»   » ಬ್ಲ್ಯಾಕ್ ಮೇಲ್ ನಿರ್ಮಾಪಕರಿಂದ ಜೋಗಿ ಪ್ರೇಮ್ ಗೆ ಸಂಕಷ್ಟ!

ಬ್ಲ್ಯಾಕ್ ಮೇಲ್ ನಿರ್ಮಾಪಕರಿಂದ ಜೋಗಿ ಪ್ರೇಮ್ ಗೆ ಸಂಕಷ್ಟ!

Posted By: Staff
Subscribe to Filmibeat Kannada


ಬೆಳಗಾವಿ, ಅ.12 : ತಮ್ಮ ಪತ್ನಿ ನಟಿ ರಕ್ಷಿತಾ ಜೊತೆ ಆನಂದದಿಂದ ಕಾಲ ಕಳೆಯುವ ಹೊತ್ತಿನಲ್ಲಿ ಚೆಕ್ ಬೌನ್ಸ್ ಪ್ರಕರಣವೊಂದು, ನಿರ್ದೇಶಕ ಪ್ರೇಮ್ ಅವರ ನಿದ್ದೆ ಕೆಡಿಸಿದೆ. ಪ್ರಕರಣದ ಬಗ್ಗೆ ಹೇಳುವ ಪ್ರೇಮ್, ನಾನಂತೂ ಯಾರಿಗೂ ಮೋಸ ಮಾಡಿಲ್ಲ ಎನ್ನುತ್ತಾರೆ.

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ನ್ಯಾಯಾಲಯ ನೋಟಿಸ್ ನೀಡುತ್ತಿತ್ತು. ಈ ನೋಟಿಸ್ ಗಳನ್ನು ಪ್ರೇಮ್ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಹೀಗಾಗಿ ಪ್ರೇಮ್ ಬಂಧನಕ್ಕೆ ಬೈಲಹೊಂಗಲದ ನ್ಯಾಯಾಲಯಕ್ಕೆವಾರಂಟ್ ಹೊರಡಿಸಿತ್ತು. ಗುರುವಾರ ನ್ಯಾಯಾಲಯಕ್ಕೆ ಬಂದ ಪ್ರೇಮ್, 10ಸಾವಿರ ರೂಪಾಯಿ ಬಾಂಡ್ ನೀಡಿ ಜಾಮೀನಿನ ಮೇಲೆ ಬಿಡುಗಡೆಯಾದರು.

ಏನಿದು ಚೆಕ್ ಬೌನ್ಸ್ ಕೇಸು?

ತುಂಟ ಚಿತ್ರದ ನಿರ್ದೇಶನಕ್ಕಾಗಿ ಪ್ರೇಮ್ ನಾಲ್ಕು ವರ್ಷದ ಹಿಂದೆ ಬೈಲಹೊಂಗಲದ ಪ್ರಕಾಶ ಮತ್ತು ಆನಂದ್ ಸೊಗಲದ ಸಹೋದರರಿಂದ 6ಲಕ್ಷ ಪಡೆದಿದ್ದರು. ಚಿತ್ರ ಅಂದುಕೊಂಡ ವೇಳೆಗೆ ಸೆಟ್ಟೇರಲಿಲ್ಲ. ಆ ಮಧ್ಯೆ ಜೋಗಿ ಚಿತ್ರ ಪ್ರೇಮ್ ಮುಂದಿತ್ತು. ಕೊನೆಗೆ 5ಲಕ್ಷ ನಗದು ಮತ್ತು 1ಲಕ್ಷದ ಚೆಕ್ ನೀಡಿ, ಪ್ರೇಮ್ ಕೈತೊಳೆದುಕೊಂಡರು. ಕಾರಣಾಂತರಗಳಿಂದ ಚೆಕ್ ಬೌನ್ಸ್ ಆಯಿತು.

ಆಮೇಲೆ ಆ ಒಂದು ಲಕ್ಷ ಹಣವನ್ನು ನಾನು ನೀಡಿದ್ದೇನೆ. ಹಣ ನೀಡಿದ ಸಂದರ್ಭದಲ್ಲಿ ಚೆಕ್ ವಾಪಸ್ ಪಡೆಯಲಿಲ್ಲ. ಈಗ ನನ್ನನ್ನು ಶೋಷಿಸುತ್ತಿದ್ದಾರೆ. ಬೌನ್ಸ್ ಆದ ಚೆಕ್ ಇಟ್ಟುಕೊಂಡು, 10ಲಕ್ಷ ನೀಡಿ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಸತ್ಯ ದೇವರಿಗೆ ಗೊತ್ತಿದೆ ಎಂದು ಪ್ರೇಮ್ ಪ್ರತಿಕ್ರಿಯಿಸಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada