ಪತ್ನಿ ಲಕ್ಷ್ಮಿ ಕೈ ಕೊಟ್ರೆ ಬಾಸ್ ದರ್ಶನ್ ಗೆ ಚಿಪ್ಪೇ ಗತಿ

ಕುಟುಂಬ ಕಲಹ ಎಪಿಸೋಡು ತಾರಕ್ಕೇರಿದಾಗ ಪೊಲೀಸ್ ಠಾಣೆ ಏರಿ ದರ್ಶನ್ ವಿರುದ್ಧ ದೂರು ದಾಖಲಿಸಿದ್ದ ವಿಜಯಲಕ್ಷ್ಮಿ, ನನ್ನ ಹೆಸರಿನಲ್ಲಿರುವ ಆಸ್ತಿಯನ್ನು ಅವರ ಹೆಸರಿಗೆ ವರ್ಗಾಯಿಸುವಂತೆ ಕೇಳಿದ್ದಾರೆ ಎಂದಿದ್ದರು.
ದರ್ಶನ್ ತಲೆ ಮೇಲೆ ನಿರ್ಮಾಪಕರು ಹೇಗೆ 30-35 ಕೋಟಿ ರು ಸುರಿದಿದ್ದಾರೆ. ಒಂದು ಪಕ್ಷ ದರ್ಶನ್ ಗೆ ಜೈಲೇ ಖಾಯಂ ವಾಸಸ್ಥಾನವಾದರೆ(ಶಸ್ತ್ರಾಸ್ತ್ರ ಕಾಯ್ದೆ ವಾದ ಬಲವಾದರೆ 7 ವರ್ಷ ಅಂದರ್) 35 ಪ್ಲಸ್ ಕೋಟಿ ರು ನಷ್ಟವಾಗುತ್ತದೆ.
ಪತ್ನಿ ಜತೆ ಸರಿಯಾಗಿ ಸಂಧಾನವಾಗದಿದ್ದರೆ, ವಿಜಯಲಕ್ಷ್ಮಿ ಹೆಸರಿನಲ್ಲಿರುವ 20 ಕೋಟಿ ರು ಆಸ್ತಿ ಕೈ ತಪ್ಪುತ್ತದೆ. ಆಗ ದರ್ಶನ್ ಪಾಲಿಗೆ ಉಳಿಯುವುದು ತಾನು ಪ್ರೀತಿಯಿಂದ ಸಾಕಿದ ಪ್ರಾಣಿಗಳು ಹಾಗೂ ಕಾರುಗಳು ಮಾತ್ರ.
ಅಣ್ಣ ದಿನಕರ ಬಾಡಿಗೆ ಮನೆಯಲ್ಲಿದ್ದಾನೆ. ಅಮ್ಮ ಮೀನಾ ಮೈಸೂರು ಮನೆಯಲ್ಲಿರುತ್ತಾರೆ. ಹೆಂಡತಿ ಹೆಸರಿನಲ್ಲಿರುವ ಮನೆಗೆ ಯಾವ ಧೈರ್ಯದ ಮೇಲೆ ದರ್ಶನ್ ಕಾಲಿಡುತ್ತಾನೋ ಗೊತ್ತಿಲ್ಲ.
ಇಬ್ಬರ ಜಗಳ ಮುಗಿದು, ಎಲ್ಲವೂ ಸುಖಾಂತ್ಯವಾಗಲಿ. ವಿಜಯಲಕ್ಷ್ಮಿ ಆಸ್ತಿ ವಿವರದತ್ತ ಒಮ್ಮೆ ಕಣ್ಣಾಡಿಸಿ:
* ಎರಡು 50 X80 ಚ.ಅ. ನಿವೇಶನ ಎಚ್ ಎಸ್ ಆರ್ ಲೇಔಟ್
* ರಾಜಾಜಿನಗರದಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಡ(ತಿಂಗಳಿಗೆ 5 ಲಕ್ಷ ಬಾಡಿಗೆ ಬರುತ್ತಿದೆ)
* ನಾಗರಬಾವಿಯಲ್ಲಿ ಮನೆ
* ಟೀ ನರಸೀಪುರದಲ್ಲಿ 15 ಎಕರೆ ತೋಟ.
ರಾಜರಾಜೇಶ್ವರಿ ನಗರದಲ್ಲಿ ಸದ್ಯ ವಾಸವಿರುವ 60 X40 ಚ.ಅ ಮನೆ ಮಾತ್ರ ದರ್ಶನ್ ಹೆಸರಿನಲ್ಲಿ ನೋಂದಣಿಯಾಗಿದೆ.
ಉಳಿದಂತೆ ಸಿನಿಮಾ ಪರಿಕರಗಳು, ಶೂಟಿಂಗ್ ಯೂನಿಟ್ ಸೆಟ್ ಎಲ್ಲಕ್ಕೂ ಅಣ್ಣ ದಿನಕರ್ ತೂಗುದೀಪ ಹಾಗೂ ತಾಯಿ ಮೀನಾ ತೂಗುದೀಪ ಜಂಟಿ ಮಾಲೀಕರಾಗಿದ್ದಾರೆ.
ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿ ತಂದೆ ಬಿಟ್ಟು ಹೋದ ಮನೆ ತಾಯಿ ಮೀನಾ ಅವರ ಹೆಸರಿನಲ್ಲಿದೆ.
ಎಲ್ಲಾ ಅಂಶಗಳನ್ನು ಗಮನಿಸಿದರೆ ಹೆಂಡತಿ ಜೊತೆ ಕದನಕ್ಕಿಳಿಯುವುದಕ್ಕಿಂತ ಕಾಂಪರ್ ಆಗುವುದೇ ಉತ್ತಮ ಎಂದು ದರ್ಶನ್ ಗೆ ಅನಿಸಿದೆ. ಹಾಗಾಗಿ ವಿಜಯಲಕ್ಷ್ಮಿ ಹಾಕಿದ ಕಂಡೀಷನ್ಸ್ ಗೆಲ್ಲಾ ದೂಸ್ರಾ ಮಾತಾಡದೆ ಒಪ್ಪಿದ್ದಾರೆ.
ಹೇಗಿದ್ದ ಹೇಗಾದ ನಮ್ಮ ದಾಸ: ಜನುಮದ ಜೋಡಿ ಚಿತ್ರದಲ್ಲಿ ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ದವನು, ಸಿರಿಯಲ್ ಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದವನು ಮಜೆಸ್ಟಿಕ್ ಚಿತ್ರದ ನಂತರ ದೊಡ್ಡ ಸ್ಟಾರ್ ಆಗಿಬಿಟ್ಟ. ಬಿ.ಟಿಎಂ ಲೇಔಟ್ ನಲ್ಲಿದ್ದ ಮನೆಗೆ ನಿರ್ಮಾಪಕ ಬಾಮಾ ಹರೀಶ್ ಅಡ್ವಾನ್ಸ್ ಕೊಟ್ಟಿದ್ದರು.
ಲೂನಾ, ಅಪ್ಪನ ಕಾಂಟೆಸ್ಸಾ ಕಾರಿನಲ್ಲಿ ಓಡಾಡುತ್ತಿದ್ದ ದರ್ಶನ್, ಪೆಟ್ರೋಲ್ ಹಾಕಿಸಲು ಆಗದೆ ಪರದಾಡುತ್ತಿದ್ದಾಗ ಸ್ನೇಹಿತರು ಕೈ ಹಿಡಿದಿದ್ದರು.
ನಂತರ ಅದೇ ದರ್ಶನ್ ಹಮ್ಮರ್ ಹತ್ತಿದ ಹಮ್ಮೀರ ಎನಿಸಿಕೊಂಡ. ಕಲಾಸಿಪಾಳ್ಯ ನಂತರ ಲಕ್ಷ ಲಕ್ಷ ಸಂಭಾವನೆ ಎಣಿಸತೊಡಗಿದ ದರ್ಶನ್ ಸ್ವಭಾತಃ ಕೆಟ್ಟ ವ್ಯಕ್ತಿಯಲ್ಲ.
ಆದರೆ ಸಭ್ಯ ಖಳ ನಟ ಶ್ರೀನಿವಾಸ್ ಪುತ್ರನಾಗಿ ದರ್ಶನನ ವಿರಾಟ ರೂಪ ಸಹಿಸಲು ಸಾಧ್ಯವಾಗುತ್ತಿಲ್ಲ.


Click it and Unblock the Notifications











