»   » ಕದಡಿದ ನೀರಿನಲ್ಲಿ ಚಿತ್ರವಿಚಿತ್ರಅಲೆಗಳು

ಕದಡಿದ ನೀರಿನಲ್ಲಿ ಚಿತ್ರವಿಚಿತ್ರಅಲೆಗಳು

Subscribe to Filmibeat Kannada

ಬೆಂಗಳೂರು : ಕನ್ನಡ ಚಿತ್ರೋದ್ಯಮದಲ್ಲಿನ ಕದಡಿದ ವಾತಾವರಣ ತಿಳಿಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಅಶ್ಚರ್ಯಕರ ಬೆಳವಣಿಗೆಯಲ್ಲಿ ಕರ್ನಾಟಕ ಚಿತ್ರಮಂದಿರಗಳ ಮಾಲೀಕರ ಸಂಘ ವಿಸರ್ಜನೆಗೊಂಡಿದೆ.

ಹೀಗಾಗಿ ಜೆಡಿಎಸ್‌ನ ಕುಮಾರ ಸ್ವಾಮಿ ಬದಿಗೆ ಸರಿದಿದ್ದರೆ, ಕಾಂಗ್ರೆಸ್‌ನ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಕನ್ನಡ ಪರ ಚಳವಳಿಗೆ ಪ್ರವೇಶಿಸಿದ್ದಾರೆ. ಇತ್ತ ಕನ್ನಡ ನಿರ್ಮಾಪಕರ ಸಂಘ ಬಲಗೊಳ್ಳುತ್ತಿದೆ. ಚಿತ್ರಮಾಲೀಕರ ಸಂಘದ ನೂತನ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿಯವರ ಗೊಂದಲದ ಹೇಳಿಕೆಗಳಿಂದ ಸಂಘ ತನ್ನ ವಿಸ್ವಾಸಾರ್ಹತೆ ಕಳೆದು ಕೊಂಡಿರುವುದರಿಂದ ಸಂಘವನ್ನು ವಿಸರ್ಜನೆ ಮಾಡಲಾಗಿದೆ ಎಂದು ಸಂಘದ ಕಾರ್ಯದರ್ಶಿ ಧನಂಜಯಕುಮಾರ್‌ ತಿಳಿಸಿದ್ದಾರೆ.

ಕನ್ನಡದ ಬಲ : ನಗರದಲ್ಲಿ ಭಾನುವಾರ ನಡೆದ ಕನ್ನಡ ಚಿತ್ರ ನಿರ್ಮಾಪಕರು, ನಿರ್ದೇಶಕರು, ಕಲಾವಿದರ ಸಭೆಯಲ್ಲಿ ಗೋಕಾಕ್‌ ಮಾದರಿ ಚಳವಳಿಯ ರೂಪುರೇಷೆಗಳ ಬಗೆಗೆ ಚರ್ಚೆ ನಡೆದಿದೆ. ಪರಿಸ್ಥಿತಿಯ ತೀವ್ರತೆ ಗಮನಿಸಿ ಹೋರಾಟ ಅನಿವಾರ್ಯವಾದರೆ, ಎಲ್ಲರೂ ಕೈಜೋಡಿಸುವ ಒಮ್ಮತ ತೀರ್ಮಾನ ಸಭೆಯಲ್ಲಿ ಮೂಡಿದೆ.

ಪಾರ್ವತಮ್ಮ ರಾಜ್‌ಕುಮಾರ್‌, ವಿಷ್ಣು ವರ್ಧನ್‌, ರವಿಚಂದ್ರನ್‌, ಅಂಬರೀಷ್‌, ಉಪೇಂದ್ರ , ಜಯಂತಿ, ರಾಜೇಂದ್ರಸಿಂಗ್‌ ಬಾಬು, ಬಸಂತ್‌ ಕುಮಾರ್‌ ಪಾಟೀಲ್‌, ಟಿ.ಎಸ್‌.ನಾಗಾಭರಣ ಸೇರಿದಂತೆ ಕನ್ನಡ ಚಿತ್ರೋದ್ಯಮದ ಗಣ್ಯರು ಬಲಪ್ರದರ್ಶನಕ್ಕೆ ನಿಂತವರಂತೆ ಸಭೆಯಲ್ಲಿ ಭಾಗವಹಿಸಿದ್ದರು.

ಸಣ್ಣ ಕಿರಿಕಿರಿ : ಸೇವಾ ಶುಲ್ಕ, ವಿದ್ಯುತ್‌ ಶುಲ್ಕ ರಿಯಾಯಿತಿ ಮತ್ತಿತರ ಬೇಡಿಕೆಗಳಿಗೆ ಸರಕಾರ ಸ್ಪಂದಿಸುವ ತನಕ, ಹೊಸ ಕನ್ನಡ ಹಾಗೂ ಪರಭಾಷಾ ಚಿತ್ರಗಳನ್ನು ಬಿಡುಗಡೆ ಮಾಡದಿರುವ ನಿರ್ಧಾರ ಮುಂದುವರೆಸುವುದಾಗಿ ಕರ್ನಾಟಕ ರಾಜ್ಯ ಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಓದು ಗೌಡ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ಬಿಕ್ಕಟ್ಟು ಗಳ ಚರ್ಚಿಸಲು ಸರಕಾರದ ಉನ್ನತ ಸಮಿತಿ ಸಭೆ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಪಿ.ಪಾಂಡೆ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಲಿದೆ.

(ಇನ್ಫೋ ವಾರ್ತೆ)


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada