ರಜನಿ ಎಂಧಿರನ್ ಗೆ ಉಪ್ಪಿ ಹಾಲಿವುಡ್ ಸ್ಫೂರ್ತಿ?

By * ರಾಜೇಂದ್ರ ಚಿಂತಾಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುಕೋಟಿ ವೆಚ್ಚದ ಬಹು ನಿರೀಕ್ಷಿತ ಚಿತ್ರ 'ಎಂಧಿರನ್' ಸೆಪ್ಟೆಂಬರ್ 24ರಂದು ತೆರೆಗೆ ಅಪ್ಪಳಿಸಲಿದೆ. ಈ ಚಿತ್ರದ ಕಥೆ ಕೇಳಿದರೆ ನಮ್ಮ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ 'ಹಾಲಿವುಡ್' ಚಿತ್ರ ನೆನಪಿಗೆ ಬಾರದೆ ಇರದು. ಥೇಟ್ ಕನ್ನಡದ'ಹಾಲಿವುಡ್' ಚಿತ್ರದ ಪಡಿಯಚ್ಚಿನಂತಿದೆ. ಕತೆ ಓದಿ ನೋಡಿ ನಿಮಗೂ ಸಂದೇಹ ಬಾರದೆ ಇರದು!

ಈ ಚಿತ್ರದಲ್ಲಿ ರಜನಿ ದ್ವಿಪಾತ್ರದಲ್ಲಿ ಕಾಣಿಸಲಿದ್ದಾರೆ. ಒಬ್ಬರು ವಿಜ್ಞಾನಿಯಾದರೆ ಮತ್ತೊಬ್ಬರದ್ದು ರೋಬೋ ಪಾತ್ರ. ರೋಬೋಗೆ ಕೃತಕ ಬುದ್ಧಿಮತ್ತೆ ಕೊಡಲಾಗುತ್ತದೆ. ಈ ರೋಬೋ ತನ್ನನ್ನು ತಾನು ನಿಯಂತ್ರಿಸುಕೊಳ್ಳುವಷ್ಟು ಚಾಣಾಕ್ಷ. ಪಂಚೇಂದ್ರಿಯಗಳ ಜೊತೆಗೆ ಆರನೆ ಇಂದ್ರಿಯವು ಈ ರೋಬೋಗೆ ಕೆಲಸ ಮಾಡುತ್ತದೆ.

ಕಡೆಗೆ ಈ ರೋಬೋ ಜೀವಂತ ಮನುಷ್ಯನ ರೀತಿ ವರ್ತಿಸಲು ಆರಂಭಿಸುತ್ತದೆ. ಐಶ್ವರ್ಯ ರೈ ಜೊತೆ ಕೈ ಕೈ ಹಿಡಿದು ಡ್ಯುಯಟ್ ಹಾಡುತ್ತದೆ. ಆಗಾಗ ಪ್ರೇಮ ಕವನಗಳನ್ನು ಗೀಚುತ್ತದೆ. ಈ ಬುದ್ಧಿವಂತ ರೋಬೋವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಹಲವರು ಪ್ರಯತ್ನಿಸುತ್ತಾರೆ. ದುಷ್ಟ ಕೈಗಳಿಂದ ರೋಬೋವನ್ನು ರಕ್ಷಿಸುವುದೇ ಚಿತ್ರದ ಕತೆ.

ಈಗ ಹೇಳಿ 'ಎಂಧಿರನ್' ಚಿತ್ರಕ್ಕೆ ಉಪೇಂದ್ರ 'ಹಾಲಿವುಡ್' ಚಿತ್ರ ಸ್ಫೂರ್ತಿಯಲ್ಲವೆ? ಹಲವಾರು ಯಶಸ್ವಿ ಚಿತ್ರಗಳನ್ನು ಕೊಟ್ಟಂತಹ ಶಂಕರ್ ತಲೆ ಖಾಲಿಯಾಯಿತೆ? ಈ ಚಿತ್ರ ರಜನಿಕಾಂತ್ ಗೆ ಕೊನೆಯ ಚಿತ್ರವಾಗಲಿದೆಯೇ? ಹೀಗೆ ಪ್ರಶ್ನೆಗಳು ಒಂದರ ಹಿಂದೆ ಒಂದರಂತೆ ಉದ್ಭವಿಸುತ್ತ್ತವೆ. ಚಿತ್ರ ಬಿಡುಗಡೆಯಾದ ಬಳಿಕಷ್ಟೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಕಾದು ನೋಡೋಣ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X