ಗಾಂಧಿನಗರದ ಗಾಸಿಪ್ ಗೆ 'ಅನು ಪ್ರಭಾಕರ್' ಆಹಾರ

ಅನುಪ್ರಭಾಕರ್ ಹಾಗೂ ಅವರ ಪತಿ ಕೃಷ್ಣಮೂರ್ತಿ ಒಟ್ಟಾಗಿ ಹೊರಗಡೆ ಸುತ್ತಾಡುವುದಿಲ್ಲ. ಪತಿಯೊಂದಿಗೆ ಯಾವುದೇ ಕಾರ್ಯಕ್ರಮಗಳಿಗೂ ಅನು ಪ್ರಭಾಕರ್ ಹೋಗುವುದಿಲ್ಲ. ಅವರಿಬ್ಬರ ನಡುವೆ ಸಂಬಂಧ ಹಳಸಿದೆ. ಇಬ್ಬರ ನಡುವೆ ಮನಸ್ಥಾಪ ಮುಗಿಲು ಮುಟ್ಟಿದೆ. ಹಬ್ಬಿರುವ ಗಾಸಿಪ್ ಪ್ರಕಾರ, ಅನು ದಂಪತಿ ಸದ್ಯದಲ್ಲೇ ಬೇರೆ-ಬೇರೆ ಆಗಲಿದ್ದಾರೆ.
ಆದರೆ ಇವೆಲ್ಲ ನಿಜವೇ? ಈ ಜೋಡಿಯನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು ಈ ಸುದ್ದಿ ಶುದ್ಧ ಸುಳ್ಳು. ಏಕೆಂದರೆ ತೀರಾ ಇತ್ತೀಚಿಗೆ ನಿರ್ದೇಶಕ ಟಿ.ಎಸ್.ನಾಗಾಭರಣ ಮನೆಯಲ್ಲಿ ನಡೆದ ನಾಗಮಂಡಲ ಕಾರ್ಯಕ್ರಮಕ್ಕೆ ಅನು ಪತಿಯೊಟ್ಟಿಗೆ ಬಂದಿದ್ದರು. ಪೂಜಾ ಕಾರ್ಯದಲ್ಲಿ ಶ್ರದ್ಧೆಯಿಂದ ಭಾಗವಹಿಸಿದರು. ಎಲ್ಲರೊಂದಿಗೂ ನಗುನಗುತ್ತಲೇ ಮಾತನಾಡಿದರು.
ಇದನ್ನು ನೋಡಿಯಾದರೂ ಸುಮ್ಮನೆ ಗಾಸಿಫ್ ಹಬ್ಬಿಸುವವರು ಸುಮ್ಮನಾಗಬಾರದೇ? ಆದರೂ ಗಾಳಿಯಲ್ಲಿ ಸುದ್ದಿ ತೇಲಿ ತೇಲಿ ಹೋಗುತ್ತಿದೆ. ಸಾಗರದಾಚೆಗೂ ಸುದ್ದಿಯಾಗಿದೆ. ಸುದ್ದಿ ನಿಜವಾಗದಿದ್ದರೆ ಸಾಕೆಂಬುದು ಅವರ ಆಪ್ತರ ಹಾರೈಕೆ. ಅವರನ್ನೇ ಕೇಳೋಣವೆಂದರೆ ಒಟ್ಟಗೇ ಓಡಾಡುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











