‘ಮಾಸ್ತಿ’ ಅಲ್ಲ ‘ಮಸ್ತಿ’! : ನಿಮ್ಮ ಅಭ್ಯಂತರವಿಲ್ಲ ತಾನೇ?
‘ಮಾಸ್ತಿ’ ಎಂಬ ಹೆಸರಲ್ಲಿ ರೌಡಿಸಂ ಕಥೆಯುಳ್ಳ ಚಿತ್ರ ನಿರ್ಮಿಸಲು ನಡೆಸಿದ ಯತ್ನಕ್ಕೆ ರಾಜ್ಯಾದ್ಯಂತ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆಸರನ್ನು ಹಿಂದೆ ಪಡೆಯಲಾಗಿತ್ತು. ಇದೀಗ ಅಲ್ಪ ಬದಲಾವಣೆಯಾಂದಿಗೆ ‘ಮಸ್ತಿ’ ಎಂದು ಹೆಸರಿಡಲಾಗಿದೆ.
ಚಿತ್ರದ ನಿರ್ದೇಶಕ ಶಿವಮಣಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಚಿತ್ರದ ಹೆಸರು ಬದಲಾಯಿಸುವ ಕುರಿತು ಕನ್ನಡ ಚಲನಚಿತ್ರ ಅಭಿಮಾನಿಗಳ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಬಹುತೇಕ ಅಭಿಮಾನಿಗಳು ಮಸ್ತಿ ಎಂಬ ಹೆಸರಿಡಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಮಸ್ತಿ ಎಂಬ ಹೆಸರನ್ನೇ ಅಂತಿಮಗೊಳಿಸಲಾಗಿದೆ ಎಂದು ವಿವರಿಸಿದರು.
ಪತ್ರಿಕೆಗಳಲ್ಲಿ ಜಾಹೀರಾತಿನ ಮೂಲಕ ಅಭಿಪ್ರಾಯ ಕೇಳಲಾಗಿತ್ತು. ಬಹುತೇಕ ಅಭಿಮಾನಿಗಳು ಹಳೆಯ ಹೆಸರಿನೊಂದಿಗೆ ಹೊಸ ಹೆಸರು ಸ್ವಲ್ಪವಾದರೂ ಸಂಬಂಧ ಹೊಂದಿರಲಿ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ರಾಮು ಎಂಟರ್‌ಪ್ರೆೃಸಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಉಪೇಂದ್ರ ನಾಯಕರಾಗಿದ್ದು, ಜೋಗಿ ಚಿತ್ರದ ಮೂಲಕ ಕನ್ನಡಿಗರ ಗಮನ ಸೆಳೆದ ಜೆನ್ನಿಫರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











