»   » ಖುಷ್ಪೂ ಬಂಧನಕ್ಕೆ ವಾರಂಟ್‌, ಸುಹಾಸಿನಿ ವಿರುದ್ಧ ಕಿಡಿ

ಖುಷ್ಪೂ ಬಂಧನಕ್ಕೆ ವಾರಂಟ್‌, ಸುಹಾಸಿನಿ ವಿರುದ್ಧ ಕಿಡಿ

Subscribe to Filmibeat Kannada

ಮೆಟ್ಟೂರು : ‘ಮದುವೆಗೆ ಮುನ್ನ ಮಹಿಳೆಯರು ಲೈಂಗಿಕ ಸಂಪರ್ಕ ಹೊಂದುವುದರಲ್ಲಿ ತಪ್ಪೇನಿಲ್ಲ ’ ಎಂಬ ನಟಿ ಖುಷ್ಬೂ ಅವರ ಹೇಳಿಕೆ, ತೀವ್ರ ವಿವಾದಕ್ಕೆ ಕಾರಣವಾಗಿದೆ. ಪ್ರಕರಣ ನ್ಯಾಯಾಲಯದ ಕಟ್ಟೆ ಹತ್ತಿದೆ.

ಖುಷ್ಬೂ ವಿರುದ್ಧದ ಮಾನನಷ್ಟ ಮೊಕದ್ದಮೆ ಈಗ ವಿಚಿತ್ರ ತಿರುವು ಪಡೆದಿದೆ. ವಿಚಾರಣೆಗೆ ಗೈರು ಹಾಜರಾಗುತ್ತಿರುವ ಖುಷ್ಬೂ ಬಂಧನಕ್ಕೆ ಮೆಟ್ಟೂರು ನ್ಯಾಯಾಲಯ, ಜಾಮೀನು ರಹಿತ ಬಂಧನ ಆದೇಶವನ್ನು ಶುಕ್ರವಾರ ಹೊರಡಿಸಿದೆ.

ತಮ್ಮ ಕಾರ್ಯದೊತ್ತಡದ ನಡುವೆ ವಿಚಾರಣೆಗೆ ಖುಷ್ಬೂ ಗೈರು ಹಾಜರಾಗುತ್ತಿದ್ದ ರು. ಶುಕ್ರವಾರದ ವಿಚಾರಣೆಗೂ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಲಾಗಿದೆ.

ನಟಿ ಖುಷ್ಟೂ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ನಟಿ ಸುಹಾಸಿನಿ ವಿರುದ್ಧ ತಮಿಳು ಸಂಘಟನೆಗಳು ಈಗ ಗುರ್‌ ಎಂದಿವೆ. ಸುಹಾಸಿನಿ ತಮಿಳರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿವೆ.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada