»   »  ಪ್ರೇಮ್ ಕಹಾನಿ ಹಿಂದಿ ಶೀರ್ಷಿಕೆ ಬಗ್ಗೆ ಆಕ್ಷೇಪ

ಪ್ರೇಮ್ ಕಹಾನಿ ಹಿಂದಿ ಶೀರ್ಷಿಕೆ ಬಗ್ಗೆ ಆಕ್ಷೇಪ

Subscribe to Filmibeat Kannada
Tajmahal Chandru
ಕನ್ನಡ ಚಿತ್ರಕ್ಕೆ 'ಪ್ರೇಮ್ ಕಹಾನಿ' ಎಂದು ಹಿಂದಿ ಶೀರ್ಷಿಕೆ ಇಟ್ಟಿರುವ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಕ್ಷೇಪಣೆ ವ್ಯಕ್ತಪಡಿಸಿದೆ.ಪ್ರೇಮ್ ಕಹಾನಿ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದ್ದು ಚಲನಚಿತ್ರ ವಾಣಿಜ್ಯ ಮಂಡಳಿಯ ಆಕ್ಷೇಪಕ್ಕೆ ನಿರ್ದೇಶಕ ತಾಜ್ ಮಹಲ್ ಚಂದ್ರು ಸೇರಿದಂತೆ ನಿರ್ಮಾಪಕರು ಬೇಸರಗೊಂಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳು ' ಪ್ರೇಮ್ ಕಹಾನಿ' ಚಿತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ. ಬಳ್ಳಾರಿ ಗಣಿ ಧಣಿಗಳಾದ ಕೆ.ಎಂ.ವಿಶ್ವನಾಥ್ ಮತ್ತು ಜಿ.ರವಿಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿರುವುದು ಗೊತ್ತೇ ಇದೆ. ಪ್ರೇಮ್ ಕಹಾನಿ ಚಿತ್ರದ ಶೀರ್ಷಿಕೆಯನ್ನು ಈಗ ಅನಿವಾರ್ಯವಾಗಿ ಬದಲಾಯಿಸುವ ಪರಿಸ್ಥಿತಿ ಉದ್ಭವಿಸಿದೆ.

ಪ್ರೇಮ್ ಕಹಾನಿ ಚಿತ್ರ ಇಳಯರಾಜ ಸಂಗೀತ, ಕೆ.ಎಂ.ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸವನ್ನು ಒಳಗೊಂಡಿದೆ. ನೃತ್ಯ ಸಂಯೋಜನೆ ಮದನ್ ಹರಿಣಿ, ರಘು, ಇಮ್ರಾನ್ ಮತ್ತು ಹರ್ಷ. ಚಿತ್ರ ಸಾಹಿತಿ ಕೆ.ಕಲ್ಯಾಣ್, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಅವರ ಸಾಹಿತ್ಯ ಪ್ರೇಮ್ ಕಹಾನಿ ಚಿತ್ರಕ್ಕಿದೆ. ಅಜಯ್, ಶೀಲಾ, ರಂಗಯಾಣ ರಘು, ರಾಜೇಶ್, ಸುಧಾ ಬೆಳವಾಡಿ, ಲೋಕನಾಥ್, ಮೈಕೊ ನಾಗರಾಜ್, ಟೆನ್ನಿಸ್ ಕೃಷ್ಣ ಚಿತ್ರದ ಪಾತ್ರಧಾರಿಗಳು. ವಿಶೇಷ ಪಾತ್ರದಲ್ಲಿ ಮಹಾಲಕ್ಷ್ಮಿ ಬಡಾವಣೆ ಹಾಲಿ ಶಾಸಕ ನೆ.ಲ.ನರೇಂದ್ರ ಬಾಬು ನಟಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪ್ರೇಮ್ ಕಹಾನಿಯಲ್ಲಿ ಮಹಾಲಕ್ಷ್ಮಿಲೇಔಟ್ ಶಾಸಕ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada