ರಜನಿಕಾಂತ್ 'ಕೊಚಡಯ್ಯಾನ್'ದಿಂದ ಸ್ನೇಹಾ ಔಟ್
ನಟಿ ಸ್ನೇಹಾ ಕೊಚಡಯ್ಯಾನ್ ಚಿತ್ರದಿಂದ ಹೊರಬಂದಿದ್ದಾರೆ. ರಜನಿಕಾಂತ್ ಚಿತ್ರ ಕೊಚಡಯ್ಯಾನ್ ನಿಂದ ಹೊರಬಂದಿದ್ದಕ್ಕೆ ಸ್ಪಷ್ಟ ಕಾರಣ ಸಿಗುತ್ತಿಲ್ಲವಾದರೂ ಆಕೆ ಮದುವೆಯಾಗಲು ಸಿದ್ಧರಾಗಿರುವುದು ಒಂದು ಕಾರಣ ಎನ್ನಲಾಗುತ್ತಿದೆ. ಆಕೆಯ ಈ ನಿರ್ಧಾರ ಸಾಕಷ್ಟು ಜನರಿಗೆ 'ಶಾಕ್' ನೀಡಿರುವುದಂತೂ ನಿಜ. ಕೆಲವು ಮೂಲಗಳ ಪ್ರಕಾರ, ಸ್ನೇಹಾ ನಿರ್ಧಾರಕ್ಕೆ ಡೇಟ್ ಸಮಸ್ಯೆ ಕಾರಣ.
ನಂಬಲರ್ಹ ಸುದ್ದಿ ಮೂಲಗಳ ಪ್ರಕಾರ ಆಕೆಗೆ ಸಾಕಷ್ಟು ಕಮಿಟ್ ಮೆಂಟ್ ಗಳಿರುವುದರಿಂದ ಹೀಗಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯುವ ಒಂದು 'ಈವೆಂಟ್'ಗಾಗಿ ಸ್ನೇಹಾ ಹೋಗಬೇಕಾಗಿದೆ. ಇಲ್ಲಿ ಕೊಚಡಯ್ಯಾನ್ ಶೂಟಿಂಗ್ ಕೂಡ ನಡೆಯಲಿದೆ. ಹಾಗಾಗಿ ಸ್ನೇಹಾ ಅನಿವಾರ್ಯವಾಗಿ ಚಿತ್ರದಿಂದ ಔಟ್ ಆಗಿದ್ದಾರೆ.
ರಜನಿಕಾಂತ್ ಜೊತೆ ನಟಿಸುವ ಅವಕಾಶ ಮಿಸ್ ಆಗಿದ್ದರಿಂದ ಸ್ನೇಹಾಗೆ ಸಖತ್ ಬೇಸರವಾಗಿದೆ. ಆದರೆ ಏನೂ ಮಾಡಲಾಗದ ಅಸಹಾಯಕತೆ ಅವರನ್ನು ಕಾಡುತ್ತಿದೆಯಂತೆ. ಈಗ ಅವರ ಸ್ಥಾನಕ್ಕೆ ನಟಿ ರುಕ್ಮಿಣಿ ವಿಜಯಕುಮಾರ್ ಆಯ್ಕೆಯಾಗಿದ್ದಾರೆ. ನಾಯಕಿಯಾಗಿ ದೀಪಿಕಾ ಪಡುಕೋಣೆ ಇದ್ದಾರೆ. ಇನ್ನುಳಿದಂತೆ ಜಾಕಿಶ್ರಾಫ್, ಆದಿ, ಹಾಗೂ ಶರತ್ ಕುಮಾರ್, ಕೊಚಡಯ್ಯಾನ್ ತಾರಾಗಣದಲ್ಲಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











