗ್‌’ನ ಪ್ರದರ್ಶನವನ್ನು, ಮಂಗಲ್‌ ಪಾಂಡೆ ಹುಟ್ಟೂರಾದ ಬಲಿಯಾದಲ್ಲಿ ಶುಕ್ರವಾರ ರದ್ದುಗೊಳಿಸಲಾಗಿದೆ.

ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದ್ದು, ಸ್ವಾತಂತ್ರ್ಯ ಸೇನಾನಿಯ ಬಗ್ಗೆ ತಪ್ಪು ಮೂಡಿಸುವಂತಾಗಿದೆ. ಪಾಂಡೆಯವರ ಪೂರ್ವಿಕರ ಊರಾದ ನಾಗ್ವಾದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹಾಗಾಗಿ ಚಿತ್ರವನ್ನು ಪ್ರದರ್ಶಿಸಲು ಬಿಡುವುದಿಲ್ಲ ಎಂದು ಸ್ಥಳೀಯ ರಂಗಭೂಮಿ ಕಲಾವಿದರು ಮತ್ತು ಬುದ್ಧಿಜೀವಿಗಳು ಧರಣಿ ನಡೆಸಿದರು.

ಚಿತ್ರವು ಇಲ್ಲಿನ ವಿಜಯ್‌ ಸಿನಿಮಾ ಹಾಲ್‌ನಲ್ಲಿ ಶುಕ್ರವಾರ ತೆರೆ ಕಾಣಬೇಕಿತ್ತು. ಆದರೆ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಧರಣಿಯಿಂದ ಚಿತ್ರಮಂದಿರದ ಆಡಳಿತ ಮಂಡಳಿ ಪ್ರದರ್ಶನ ರದ್ದುಪಡಿಸಿದೆ. ದೇಶದ ವಿವಿಧೆಡೆ ತುಂಬಿದ ಗೃಹಗಳಿಂದ ಚಿತ್ರ ಪ್ರದರ್ಶನಗೊಳ್ಳುತ್ತಿದೆ.

ಏನಿದು ಗದ್ದಲ ? : ‘ಲಗಾನ್‌’ ಚಿತ್ರದ ಮೂಲಕ ದೇಶ ವಿದೇಶಗಳಲ್ಲಿ ಭಾರೀ ಸಂಚಲನ ಉಂಟುಮಾಡಿದ್ದ ಅಮೀರ್‌ಖಾನ್‌ರಿಂದ, ಪ್ರೇಕ್ಷಕರು ಈ ಚಿತ್ರದಲ್ಲಿ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಿದ್ದರು. ಆದರೆ ಆರಂಭದಲ್ಲೇ ಚಿತ್ರ ವಿವಾದಕ್ಕೆ ಗುರಿಯಾಗಿದೆ.

50 ಕೋಟಿ ರೂಪಾಯಿ ಭಾರೀ ಬಜೆಟ್‌ನ ಈ ಚಿತ್ರವನ್ನು ಕೇತನ್‌ ಮೆಹ್ತಾ ನಿರ್ದೇಶಿಸಿದ್ದಾರೆ. 1857ರಲ್ಲಿ ನಡೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್‌ ಸಾಮ್ರಾಜ್ಯಶಾಹಿಗೆ ಮಂಗಲ್‌ ಪಾಂಡೆ ಒಡ್ಡಿದ ಪ್ರಬಲ ಸವಾಲಿನ ಕಥೆಯನ್ನು ಚಿತ್ರ ಆಧರಿಸಿದೆ.

ಚಿತ್ರದಲ್ಲಿ ಪಾಂಡೆ ಇಂಗ್ಲೆಂಡಿನಲ್ಲಿ ಜನಿಸಿದ್ದಾರೆಂದು ಸುಳ್ಳು ಹೇಳಲಾಗಿದೆ. ದೋಷ ತೆಗೆಯುವತನಕ ಬಿಡುಗಡೆ ಅಸಾಧ್ಯ ಎಂದು ಉತ್ತರ ಪ್ರದೇಶದ ರಾಜ್ಯ ಬಿಜೆಪಿ ಘಟಕ ಪಟ್ಟುಹಿಡಿದಿದೆ.

(ಏಜೆನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada