»   » ಸುಳ್ಳು ದಾಖಲೆ ಸೃಷ್ಟಿಸುವ 'ಕಲಾವಿದ'ರೇ ಎಚ್ಚರಿಕೆ

ಸುಳ್ಳು ದಾಖಲೆ ಸೃಷ್ಟಿಸುವ 'ಕಲಾವಿದ'ರೇ ಎಚ್ಚರಿಕೆ

Subscribe to Filmibeat Kannada

ಚೆನ್ನೈ, ಮಾ.14 : ಸುಳ್ಳು ದಾಖಲೆ ಸೃಷ್ಟಿಸಿ ಇತರ ಕಲಾವಿದರಿಗೆ ವೀಸಾ ದೊರಕಿಸಲು ಸಹಾಯ ಮಾಡುವ 'ಕಲಾವಿದ'ರಿಗೆ ಜೀವಮಾನ ನಿರ್ಬಂಧ ಹೇರಲಾಗುವುದು ಎಂದು ಅಮೆರಿಕ ಕನ್ಸುಲೇಟ್ ಎಚ್ಚರಿಕೆ ನೀಡಿದೆ.

ಅಮೆರಿಕಾಗೆ ಹೋಗಲು ತಮಗೆ ಅರ್ಹತೆಯಿದ್ದರೂ ಸಹಾಯಕರಿಗೆ ವೀಸಾ ದೊರಕಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿರುವ 200ಕ್ಕೂ ಹೆಚ್ಚಿನ ನಟನಟಿಯರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರನ್ನು ಕನ್ಸುಲೇಟ್ ತರಾಟೆಗೆ ತೆಗೆದುಕೊಂಡಿದೆ.

ಕಾನೂನುಬದ್ಧವಾಗಿ ಅಮೆರಿಕಾಗೆ ತೆರಳಲು ಅರ್ಹತೆ ಹೊಂದಿರುವ ಚಿತ್ರಕಲಾವಿದರು ಅನರ್ಹರಿಗೆ ಸಹಕರಿಸಿದರೂ ತಪ್ಪಿತಸ್ಥರಾಗುತ್ತಾರೆ ಎಂದು ಚೆನ್ನೈನಲ್ಲಿರುವ ಅಮೆರಿಕಾ ಕನ್ಸುಲಾರ್ ಜೆನರಲ್ ಡೆವಿಡ್ ಹೊಪ್ಪರ್ ಶುಕ್ರವಾರ ಈ ಸಂಬಂಧ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ವೀಸಾ ವಂಚನೆಯ ವಿರುದ್ಧ ಕ್ರಮ ತೆಗೆದುಕೊಂಡಿರುವುದು ಭಾರತದ ದಕ್ಷಿಣ ಭಾರತದ ಚಿತ್ರರಂಗವನ್ನು ನಿಂದಿಸಲು ಎಂದು ಭಾವಿಸಬಾರದು. ಭಾರತ ಮತ್ತು ಅಮೆರಿಕಾದ ನಡುವಿನ ಚಿತ್ರ ಬಾಂಧವ್ಯ ಎಂದೂ ವೃದ್ಧಿಯಾಗಬೇಕೆಂಬುದು ನಮ್ಮ ಆಶಯ ಎಂದು ಹೊಪ್ಪರ್ ಸ್ಪಷ್ಟಪಡಿಸಿದರು.

ಮೇಕಪ್ ಸಹಾಯಕಿಗೆ ವೀಸಾ ದೊರಕಿಸಲು ಅಕ್ರಮ ದಾಖಲೆ ಸೃಷ್ಟಿಸಿ ಸಹಕರಿಸಿದ ಚಿತ್ರನಟಿ ಫ್ಲೋರಾ ಸೈನಿ ಈಗಾಗಲೆ ಪೊಲೀಸರ ಅತಿಥಿಯಾಗಿದ್ದಾರೆ. ಈ ಪ್ರಕರಣಗಳಲ್ಲಿ ಭಾಗಿಯಾಗಿರುವ 200ಕ್ಕೂ ಹೆಚ್ಚಿನ ಕಲಾವಿದರ ಹೆಸರನ್ನು ಬಹಿರಂಗಪಡಿಸಲು ಅಮೆರಿಕ ಕನ್ಸುಲೇಟ್ ನಿರಾಕರಿಸಿದೆ.

(ದಟ್ಸ್‌ಸಿನಿ ವಾರ್ತೆ)

ಓದಿಗೆ : ವೀಸಾ ಮೋಸ : ಪೊಲೀಸರ ಬಲೆಯಲ್ಲಿ ಚಿತ್ರನಟಿ
ನೋಟಕ್ಕೆ : ಜಲಕ್ರೀಡೆಯಾಡುತ್ತಿರುವ ಮಯೂರಿ ಅಕಾ ಫ್ಲೋರಾ ಸೈನಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada