»   » ವೀಸಾ ಮೋಸ : ಪೊಲೀಸರ ಬಲೆಯಲ್ಲಿ ಚಿತ್ರನಟಿ

ವೀಸಾ ಮೋಸ : ಪೊಲೀಸರ ಬಲೆಯಲ್ಲಿ ಚಿತ್ರನಟಿ

Subscribe to Filmibeat Kannada

ಚೆನ್ನೈ, ಮಾ.13 : ತಮಿಳು, ತೆಲುಗು ಸಿನೆಮಾಗಳಲ್ಲಿ ಸ್ವಚ್ಛಂದ ಮೀನಿನಂತೆ ಈಜಾಡಿಕೊಂಡಿದ್ದ ಫ್ಲೋರಾ ಸೈನಿ ಎಂಬ ನಟಿ ಅಮೆರಿಕಾ ವೀಸಾ ಆಸೆಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಪೊಲೀಸರ ಬಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

ತನ್ನ ಮೇಕಪ್ ಕಲಾವಿದೆಯ ಪರವಾಗಿ ಸಲ್ಲಿಸಲಾಗಿದ್ದ ದಾಖಲೆಗಳು ನಕಲಿಯಾಗಿದ್ದು , ಅವುಗಳನ್ನು ಸೃಷ್ಟಿಸಲಾಗಿದೆ ಎಂದು ಎಂಬೆಸಿಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಅಮೆರಿಕಾ ಕನ್ಸುಲೇಟ್ ಅಧಿಕಾರಿಗಳು ನೀಡಿರುವ ದೂರಿನನ್ವಯ ಫ್ಲೋರಾ ಸೈನಿಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಗಾಯಕ ಸೋನಿ ನಿಗಂ ಜೊತೆ 'ಲವ್ ಇನ್ ನೇಪಾಳ್' ಚಿತ್ರದಲ್ಲಿ ನಟಿಸಿ ಹಿಂದಿ ಚಿತ್ರರಂಗದಿಂದ ರಿಜೆಕ್ಟ್ ಆಗಿದ್ದ ಫ್ಲೋರಾಳನ್ನು ಎಂದಿನಂತೆ ತಮಿಳು ಚಿತ್ರರಂಗ ಕೈಬೀಸಿ ಕರೆದಿತ್ತು. 'ಬೋಲ್ಡ್' ನೇಚರ್‌ದಿಂದಾಗಿ ತಮಿಳು ಮತ್ತು ತೆಲುಗಿನಲ್ಲಿ ಅನೇಕ ಅವಕಾಶಗಳು ಫ್ಲೋರಾಳನ್ನು ಹುಡುಕಿಕೊಂಡು ಬಂದಿದ್ದವು. ಊರಿಗೆ ಬಂದವಳು ನೀರಿಗೆ ಬರಲೇಬೇಕಲ್ಲ. ತಮಿಳಿಗೆ ಬಂದವಳೆ ಕನ್ನಡಕ್ಕೂ ಬಂದಳು. ಕೋದಂಡರಾಮ, ಗಿರಿ ಚಿತ್ರದಲ್ಲಿಯೂ ನಟಿಸಿದರೂ ಸೈನಿ ಸೈ ಎನ್ನಿಸಲಿಲ್ಲ. ಆಶಾ ಸೈನಿ ಎಂದೂ ಖ್ಯಾತಳಾಗಿರುವ ಈ 'ಮಯೂರಿ' ಸದ್ಯಕ್ಕೆ ಫ್ಲೋರಾ ಸೈನಿ ಎಂಬ ಹೆಸರಿನಲ್ಲಿ ಚಲಾವಣೆಯಲ್ಲಿದ್ದಾಳೆ.

ಕಳವಳಕಾರಿ ಸಂಗತಿಯೆಂದರೆ, ದಕ್ಷಿಣ ಭಾರತ ಚಿತ್ರರಂಗದ ಅನೇಕ ಕಲಾವಿದರು ವೀಸಾಗಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸುತ್ತಿರುವುದು. ಕಳೆದ ಕೆಲ ತಿಂಗಳಿನಿಂದ ಇಂಥ 200ಕ್ಕೂ ಹೆಚ್ಚಿನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎನ್ನುತ್ತಾರೆ ಕನ್ಸುಲೇಟ್ ಅಧಿಕಾರಿಗಳು. ಸದ್ಯದಲ್ಲೇ ಕರೆಯಲಾಗುವ ಪತ್ರಿಕಾಗೋಷ್ಠಿಯಲ್ಲಿ ಎಲ್ಲರ ಹೆಸರುಗಳನ್ನು ಬಹಿರಂಗಪಡಿಸಲಾಗುವುದು ಎಂದು ಕನ್ಸುಲೇಟ್ ಅಧಿಕಾರಿಗಳು ಹೇಳಿದ್ದಾರೆ.

(ಏಜೆನ್ಸೀಸ್)

ಜಲಕ್ರೀಡೆಯಾಡುತ್ತಿರುವ ಮಯೂರಿ ಅಕಾ ಫ್ಲೋರಾ ಸೈನಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada