»   » ಟಿಕೇಟು ಸೇವಾಶುಲ್ಕ ಪಿರಿಪಿರಿ: ಉನ್ನತ ಮಟ್ಟದ ಸಭೆಯಲ್ಲಿ ಕಿರಿಕ್ಕು

ಟಿಕೇಟು ಸೇವಾಶುಲ್ಕ ಪಿರಿಪಿರಿ: ಉನ್ನತ ಮಟ್ಟದ ಸಭೆಯಲ್ಲಿ ಕಿರಿಕ್ಕು

Subscribe to Filmibeat Kannada

ಬೆಂಗಳೂರು : ನಗರದ ಜನಾರ್ದನ ಹೊಟೇಲಿನಲ್ಲಿ ಸೋಮವಾರ (ಜುಲೈ 14) ಚಲನಚಿತ್ರ ಉದ್ಯಮಿಗಳು, ಕಲಾವಿದರು ಹಾಗೂ ನಿರ್ಮಾಪಕರ ನಡುವೆ ಸೇವಾ ಶುಲ್ಕ ತಗಾದೆ ವಿಚಾರವಾಗಿ ನಡೆದ ಉನ್ನತ ಮಟ್ಟದ ಸಭೆ ಗಲಭೆಯಿಂದಾಗಿ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬರಲು ಇದುವರೆಗೆ (ಸಂಜೆ 5.30) ಆಗಿಲ್ಲ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ರಮೇಶ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸೇವಾ ಶುಲ್ಕದ ರದ್ಧತಿಗೆ ಆಗ್ರಹ ವ್ಯಕ್ತವಾಯಿತು. ನಡುವೆಯೇ ಇನ್ನು ಕೆಲವರು ಸೇವಾ ಶುಲ್ಕ ಅಷ್ಟಿರಬೇಕು, ಇಷ್ಟಿರಬೇಕು ಎಂದು ವಾದಿಸತೊಡಗಿದರು. ಪರಿಣಾಮವಾಗಿ ಗೊಂದಲ ಉಂಟಾಗಿ, ನೂಕಾಟ ಶುರುವಾಯಿತು. ಕೆಲವರು ಮಾತಿನ ಭರದಲ್ಲಿ ಕೈ ಕೈಮಿಲಾಯಿಸುವ ಮಟ್ಟಕ್ಕೆ ಹೋದರು. ಇದರ ನಡುವೆಯೂ ಸಭೆ ನಡೆಯಿತು.

ಸಭೆಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್‌ಕುಮಾರ್‌ ಪಾಟೀಲ್‌, ಕಾರ್ಯದರ್ಶಿ ಕೃಷ್ಣರಾಜು, ಪಾರ್ವತಮ್ಮ ರಾಜ್‌ಕುಮಾರ್‌, ರಾಕ್‌ಲೈನ್‌ ವೆಂಕಟೇಶ್‌, ಜಗ್ಗೇಶ್‌, ಕೆ.ಮಂಜು, ರಾಘವೇಂದ್ರ ರಾಜ್‌ಕುಮಾರ್‌, ಸಾ.ರಾ.ಗೋವಿಂದು ಮೊದಲಾದವರಿದ್ದರು.

ಸಭೆಯಲ್ಲಿ ಚಕಮಕಿಯಾದಾಗ ಹೊರಗೆ ಬಂದ ಜಗ್ಗೇಶ್‌ ಹಾಗೂ ಬಸಂತ್‌ಕುಮಾರ್‌ ಪಾಟೀಲ್‌, ಸೇವಾ ಶುಲ್ಕ ರದ್ದತಿಯಿಂದ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರ ಮಂದಿರಕ್ಕೆ ಬರುವಂತಾಗುತ್ತದೆ ಎಂಬುದು ತಮ್ಮ ವಾದ ಎಂದು ತಿಳಿಸಿದರು. ಉನ್ನತ ಮಟ್ಟದ ಸಭೆಯಲ್ಲಿ ಅಂತಿಮವಾಗಿ ಯಾವ ನಿರ್ಣಯ ಕೈಗೊಳ್ಳಲಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಭೆಯ ನಂತರ ಚಿತ್ರಮಂದಿರಗಳ ಮಾಲೀಕರ ಜೊತೆ ಮಾತಾಡಿ ಸಮಸ್ಯೆಗೆ ಪರಿಹಾರ ಕೊಡುವುದಾಗಿ ಎಸ್‌.ರಮೇಶ್‌ ಭರವಸೆ ಕೊಟ್ಟಿದ್ದಾರೆ.

(ಇನ್ಫೋ ವಾರ್ತೆ)

Post your views

ವಾರ್ತಾ ಸಂಚಯ
ಈಸ್ಟ್‌ಮನ್‌ ಕಲರ್‌ ಕೋಳಿಜಗಳ !


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada