For Quick Alerts
ALLOW NOTIFICATIONS  
For Daily Alerts

ಪತ್ನಿ ಮೇಲೆ ಹಲ್ಲೆ ಮಾಡಿ ಒರಟ ಪ್ರಶಾಂತ್ ಪರಾರಿ?!

|
<ul id="pagination-digg"><li class="next"><a href="/gossips/13-actor-orata-prashanth-marriage-on-the-rocks-aid0172.html">Next »</a></li></ul>

ಪತ್ನಿಗೆ ಕಿರುಕುಳ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ. ದರ್ಶನ್ ಪ್ರಕರಣ ಸುಖಾಂತ್ಯ ಕಾಣುತ್ತಿದ್ದಂತೆ ಈಗ ನಾಯಕ ನಟ ಪ್ರಶಾಂತ್ ಸರದಿ. 'ಒರಟ ಐ ಲವ್ ಯೂ' ಚಿತ್ರದ ಮೂಲಕ ನಾಯಕನಟ ಅನ್ನಿಸಿಕೊಂಡಿರುವ ಈ 'ಒರಟ ಪ್ರಶಾಂತ್' ವಿರುದ್ಧ ಅವರ ಪತ್ನಿ ಶಶಿರೇಖಾ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ನಟ ದರ್ಶನ್ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಂತೆ ಇದೀಗ ಪ್ರಶಾಂತ್ ಹೆಸರು ಕೇಳಿ ಬರುತ್ತಿರುವುದು ಕನ್ನಡ ಚಿತ್ರರಂಗದ ನಾಯಕರತ್ತ ಎಲ್ಲರ ಚಿತ್ತ ಹೊರಳುವಂತಾಗಿದೆ. ಒಂದಾದಮೇಲೊಂದರಂತೆ ಪ್ರಕರಣ ಬೆಳಕಿಗೆ ಬರಲಿದೆಯೇ ಎಂಬ ಸಂದೇಹ ಮೂಡಿದೆ.

"ಪತಿ ಪ್ರಶಾಂತ್ ವರದಕ್ಷಣೆ ಕಿರುಕುಳ ಅಲ್ಲದೇ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ವಿವಾಹದ ಖರ್ಚುವೆಚ್ಚ, ವರದಕ್ಷಿಣೆ ಸೇರಿ ರು. 10 ಲಕ್ಷ ತರುವಂತೆ ಒತ್ತಾಯಿಸುತ್ತಿದ್ದರು. ಅವರಿಗಿಷ್ಟ ಬಂದಾಗ ಮನೆಗೆ ಬರುತ್ತಿದ್ದರು. ಜಗಳ ಮಾಡಿ ಹೊಡೆದು ರಂಪ ಮಾಡುತ್ತಿದ್ದರು" ಎಂದು ಪತ್ನಿ ಶಶಿರೇಖಾ ನೀಡಿರುವ ದೂರಿನಲ್ಲಿ ದಾಖಲಾಗಿದೆ.

"ತಾನು ತವರಿನಿಂದ ಹಣ ತರಲು ಒಪ್ಪದಿರುವುದರಿಂದ ಇದೀಗ ಮನೆಗೇ ಸರಿಯಾಗಿ ಬರುತ್ತಿಲ್ಲ. ಈಗ ಅಕ್ಟೋಬರ್ 1ರಿಂದ ನಾಪತ್ತೆಯಾಗಿದ್ದಾರೆ ಹಾಗೂ ದೂರವಾಣಿ ಕರೆಮಾಡಿ ಜೀವಬೆದರಿಕೆ ನೀಡುತ್ತಿದ್ದಾರೆ. ಜೀವಭಯವಿರುವ ನನಗೆ ರಕ್ಷಣೆ ನೀಡಿ" ಎಂದು ಶಶಿರೇಖಾ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.

"ಮಗ ಜನಿಸಿದ ನಂತರ ಸರಿಯಾಗಿ ಮನಗೇ ಬರುತ್ತಿಲ್ಲ. ನಿರ್ಮಾಪಕ ಹಾಗೂ ನಿರ್ದೇಶಕ ಆಗುತ್ತಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಶೂಟಿಂಗ್ ನೆಪದಲ್ಲಿ ಸದಾ ಹೊರಗೇ ಇರುತ್ತಾರೆ, ಬೇರೆಯವರೊಂದಿಗೆ ಪ್ರವಾಸ ಹೋಗುತ್ತಾರೆ. ಅಲ್ಲಿ ಇಲ್ಲಿ ಕೆಲಸವಿಲ್ಲದಿದ್ದರೂ ಅಲೆದಾಡುತ್ತಾರೆ. ಒಟ್ಟಿನಲ್ಲಿ ಮನೆಯಿಂದ ಆಚೆ ಇರುತ್ತಾರೆ" ಎಂದಿದ್ದಾರೆ ಶಶಿರೇಖಾ.

"ತಾನು ನಿರ್ಮಾಪಕ ಎಂದು ಹೇಳಿಕೊಂಡು 'ಫೇಸ್ ಬುಕ್' ಮೂಲಕ ಅವರ ಅಭಿಮಾನಿ ಯುವತಿಯರನ್ನು ಪರಿಚಯ ಮಾಡಿಕೊಂಡು ಅವರನ್ನು ನಟಿಯರನ್ನಾಗಿ ಮಾಡುತ್ತೇನೆಂದು ಹೇಳಿ ಸುತ್ತಾಡಿಸಿ ಮನೆಗೆ ಕರೆದುಕೊಂಡು ಬರುತ್ತಿದ್ದರು. ಇವರಿಂದ ಮೋಸಹೋದ ಯುವತಿಯೊಬ್ಬಳು ಆತ್ಮಹತ್ಯೆಗೂ ಯತ್ನಿಸಿದ್ದಾಳೆ. ಅದನ್ನೆಲ್ಲಾ ಪ್ರಶ್ನಿಸಿದ ನನಗೆ ಹಲ್ಲೆ ಮಾಡಲಾಗಿದೆ" ಎಂಬುದು ಶಶಿರೇಖಾ ಹೇಳಿಕೆ.

<ul id="pagination-digg"><li class="next"><a href="/gossips/13-actor-orata-prashanth-marriage-on-the-rocks-aid0172.html">Next »</a></li></ul>

English summary
Kannada Movie Hero Orata Fame Prashanth has been filed now under a Domestic Violence Act. His Wife Shashirekha gave a complaint on her Husband, Actor Prashanth. He is Forcing for Dowry and Torches as she told in her sentence.&#13; &#13;

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more