ಡೆಡ್ಲಿ ಆದಿತ್ಯನಿಗೆ ರಾಗಿಣಿ ದ್ವಿವೇದಿ ಕಪಾಳಮೋಕ್ಷ!

By Rajendra

ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಅಪಾರ ಅವಕಾಶಗಳನ್ನು ಬಾಚಿಕೊಂಡಿರುವ ನಟಿ ರಾಗಿಣಿ ದ್ವಿವೇದಿ. ಶಿವರಾಜ್ ಕುಮಾರ್ ಜೊತೆ ಶಿವ, ಉಪೇಂದ್ರ ಜೊತೆ ಆರಕ್ಷಕ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತ್ತೀಚೆಗೆ ಡೆಡ್ಲಿ ಆದಿತ್ಯನಿಗೆ ರಾಗಿಣಿ ದ್ವಿವೇದಿ ಕಪಾಳಮೋಕ್ಷ ಮಾಡಿದ್ದಾರೆ. ಇದನ್ನು ಆಕೆಯೇ ಸ್ವತಃ ಹೇಳಿಕೊಂಡಿದ್ದಾರೆ.

ಆದಿತ್ಯನಿಗೆ ಒಂದಲ್ಲ ಎರಡಲ್ಲ ಎಂಟು ಬಾರಿ ಕಪಾಳಕ್ಕೆ ಹೊಡೆದದ್ದಾಗಿ ರಾಗಿಣಿ ಹೇಳಿದ್ದಾರೆ. ಹೌದು ಯಾಕೆ ಹೊಡೆದಿರಿ. ಆದಿತ್ಯ ಅಂತಹ ತಪ್ಪೇನು ಮಾಡಿದ ಎನ್ನಲಾಗಿ. ಆಗ ರಾಗಿಣಿ ಸತ್ಯ ಹೊರಹಾಕಿದರು. ಅದೇನಪ್ಪಾ ಅಂದ್ರೆ, ಇದೆಲ್ಲಾ ಎಂ ಎಸ್ ರಮೇಶ್ ನಿರ್ದೇಶಿಸುತ್ತಿರುವ 'ಟಿಪ್ಪು' ಚಿತ್ರದ ಕತೆ ಎಂದು ಗೊತ್ತಾಯಿತು.

ಇದೇ ರೀತಿ ಹೀರೋ ಕಪಾಳಕ್ಕೆ ಬಾರಿಸುವ ಸನ್ನಿವೇಶಗಳು ಉಳಿದ ಚಿತ್ರಗಳಿಂದಲೂ ಬಂದಿತ್ತಂತೆ. ಆದರೆ ತನಗಿಂತಲೂ ಹಿರಿಯ ನಟರ ಕಪಾಳಕ್ಕೆ ಹೊಡೆಯುವುದು ಅಷ್ಟು ಸರಿ ಅಲ್ಲ ಅನ್ನಿಸಿ ಆ ದೃಶ್ಯಗಳನ್ನು ಕೈಬಿಟ್ಟಿದ್ದಾಗಿ ತಿಳಿಸಿದ್ದಾರೆ ರಾಗಿಣಿ. ಗುರುಕಿರಣ್ ಸಂಗೀತ ನೀಡಿರುವ 'ಟಿಪ್ಪು' ಚಿತ್ರದಲ್ಲಿ ರಂಗಾಯಣ ರಘು, ಶೋಭರಾಜ್, ಮಾಲತಿ ಸರ್ ದೇಶಪಾಂಡೆ, ಸಿಮ್ರಾನ್, ಕಮಲ, ಅವಿನಾಶ್ ಅಭಿನಯಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
In Kannda movie Tippu, actress Ragini Dwivedi done a different role opposite actor Aditya. She slaped him for a scene, and she had do it eight times since it was quite weird for him,” said Ragini. The movie is being directed by M S Ramesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X