ಶ್ರೀನಗರ ಕಿಟ್ಟಿ ಚಿತ್ರಕ್ಕೆ ಶುಭ ಮಂಗಳ ಹಾಡಿದ ರಮ್ಯಾ
ಶ್ರೀನಗರ ಕಿಟ್ಟಿ ಜೊತೆ ತಾನು ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎಂದು ಗೋಲ್ಡನ್ ಗರ್ಲ್ ರಮ್ಯಾ ಸ್ಪಷ್ಟಪಡಿಸಿದ್ದಾರೆ. ತಮ್ಮ ಚಿತ್ರದ ಪ್ರಚಾರಕ್ಕಾಗಿ ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದನ್ನು ದಯವಿಟ್ಟು ನಂಬಬೇಡಿ ಎಂದು ತಮ್ಮ ಅಭಿಮಾನಿಗಳಲ್ಲಿ ರಮ್ಯಾ ವಿನಂತಿಸಿಕೊಂಡಿದ್ದಾರೆ.
'ಸಂಜು ವೆಡ್ಸ್ ಗೀತಾ' ಚಿತ್ರದ ಯಶಸ್ವಿ ಬಳಿಕ ಶ್ರೀನಗರ ಕಿಟ್ಟಿ ಮತ್ತು ರಮ್ಯಾ ಮತ್ತೊಂದು ಚಿತ್ರಕ್ಕೆ ಸಹಿಹಾಕಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಒಂದು ರೌಂಡ್ ಹಾಕಿಕೊಂಡು ಪತ್ರಿಕಾ ಕಚೇರಿಗಳಿಗೆ ತಲುಪಿತ್ತು. ಆದರೆ ಈ ಸುದ್ದಿಯನ್ನು ಸಾರಾ ಸಗಟಾಗಿ ರಮ್ಯಾ ತಳ್ಳಿಹಾಕಿದ್ದಾರೆ.
'ಮಲ್ಲಿಕಾರ್ಜುನ' ಚಿತ್ರದ ನಿರ್ಮಾಪಕ ದಿನೇಶ್ ಗಾಂಧಿ ಹಾಗೂ 'ಕೋಟೆ' ನಿರ್ದೇಶಕ ಶ್ರೀನಿವಾಸರಾಜ್ ಕೈಜೋಡಿಸಿ 'ಶುಭಮಂಗಳ' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಪ್ರಣಯರಾಜ ಶ್ರೀನಾಥ್ ಮಾಡಿದ್ದ ಪಾತ್ರವನ್ನು ಶ್ರೀನಗರ ಕಿಟ್ಟಿ ಹಾಗೂ ಆರತಿ ಪಾತ್ರವನ್ನು ರಮ್ಯಾ ಪೋಷಿಸಲಿದ್ದಾರೆ ಎನ್ನಲಾಗಿತ್ತು. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Kannada actress Ramya denies film with Srinagara Kitty. She says, I'm not doing any movie with kitty right now. Whatever news is just for the sake of publicity. Don't believe them.Some people have the knack of dropping names in her twitter account.


Click it and Unblock the Notifications











