»   » ಕನ್ನಡೇತರ ಚಿತ್ರಗಳಿಗೆ ಸಡಿಲವಾಗದ ಏಳರ ದಿಗ್ಬಂಧನ

ಕನ್ನಡೇತರ ಚಿತ್ರಗಳಿಗೆ ಸಡಿಲವಾಗದ ಏಳರ ದಿಗ್ಬಂಧನ

Subscribe to Filmibeat Kannada

ಬೆಂಗಳೂರು : ಏಳು ವಾರದ ನಂತರ ಅನ್ಯ ಭಾಷೆಯ ಚಲನಚಿತ್ರಗಳನ್ನು ರಾಜ್ಯದಲ್ಲಿ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬದ್ಧವಾಗಿರಲು ಸರಕಾರದ ಉನ್ನತ ಮಟ್ಟದ ಸಮಿತಿ ತೀರ್ಮಾನಿಸಿದೆ.

ಚಿತ್ರಮಂದಿರಗಳ ಮಾಲೀಕರು ಹಾಗೂ ಕನ್ನಡ ಚಿತ್ರೋದ್ಯಮದ ನಡುವಿನ ಅಂತಃಕಲಹಕ್ಕೆ, ಪರಿಹಾರ ಸೂಚಿಸಲು ಸರಕಾರದ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಪಿ. ಪಾಂಡೆ ಅಧ್ಯಕ್ಪತೆಯಲ್ಲಿ ಸೋಮವಾರ ನಗರದಲ್ಲಿ ಉನ್ನತಮಟ್ಟದ ಸಭೆ ನಡೆಯಿತು.

ಸಭೆಯಲ್ಲಿ ಚಿತ್ರನಟ ಹಾಗೂ ಸಂಸದ ಅಂಬರೀಷ್‌, ಪಾರ್ವತಮ್ಮ ರಾಜಕುಮಾರ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತಕುಮಾರ್‌ ಪಾಟೀಲ್‌, ಕ.ಚ.ವಾ.ಮಂಡಳಿ ಅಧ್ಯಕ್ಷ ಎಸ್‌.ರಮೇಶ್‌ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಉನ್ನತ ಮಟ್ಟದ ಸಮಿತಿ ಸಭೆಯ ಪಕ್ಷಿನೋಟ :

  • ಮಿನಿ ಚಿತ್ರ ಮಂದಿರಗಳಿಗೂ ಕಾನೂನು ರಕ್ಪಣೆ ಒದಗಿಸಿ ಮಾನ್ಯತೆ ನೀಡವುದು. ನಕಲಿ ಸಿ.ಡಿ. ಹಾವಳಿ ನಿಯಂತ್ರಣಕ್ಕೆ ವಿಶೇಷ ಪೊಲೀಸ್‌ ಪಡೆ ನೇಮಕಕ್ಕೆ ಸಭೆ ನಿರ್ಧಾರ.
  • ಪ್ರದರ್ಶಕರು ಹಾಗೂ ವಿತರಕರ ಸೇವೆ ಪರಿಗಣಿಸಿ ಪ್ರತಿ ವರ್ಷವೂ ಪ್ರಶಸ್ತಿ ನೀಡಿ ಗೌರವಿಸುವುದು ಹಾಗೂ ಇತರ ರಾಜ್ಯಗಳ ಅಧ್ಯಯನ ಪ್ರವಾಸಕ್ಕೆ ವ್ಯವಸ್ಥೆ.
  • ಅನ್ಯ ಭಾಷೆ ಚಿತ್ರಗಳಿಗೆ ನೀಡಲಾಗಿರುವ ತೆರಿಗೆ ವಿನಾಯ್ತಿಯನ್ನು ಶೇ. 40 ರಿಂದ 70ಕ್ಕೆ ಏರಿಸುವುದು.
  • ಉತ್ತರ ಕರ್ನಾಟಕ ಭಾಗದಲ್ಲಿ ಹೊಸ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುವ ಸಂಬಂಧ ಮಾತುಕತೆ ನಡೆಸಲು ನಟ ಅಂಬರೀಷ ನಿವಾಸದಲ್ಲಿ ಚಿತ್ರ ಪ್ರದರ್ಶಕರ ಸಭೆಯನ್ನು ಮಂಗಳವಾರ ನಡೆಸಲು ತೀರ್ಮಾನ.
  • ಚಿತ್ರಮಂದಿರಗಳು ಮತ್ತು ಚಿತ್ರ ಪ್ರದರ್ಶನದ ಗುಣಮಟ್ಟ ಸುಧಾರಣೆಗೆ ಒಂದು ಸಮಿತಿ ರಚನೆಗೆ ನಿರ್ಧಾರ. ಈ ಸಮಿತಿ ಹೊರ ರಾಜ್ಯದಲ್ಲೆಲ್ಲ ಪ್ರವಾಸ ಮಾಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ, ಸುಧಾರಣೆಗೆ ಸೂಚನೆ ನೀಡಬೇಕು.
(ಇನ್ಫೋ ವಾರ್ತೆ)


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada