twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರಗಳ ಕಾಮಪ್ರಚೋದಕ ಚುಂಬನಗಳು!

    By Rajendra
    |
    <ul id="pagination-digg"><li class="next"><a href="/news/14-ganda-hendathi-sanjana-hot-kiss-scene-aid0052.html">Next »</a></li></ul>

    Lip Lock scenes in Kannada
    ಕೇವಲ ಬಾಲಿವುಡ್, ಹಾಲಿವುಡ್‌ನಲ್ಲಷ್ಟೇ ಅಲ್ಲ ಸ್ಯಾಂಡಲ್‌ವುಡ್‌ನಲ್ಲೂ ಬಿಸಿಬಿಸಿ ಉಮ್ಮಾಗಳು ಪ್ರೇಕ್ಷಕರ ಹೃದಯವನ್ನು ಬೆಚ್ಚಗೆ ಮಾಡಿವೆ. ಅಂತಹ ಕಾಮಪ್ರಚೋದಕ, ಮಾದಕ ಚುಂಬನಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ನೀಡುತ್ತಿದ್ದೇವೆ. ಕೆಲವರು ಯಾವುದೇ ಮುಜುಗರವಿಲ್ಲದೆ ತುಟಿಗೆ ತುಟಿಗಳನ್ನು ಒತ್ತಿದ್ದರೆ, ಇನ್ನೂ ಕೆಲವರು ಮುಳ್ಳಿಗೆ ಮುತ್ತಿಕ್ಕಿದಂತೆ ತುಟಿ ಮಾಡಿದ್ದಾರೆ.

    ಚುಂಬನ ವಿದ್ಯೆಯಲ್ಲಿ ಇಮ್ರಾನ್ ಹಸ್ಮಿ, ಹೃತಿಕ್ ರೋಷನ್, ಮಲ್ಲಿಕಾ ಶೆರಾವತ್‌ನಷ್ಟು ಗಾಂಧಿನಗರ ತಾರೆಗಳು ಪಳಗಿರದಿದ್ದರೂ ಪ್ರೇಕ್ಷಕರಿಗೆ ಮತ್ತೇರಿಸುವಲ್ಲಿ ಮಾತ್ರ ವಿಫಲವಾಗಿಲ್ಲ. ಪ್ರೇಕ್ಷಕರೇನೋ ಇಂತಹ ಹಸಿಬಿಸಿ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಸಿನಿಮಾ ತಾರೆಗಳೇ ಯಾಕೋ ಏನೋ ತುಟಿಗೆ ತುಟಿ ಬೆರೆಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಕಾಮೆಂಟುಗಳು ಕೇಳಿಬರುತ್ತಿವೆ.

    ಅಂದಹಾಗೆ ತುಟಿಗೆ ತುಟಿ ಚುಂಬನ ಕೊಡಬೇಕಾದರೆ ನಟ ನಟಿಯರು ಬಾಯಿಯ ದುರ್ವಾಸನೆಯನ್ನು ಹೇಗೆ ಸಹಿಸುತ್ತಾರಪ್ಪಾ ಎಂದು ಸೀರಿಯಸ್ಸಾಗಿ ತಲೆಕೆಡಿಸಿಕೊಳ್ಳುವವರು ಇದ್ದಾರೆ. ಬಾಯಿಗೆ ಒಂದು ಮಿಂಟೋ ಪ್ರೆಶ್ ಅಥವಾ ಮೌತ್ ಪ್ರೆಶ್‌ನರ್‌ ಸಿಂಪಡಿಸಿಕೊಂಡರೂ ಆಯಿತು. ಘಮ ಘಮಿಸುತ್ತಿದ್ದರೆ ತುಟಿಗೆ ತುಟಿ ಒತ್ತುವುದೇನು ಕಷ್ಟದ ಕೆಲಸವಲ್ಲ. ಕೆಲವರು ಒಂದೇ ಟೇಕ್‌ಗೆ ಓಕೆ ಎಂಬಂತೆ ಚುಂಬಿಸುತ್ತಾರೆ. ಇನ್ನು ಕೆಲವರು ಹತ್ತುಹನ್ನೆರಡು ಬಾರಿ ಚುಂಬಿಸಿದರೂ ಟೇಕ್ ಓಕೆ ಆಗಲ್ಲ. ಬಾಲಿವುಡ್ ನಟಿಯರಿಗೆ ಒಂಥರಾ ಸವಾಲೊಡ್ಡಿದ ಚುಂಬನ ಎಂದರೆ ಗಂಡಹೆಂಡತಿ ಸಂಜನಾ ಕೊಟ್ಟ ಪಪ್ಪಿ. ಮುಂದೆ ಓದಿ ನೋಡಿ ಆ ಕಿಸ್ಸಿಂಗ್ ಸೀನ್ ಹೆಂಗಿತ್ತು ಅಂಥ.

    <ul id="pagination-digg"><li class="next"><a href="/news/14-ganda-hendathi-sanjana-hot-kiss-scene-aid0052.html">Next »</a></li></ul>

    English summary
    Sandalwood is one of the well known film industries producing hundreds of movies per year of all kind. Hope you will like these Kannada Love Making Scenes from Kannada Movies. Enjoy these Kisses and HOT love pictures. Actress Ramya lip kiss, Sanjana lip lock, Duniya Vijay Smitha hot kiss and more.
    Friday, October 14, 2011, 14:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X