ಅಂಬಿ ಅಭಿಮಾನಿಗಳಿಂದ ಪತ್ರಿಕಾ ಕಚೇರಿ ಮೇಲೆ ದಾಳಿ

By Rajendra

Actor Ambarish
ತಮ್ಮ ನೆಚ್ಚಿನ ನಟನ ಮಗನ ವಿರುದ್ಧ ಪತ್ರಿಕೆಯೊಂದರಲ್ಲಿ ಬಂದ ಅವಹೇಳನಕಾರಿ ಲೇಖನದಿಂದ ಕುಪಿತರಾದ ಅಭಿಮಾನಿಗಳು ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ ಘಟನೆ ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿ ಶನಿವಾರ (ಅ.15) ನಡೆದಿದೆ.

ಈ ವಾರ ಮಾರುಕಟ್ಟೆಗೆ ಬಂದಿರುವ ಇಂದ್ರಜಿತ್ ಲಂಕೇಶ್ ಸಂಪಾದಕತ್ವದ ಲಂಕೇಶ್ ಪತ್ರಿಕೆಯಲ್ಲಿ ಅಂಬರೀಷ್ ಪುತ್ರ ಅಭಿಷೇಕ್ ಗೌಡ ಕುರಿತಂತೆ ಲೇಖನವೊಂದು ಪ್ರಕಟವಾಗಿದೆ ಎನ್ನಲಾಗಿದೆ. ಲೇಖನದಲ್ಲಿ ಅವಹೇಳನಕಾರಿ ಅಂಶಗಳಿವೆ ಎಂದು ರೊಚ್ಚಿಗೆದ್ದ ಅಂಬರೀಷ್ ಅಭಿಮಾನಿಗಳು ರಾಜರಾಜೇಶ್ವರಿನಗರದ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿದರು.

ಏಕಾಏಕಿ ಪತ್ರಿಕಾ ಕಚೇರಿಗೆ ನುಗ್ಗಿದ ಅಭಿಮಾನಿಗಳು ಕಚೇರಿ ಸಹಾಯಕನ ಮೇಲೆ ಹಲ್ಲೆ ನಡೆಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ತಕ್ಷಣ ಪೊಲೀಸರಿಗೆ ಮಾಹಿತಿ ತಲುಪಿದ ಕಾರಣ ಅವರು ಕೂಡಲೆ ಸ್ಥಳಕ್ಕೆ ಆಗಮಿಸಿ ಆಗಬಹುದಾಗಿದ್ದ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಇಂದ್ರಜಿತ್ ಅವರು ಪತ್ರಿಕಾ ಕಚೇರಿಯಲ್ಲಿರಲಿಲ್ಲ. (ಏಜೆನ್ಸೀಸ್)

More from Filmibeat

English summary
Rebel Star Ambarish fans ransacks the office of the famous Kannada tabloid ‘Lankesh Patrike’ owned by Indrajit Lankesh on Saturday (Oct 15) morning. Because of a report published on the love affair of Ambarish and actres Sumalatha son Abhisekh in the latest issue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X