ಕಾನೂನು 'ದರ್ಶನ': ಚಿತ್ರನಟರ ಸಂಧಾನ ತಪ್ಪು- ವಕೀಲ ಅಮರನಾಥನ್

ಪತಿಯಿಂದ ಗಂಭೀರವಾಗಿ ಹಲ್ಲೆಗೆ ಒಳಗಾದ ವಿಜಯಲಕ್ಷ್ಮಿ ಈ ಕುರಿತು ವೈದ್ಯರ ಮುಂದೆ ಹೇಳಿಕೆ ನೀಡಿದರು. ಈ ಹೇಳಿಕೆಯ ದಾಖಲೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಯಾವುದೇ ಒಂದು ಪ್ರಕರಣವು ಪೊಲೀಸರ ಮುಂದೆ ಹೋದ ತಕ್ಷಣ ಅಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿ ಅದನ್ನು 24 ಗಂಟೆ ಒಳಗೆ ಕೋರ್ಟ್‌ಗೆ ನೀಡಲಾಗುತ್ತದೆ.
ಒಮ್ಮೆ ದೂರು ಕೋರ್ಟ್‌ನಲ್ಲಿ ದಾಖಲಾದ ತಕ್ಷಣ ಅದು ಕೋರ್ಟ್ ವ್ಯಾಪ್ತಿಗೆ ಒಳಪಡುತ್ತದೆ. ಇದರ ಮಧ್ಯೆ ಪ್ರವೇಶ ಮಾಡುವ ಅಧಿಕಾರ ಯಾರಿಗೂ ಇಲ್ಲ.
'ಆದರೆ, ಈ ಪ್ರಕರಣದಲ್ಲಿ ವಿಜಯಲಕ್ಷ್ಮಿ ಅವರ ದೂರಿನ ಅನ್ವಯ ಇದೇ 8ರಂದು ಬೆಳಿಗ್ಗೆ ಸುಮಾರು 3.30ಕ್ಕೆ ಎಫ್‌ಐಆರ್ ದಾಖಲಾಗಿದ್ದು, ಅದೀಗ ಕೋರ್ಟ್‌ಗೆ ಬಿಟ್ಟ ವಿಷಯ. ಕೋರ್ಟ್ ಆದೇಶ ಹೊರಡಿಸುವ ಮುಂಚೆಯೇ ಈ ನಟರು ರಾಜಿ ಸಂಧಾನಕ್ಕೆ ಪ್ರಯತ್ನಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
ನಟರ ಹೇಳಿಕೆಗಳ ಕುರಿತು ಸಾಕ್ಷಿಗಳಿವೆ. ಇದು ನ್ಯಾಯಾಂಗ ನಿಂದನೆ ಆಗಿದೆ. ದೂರುದಾರರ ಮೇಲೆ ಒತ್ತಡ ಹಾಕುವುದು, ಕೇಸನ್ನು ಹಿಂದಕ್ಕೆ ಪಡೆಯುವಂತೆ ಬೆದರಿಕೆ ಹಾಕುವುದು ಇವೆಲ್ಲ ಅಪರಾಧ' ಎಂದು ಅವರು ತಿಳಿಸಿದ್ದಾರೆ.


Click it and Unblock the Notifications











