ರಜನಿಕಾಂತ್ ಫ್ಯಾಮಿಲಿಗೆ ಫೈನಾನ್ಸಿಯರ್ ಬೆದರಿಕೆ!?

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಹಾಗೂ ಸ್ಟೈಲ್ ಕಿಂಗ್ ರಜನಿಕಾಂತ್ ಕುಟುಂಬಕ್ಕೆ ಸಿನಿಮಾ ಫೈನಾನ್ಸಿಯರ್ ಒಬ್ಬರು ಬೆದರಿಕೆ ಒಡ್ಡಿದ್ದಾರೆ. ಅವರ ಹೆಸರು ಸುಶೀಲ್ ಗುಪ್ತಾ. ಅಷ್ಟೇ ಅಲ್ಲ, ಈ ಸಂಬಂಧ ರಜನಿಕಾಂತ್ ಪತ್ನಿ ಲತಾ ಹಾಗೂ ಪುತ್ರಿ ಸೌಂದರ್ಯ ಈ ಫೈನಾನ್ಸಿಯರ್ ವಿರುದ್ಧ ಮದ್ರಾಸ್ ಕೋರ್ಟಿನಲ್ಲಿ ಕೇಸ್ ದಾಖಲಿಸಿ ಅವರನ್ನು ಜೈಲಿಗಟ್ಟಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.

ಈ ಸುಶೀಲ್ ಗುಪ್ತಾ ರಜನಿಕಾಂತ್ ನಡೆಸುತ್ತಿರುವ ಎಜ್ಯುಕೇಶನಲ್ ಟ್ರಸ್ಟ್ ಒಂದಕ್ಕೆ ಸಹಾಯ ಮಾಡುತ್ತಿದ್ದರು. ಈ ಹಣವನ್ನು ವಾಪಸ್ ಕೇಳಲು ಹೋದಾಗ ಜಗಳ ನಡೆದು ಈ ಘಟನೆ ನಡೆದಿದೆ. ಅವರು ಮದ್ರಾಸಿನ ಸ್ಥಳೀಯ ಜೈಲಿನಲ್ಲಿ ಇಡೀ ದಿನ ಇರುವಂತಾಯಿತು ಎಂದು 'ಮುಂಬೈ ಮಿರರ್' ಗೆ ಸುದ್ದಿಮೂಲಗಳಿಂದ ವರದಿಯಾಗಿದೆ ಎಂದು ತಿಳಿದು ಬಂದಿದೆ.

ಮುಂಬೈ ಮಿರರ್ ಸುದ್ದಿ ಮೂಲಗಳ ಪ್ರಕಾರ ಫೈನಾನ್ಸಿಯರ್ ಸುಶೀಲ್ ಗುಪ್ತಾ, ರಜನಿ ಪತ್ನಿ ಲತಾಗೆ ರು. 2.57 ಕೋಟಿ ಕೊಟ್ಟಿದ್ದರು. ಇದನ್ನು ವಾಪಸ್ ಕೇಳಲು ಹೋದಾಗ ಬದರಿಸಿದ್ದಾರೆ ಎಂದು ಅವರ ವಿರುದ್ಧವೇ ರಜನಿ ಕುಟುಂಬ ತಿರುಗಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಈ ಬೆದರಿಕೆಯ ಆರೋಪ ಸುಳ್ಳು ಎಂದು ಸುಶೀಲ್ ಹೇಳುತ್ತಿದ್ದಾರೆ. ಸುಶೀಲ್ ಮ್ಯಾನೇಜರ್ ಸುಶೀಲ್ ಬದಲಾಗಿ ಹಣ ಕೇಳಿದ್ದಾರೆ, ನಂತರ ಇಷ್ಟೆಲ್ಲಾ ರಾದ್ಧಾಂತ ನಡೆದಿದೆ ಎನ್ನಲಾಗಿದೆ. (ಏಜೆನ್ಸೀಸ್)

More from Filmibeat

English summary
Tamil superstar Rajinikanth's wife Latha and daughter Soundarya sent a film financer Sushil Gupta to the jail since he was charged of threatening their family.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X