ಪ್ರಿಯಾ ಹಾಸನ್ ಒಂಟಿ ಬಾಳಲ್ಲಿ ಬಂದವನ್ಯಾರು?

By Rajendra

ಜಂಬದ ಹುಡುಗಿ ಪ್ರಿಯಾ ಹಾಸನ್ ಈಗ ಏಕಾಂಗಿ ಅಲ್ಲ. ಆಕೆಯ ಬಾಳಲ್ಲಿ ಒಬ್ಬ ಸ್ಮಾರ್ಟ್ ಗೆಳೆಯ (?) ಪ್ರವೇಶಿಸಿದ್ದಾನೆ. ಆತನಿಗೆ ಆಕೆ ಇಟ್ಟಿರುವ ಹೆಸರು ಸ್ಮಾರ್ಟ್ ವೀರು. ಪ್ರಿಯಾ ಹಾಸನ್ ಫೇಸ್‌ಬುಕ್‌ಗೆ ಒಮ್ಮೆ ನೀವು ಭೇಟಿ ನೀಡಿದರೆ ಈ ವಿವರಗಳು ಸಿಗುತ್ತವೆ. ಇವರಿಬ್ಬರದೂ ಒಂಥರಾ complicated relationship ಅಂತೆ.

ಲಿವ್ ಇನ್ ರಿಲೇಷನ್ ಶಿಪ್ (ಸಹ ಜೀವನ) ಕೇಳಿದ್ದೇವೆ ಇದ್ಯಾವುದಪ್ಪಾ ಹೊಸ ವರಸೆ. ಇದೊಂಥರಾ ಜಟಿಲ ಸಂಬಂಧ, ಅನುರಾಗದ ಅನುಂಧ. ಇವರಿಬ್ಬರ ನಡುವೆ ಏನೋ ಸಂಥಿಂಗ್ ಸಂಥಿಂಗ್ ಎಂಬುದು ಗಾಂಧಿನಗರದ ಗುಲ್ಲು. ಈ ಸ್ಮಾರ್ಟ್ ವೀರು ಯಾರು ಎಂದು ಫೇಸ್‌ಬುಕ್‌ನಲ್ಲಿ ತಡಕಾಡಿದರೆ ಅಲ್ಲೂ ಪ್ರಿಯ ಪ್ರಿಯತಮಾ ರಾಗಾಲು...

ವೀರು ಕೂಡ ಪ್ರಿಯಾ ಅವರನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತಿದ್ದಾನೆ ಎಂಬುದು ಗೊತ್ತಾಗುತ್ತದೆ. ಹೈದರಾಬಾದ್ ಮೂಲದ ಈತ ಸದ್ಯಕ್ಕೆ ಮಾನಸ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದಾನಂತೆ ಎಂಬ ವಿವರಗಳನ್ನು ಬಿಟ್ಟರೆ ಇನ್ನೇನು ಸಿಗೋದಿಲ್ಲ. ಪ್ರಿಯಾ ಹಾಸನ್ ಅವರೆ ಏನ್ರಿ ಜಟಿಲ ಸಂಬಂಧ ಎಂದರೆ, ಅಯ್ಯೋ ನನಗೆ ಗೊತ್ತಿಲ್ಲಪ್ಪ ಎನ್ನುತ್ತಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Popular Kannada actress Priya Hassan has changed her relationship status in the popular social networking website Facebook. Priya Hassan says that she is in a complicated relationship with Smart Veeru. Who is Smart Veeru?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X