»   » ರವಿ ಬೆಳಗೆರೆ ವಿರುದ್ಧ ದೇವೇಗೌಡರ ಮಾನನಷ್ಟ ಮೊಕದ್ದಮೆ

ರವಿ ಬೆಳಗೆರೆ ವಿರುದ್ಧ ದೇವೇಗೌಡರ ಮಾನನಷ್ಟ ಮೊಕದ್ದಮೆ

Subscribe to Filmibeat Kannada


ಹಾಸನ, ಡಿ.14: ಪತ್ರಕರ್ತ ರವಿ ಬೆಳಗೆರೆ ನಿರ್ಮಿಸಿ, ನಿರ್ದೇಶಿಸುತ್ತಿರುವ 'ಮುಖ್ಯಮಂತ್ರಿ ಐ ಲವ್ ಯು' ಚಿತ್ರಕ್ಕೆ ಆಗಲೇ ವಿಘ್ನಗಳು ಶುರುವಾಗಿವೆ. ಬೆಳಗೆರೆ ವಿರುದ್ಧ ಹಾಸನದಲ್ಲಿ ದೇವೇಗೌಡರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಪತ್ರಕರ್ತ ರವಿಬೆಳಗೆರೆ ಅವರ ವಿರುದ್ಧ 10 ಕೋಟಿ ರೂ. ಪರಿಹಾರ ಕೋರಿ ಮಾಜಿ ಪ್ರಧಾನಿ ದೇವೇಗೌಡ ಹಾಸನದ ಸಿವಿಲ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ವಕೀಲ ವಿ.ಎಸ್. ವೆಂಕಟೇಶಮೂರ್ತಿ ಅವರು ಇಲ್ಲಿನ ಹಿರಿಯ ಶ್ರೇಣಿ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಗುರುವಾರ ದಾವೆ ಹೂಡಿ 7,70,125 ರೂ. ಶುಲ್ಕವನ್ನು ಪಾವತಿಸಿದ್ದಾರೆ.

ಇನ್ನೂ ಚಿತ್ರೀಕರಣವೇ ಮುಗಿದಿಲ್ಲ, ಈಗಲೇ ಪ್ರತಿಭಟನೆ, ಚಳವಳಿ ಮಾಡಿ ಸುತ್ತಿರುವ ದೇವೇಗೌಡರು ಯಾಕಾಗಿ ಇಷ್ಟೆಲ್ಲಾ ದಿಗಿಲು ಬಿದ್ದಿದ್ದಾರೆಂಬುದು ಅರ್ಥವಾಗುತ್ತಿಲ್ಲ ಎಂದು ಪತ್ರಕರ್ತ ರವಿ ಬೆಳಗೆರೆ ಪ್ರತಿಕ್ರಿಯಿಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ಮತ್ತಷ್ಟು ಸುದ್ದಿ:
'ಮುಖ್ಯಮಂತ್ರಿ ಐ ಲವ್ ಯೂ'ಚಿತ್ರಕ್ಕೆ ವಿಘ್ನಗಳು ಶುರು!
ಸಾಕ್ಷಿ ಬೆಳಗೆರೆ ಕಣ್ಣಳತೆಯಲ್ಲಿ 'ಮುಖ್ಯಮಂತ್ರಿ ಐ ಲವ್ ಯೂ'
ಮುಹೂರ್ತದ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada