ಲಲಿತ್ ಮೋದಿ ಜೊತೆ ಸುಷ್ಮಿತಾ ಸೇನ್ ಕಣ್ಣಾಮುಚ್ಚಾಲೆ
ಈಗೇನಿದ್ದರೂ ಮದುವೆಯಾಗಿ ಮಕ್ಕಳನ್ನು ಹೆರುವುದಕ್ಕಿಂತ ಹೆಚ್ಚಾಗಿ ಪ್ರೇಮಿಗಳು ಸಹ ಜೀವನಕ್ಕೆ (ಲಿವ್ ಇನ್) ಹೆಚ್ಚು ಒತ್ತು ಕೊಡುತ್ತಿದ್ದಾರೆ. ಕೆಲವು ನಟ, ನಟಿಯರು ಈಗಾಗಲೆ ಲಿವ್ ಇನ್ ಸಂಬಂಧಕ್ಕೆ ನಾಂದಿ ಹಾಡಿದ್ದೂ ಆಗಿದೆ. ಜಾನ್ ಅಬ್ರಹಾಂ ಮತ್ತು ಬಿಪಶಾ ಬಸು, ಕರೀನಾ ಕಪೂರ್ ಮತ್ತು ಸೈಫ್ ಆಲಿಖಾನ್ ರನ್ನು ಉದಾಹರಿಸಬಹುದು.
ಈ ಸಾಲಿಗೆ ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ಸಹ ಸೇರ್ಪಡೆಯಾಗಿದ್ದಾರೆ. ಪಾಕ್ ಮಾಜಿ ಕ್ರಿಕೆಟಿಗೆ ವಾಸಿಂ ಅಕ್ರಂ ಜೊತೆಗೆ ಈಕೆಯ ಸಂಬಂಧ ಗುಟ್ಟಾಗಿ ಉಳಿದಿಲ್ಲ. ಆದರೆ ಈಗ ಇದ್ದಕ್ಕಿದ್ದಂತೆ ಸುಷ್ಮಿತಾ ಸೇನ್ ಗೆ ಐಪಿಎಲ್ ಚೇರಮನ್ ಸ್ಥಾನದಿಂದ ಅಮಾನತುಗೊಂಡಿರುವ ಲಲಿತ್ ಮೋದಿ ಮೇಲೆ ಕಣ್ಣುಬಿದ್ದಿದೆ.
ಮೋದಿ ಜೊತೆ ಈಗಾಗಲೆ ಡೇಟಿಂಗ್ ನಲ್ಲಿ ಈಕೆ ಬ್ಯುಸಿಯಾಗಿರುವುದಾಗಿ ಸುದ್ದಿಯಾಗಿದೆ. ಈ ವಿಷಯ ವಾಸಿಂ ಅಕ್ರಂ ಕಿವಿಗೂ ಬಿದ್ದು ಆತನ ಪಿತ್ತ ನೆತ್ತಿಗೇರಿದೆ ಎಂಬುದು ಬಾಲಿವುಡ್ ತಾಜಾ ಸಮಾಚಾರ. ಸುಷ್ಮಿತಾ ಸೇನ್ ಅವರ ತ್ರಿಕೋನ ಪ್ರೇಮಕಥೆಯ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ.
ಸುಷ್ಮಿತಾ ಸೇನ್ ಲಲಿತ್ ಮೋದಿ ಲಿವ್ ಇನ್ ವಾಸಿಂ ಅಕ್ರಂ ಬಾಲಿವುಡ್ sushmita sen lalit modi bollywood wasim akram live in


Click it and Unblock the Notifications