ನಟ ದರ್ಶನ್ ಬಗ್ಗೆ ಆರ್ಯವರ್ಧನ್ ಸಂಖ್ಯಾಶಾಸ್ತ್ರ
ಕವಡೆ ಶಾಸ್ತ್ರ, ಗಿಳಿ ಶಾಸ್ತ್ರ, ಇಲಿ ಶಾಸ್ತ್ರ, ಹಸ್ತ ಸಾಮುದ್ರಿಕೆ ಮುಂತಾದ ಜ್ಯೋತಿಷ್ಯ ಸಂಬಂಧಿ ಶಾಸ್ತ್ರಗಳಿಗಿಂತಲೂ ಹೆಚ್ಚಾಗಿ ಜನ ಸಂಖ್ಯಾಶಾಸ್ತ್ರದ ಕಡೆ ಒಲವು ತೋರಿಸುತ್ತಿದ್ದಾರೆ. ಈಗಾಗಲೆ ಸುವರ್ಣ ಹಾಗೂ ಸಮಯ ವಾಹಿನಿಯಲ್ಲಿ ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಹಲವು ಕರಾವಕ್ಕಾದ ಭವಿಷ್ಯಗಳನ್ನು ನುಡಿದಿದ್ದಾರೆ.
ಅವಧಿಗೆ ಮುನ್ನವೇ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುವ, ಮಂತ್ರಾಲಯ ಮಠ ನೀರಿನಲ್ಲಿ ಮುಳುಗುವ ಭವಿಷ್ಯವನ್ನು ಇವರು ನುಡಿದಿದ್ದರು. ಜನನ ದಿನಾಂಕ, ತಿಂಗಳು ಹಾಗೂ ವರ್ಷ ಕೂಡಿದಾಗ 9 ಸಂಖ್ಯೆ ಬಂದರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಆರ್ಯವರ್ಧನ. ವೈಎಸ್ ರಾಜಶೇಖರ ರೆಡ್ಡಿ ದುರಂತ ಸಾವಿಗೀಡಾಗಿದ್ದು, ಜನಾರ್ದನ ರೆಡ್ಡಿ ಜೈಲು ಸೇರಿದ್ದು ಇವೆಲ್ಲಾ ಘಟನೆಗಳು ನಡೆದದ್ದು ಬಹುತೇಕ 9ನೇ ದಿನಾಂಕಗಳಂದೇ.
ಈಗ ನೇರವಾಗಿ ವಿಷಯಕ್ಕೆ ಬರೋಣ. ನಟ ದರ್ಶನ್ ಜನ್ಮ ದಿನಾಂಕ 16.02.1977. ಈ ಅಂಕಿಗಳನ್ನು ಕೂಡಿದರೆ 33 ಬರುತ್ತದೆ. ಇಂತಹವರಿಗೆ ತುಂಬಾ ಹಣ ಮಾಡುವ ಯೋಗವಿದೆಯಂತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನ ಸಂಖ್ಯೆ ಲೆಕ್ಕಹಾಕಿದರೆ ಸಂಖ್ಯಾಶಾಸ್ತ್ರದ ಪ್ರಕಾರ ಒಂದು ಬರುತ್ತದೆ. ಆತನ ಮನೆ ನಂಬರ್ 217. ಅದನ್ನು ಕೂಡಿದರೆ ನಮ್ಮ ಲೆಕ್ಕಾಚಾರದ ಪ್ರಕಾರ ಒಂದು ಬರುತ್ತದೆ.


Click it and Unblock the Notifications











