»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ದಾರಿ ತಪ್ಪಿದ ಮಗ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ದಾರಿ ತಪ್ಪಿದ ಮಗ!

Posted By:
Subscribe to Filmibeat Kannada
Actor Darshan
ದರ್ಶನ್ ಈಗ ದಾರಿ ತಪ್ಪಿದ ಮಗ! ಇಂದು ದರ್ಶನ್ ಜಾಮೀನು ಆದೇಶದ ವಿಚಾರಣೆ 4 ಗಂಟೆಗೆ ನಡೆಯಲಿದೆ. 1 ನೇ ಎಸಿಎಂಎಂ ನ್ಯಾಯಾಲಯದಿಂದ 4 ಗಂಟೆಗೆ ಬರಲಿರುವ ತೀರ್ಪನ್ನಾಧರಿಸಿದೆ ಈ ಚಾಲೇಂಜಿಂಗ್ ಸ್ಟಾರ್ ಭವಿಷ್ಯ. ಹೆಂಡಿತಿಗೆ ಹಲ್ಲೆ ಮಾಡಿ ಜೈಲು ಸೇರಿದ್ದ ಹಾಗೂ ಆಸ್ಪತ್ರೆಯಿಂದ ಆಸ್ಪತ್ರೆಗೆ ವರ್ಗವಾಗುತ್ತಿದ್ದ ದರ್ಶನ್ ಮನೆಗೆ ಹೋಗುತ್ತಾನೋ ಅಥವಾ ಮಾವನ ಮನೆಗೋ ಎಂಬುದು ಸದ್ಯ ಎಲ್ಲರೂ ಕುತೂಹಲದಿಂದ ಕಾಯುತ್ತಿರುವ ಸಮಾಚಾರ!

ಚಿತ್ರರಂಗ್ ಚಾಲೇಂಜಿಂಗ್ ಸ್ಟಾರ್ ಈಗ ಅಕ್ಷರಶಃ ದಾರಿ ತಪ್ಪಿದ ಮಗ. ಮಾರ್ಗದರ್ಶನ ಮಾಡಬೇಕಾದ ಚಿತ್ರರಂಗ ಇನ್ನೂ ದಾರಿತಪ್ಪಿಸುವ ನಿರ್ಧಾರಗಳನ್ನೇ ಕೈಗೊಂಡಿದೆ. ಎತ್ತಿಗೆ ಬಂದ ಜ್ವರಕ್ಕೆ ಎಮ್ಮೆಗೆ ಬರೆ ಎಳೆದು ನಗೆ ಪಾಟಲಿಗೆ ಗುರಿ ಆಗಿದೆ.

ಒಟ್ಟಿನಲ್ಲಿ ತೆರೆಯ ಮೇಲೆ ಮಾತ್ರ ನಟಿಸಬೇಕಾಗಿದ್ದ ಚಿತ್ರನಟರು, ನಟಿಯರು ತೆರೆಯ ಹಿಂದೆಯೂ ಸಾಕಷ್ಟು ನಟಿಸುತ್ತಾರೆಂಬ ಅನಿಸಿಕೆಗೆ ಈ ದರ್ಶನ ರಾಮಾಯಣ ಕಾರಣವಾಗಿದೆ. ನಾಲ್ಕು ಗಂಟಗೆ ಬರುವ ತೀರ್ಪು ಏನಾಗುತ್ತದೋ..! (ದಟ್ಸ್‌ಕನ್ನಡ ಸಿನಿವಾರ್ತೆ)

English summary
Kannada actor, Challenging star Darshan Toogudeepa is in police custody now. His application of bail has esquire and verdict will be announce at 4 pm today.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada