»   »  ಜಗದ್ಗುರುವನ್ನು ಕಡೆಗಣಿಸಿದ ಆಯ್ಕೆ ಸಮಿತಿ

ಜಗದ್ಗುರುವನ್ನು ಕಡೆಗಣಿಸಿದ ಆಯ್ಕೆ ಸಮಿತಿ

Posted By:
Subscribe to Filmibeat Kannada

ಜಗದ್ಗುರು ಶ್ರೀ ರೇಣುಕಾಚಾರ್ಯ ಮಹಾತ್ಮೆ ಚಿತ್ರವನ್ನು ಪ್ರಶಸ್ತಿಗೆ ಆಯ್ಕೆ ಮಾಡದಿರುವ ಬಗ್ಗೆ ಶ್ರೀರೇಣುಕಾ ಪ್ರೊಡಕ್ಷನ್ಸ್ ಸಂಸ್ಥೆ ತೀವ್ರ ಬೇಸರ ವ್ಯಕ್ತಪಡಿಸಿದೆ. 2007-08ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಆಯ್ಕೆ ಕ್ರಮವನ್ನು ಜಗದ್ಗುರು ಶ್ರೀ ರೇಣುಕಾಚಾರ್ಯ ಮಹಾತ್ಮೆ ಚಿತ್ರತಂಡಟೀಕಿಸಿದೆ.

ಜಗದ್ಗುರು ಶ್ರೀ ರೇಣುಕಾಚಾರ್ಯ ಮಾಹಾತ್ಮೆ ಚಿತ್ರವು ಸದಭಿರುಚಿಯ ಸಾಮಾಜಿಕ ಕಳಕಳಿಯುಳ್ಳ ಚಿತ್ರವಾಗಿದೆ. ಇಂತಹ ಉತ್ತಮ ಚಿತ್ರವನ್ನು ಪ್ರಶಸ್ತಿಗೆ ಆಯ್ಕೆ ಮಾಡದಿರುವ ಬಗ್ಗೆ ನಮ್ಮ ಚಿತ್ರತಂಡಕ್ಕ್ಕೆ ನೋವುಂಟಾಗಿದೆ. ಹೀಗೆಂದು ಜಗದ್ಗುರು ಶ್ರೀ ರೇಣುಕಾಚಾರ್ಯ ಮಹಾತ್ಮೆ ಚಿತ್ರದ ನಿರ್ಮಾಪಕ ರುದ್ರ ಪ್ರಕಾಶ್ ಮತ್ತು ನಿರ್ದೇಶಕ ಬಿ.ಎ.ಓಂಕಾರ್ ಅವರು ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ.

ಲಾಂಗು, ಮಚ್ಚ್ಚು, ಕೊಚ್ಚು ಚಿತ್ರಗಳನ್ನು ಪ್ರೋತ್ಸಾಹಿಸುವುದನ್ನು ಬಿಡಬೇಕು. ಸದಭಿರುಚಿಯ, ಮೌಲ್ಯಾಧಾರಿತ, ಸಾಮಾಜಿಕ ಕಳಕಳಿಯ, ಧಾರ್ಮಿಕ ಚಲನ ಚಿತ್ರಗಳನ್ನು ಪ್ರೊತ್ಸಾಹಿಸಬೇಕು ಎಂದು ಓಂಕಾರ್ ಮನವಿ ಮಾಡಿಕೊಂಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಪೂರಕ ಓದಿಗೆ

ಇದು ಮೂರನೆ ದರ್ಜೆ ಪ್ರಶಸ್ತಿ: ಚಂದ್ರು ಮಂಜು
ಅಗ್ನಿ ಶ್ರೀಧರ್ ಮತ್ತು ಮಂಜುರಿಂದ ಪ್ರಶಸ್ತಿ ತಿರಸ್ಕಾರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada