»   »  ಈ ಚಿತ್ರದ ನಾಯಕಿ ಯಾರೆಂದು ನೀವೇ ಊಹಿಸಿ!

ಈ ಚಿತ್ರದ ನಾಯಕಿ ಯಾರೆಂದು ನೀವೇ ಊಹಿಸಿ!

Subscribe to Filmibeat Kannada

*ಜಯಂತಿ

guess who is the heroine of the movie
ನಿರ್ದೇಶಕ: ಸಿನಿಮಾ ಅಂದ್ರೆ ನಾಲ್ಕೋ ಐದೋ ಹಾಡಿರಬೇಕಲ್ಲವಾ? ಹಾಡು ಅಂದಮೇಲೆ ನಾಯಕಿ ಬೇಕಲ್ಲವಾ? ಹಾಡು ಮುಗಿದ ಮೇಲೆ ನಾಯಕಿಗೇನು ಕೆಲಸ? ನಮ್ಮ ಸಿನಿಮಾದಲ್ಲಿ ಆ ರೀತಿ ಅಲ್ಲ. ಇಲ್ಲೂ ಹಾಡಿರುತ್ತವೆ. ಆದರೆ, ಹಾಡು ಮುಗಿದ ನಂತರವೂ ನಾಯಕಿ ಇರುತ್ತಾಳೆ. ಹಾಗೆ ನೋಡಿದರೆ ಇಡೀ ಸಿನಿಮಾ ನಾಯಕಿ ಪಾತ್ರದ ಮೇಲೆ ನಿಂತಿದೆ. ನಟಿಯೊಬ್ಬಳಿಗೆ ಇಂಥ ಅವಕಾಶ ಸಿಗುವುದು ತುಂಬಾ ಅಪರೂಪ. ಕನ್ನಡದ ಹುಡುಗಿಯೇ ಈ ಪಾತ್ರ ಮಾಡಬೇಕು ಅನ್ನೋದು ನಮ್ಮ ಆಸೆ. ನಿಮಗೆ ಈ ಪಾತ್ರ ಚೆನ್ನಾಗಿ ಹೊಂದಾಣಿಕೆ ಆಗುತ್ತೆ.

ನಟಿ: ನೀವು ಹೇಳಿದ ಕಥೆ ತುಂಬಾ ಚೆನ್ನಾಗಿದೆ. ನಂಗೆ ಸಖತ್ ಇಷ್ಟವಾಯ್ತು. ನಿಮ್ಮ ಸಿನಿಮಾದಲ್ಲಿ ನಾನು ಮಾಡ್ತೀನಿ.

ನಿರ್ದೇಶಕ:
ಇದು ನನ್ನ ಮೊದಲ ಸಿನಿಮಾ. ತುಂಬಾ ಆಕಾಂಕ್ಷೆಗಳಿವೆ. ಕನ್ನಡದ ಪ್ರತಿಭೆಗಳನ್ನೇ ಬಳಸಿಕೊಂಡು ಸಿನಿಮಾ ಮಾಡಬೇಕು ಎನ್ನೋ ಉದ್ದೇಶ ನನ್ನದು.

ನಟಿ: ನಿಮ್ಮಂಥವರು ಹೆಚ್ಚಾಗಬೇಕು.

ನಿರ್ದೇಶಕ: ಸಿನಿಮಾದಲ್ಲಿ ಎರಡು ಚುಂಬನ ದೃಶ್ಯಗಳಿವೆ. ಅಶ್ಲೀಲತೆ ಕೊಂಚವೂ ಇಲ್ಲ. ಕಥೆಗೆ ಪೂರಕವಾಗಿ ಅಷ್ಟೇ ಈ ದೃಶ್ಯಗಳು. ಚಿತ್ರಕಥೆ ಓದಿದರೆ ನಿಮಗೇ ಅರ್ಥವಾಗುತ್ತೆ.

ನಟಿ: ಸರಿ. ಕಥೆಗೆ ಪೂರಕವಾಗಿದ್ದರೆ ನನಗೇನೂ ಅಭ್ಯಂತರವಿಲ್ಲ.

*

ಎರಡು ವಾರಗಳ ನಂತರ ನಿರ್ದೇಶಕನ ಮೊಬೈಲ್‌ನಲ್ಲಿ ಒಂದು ಎಸ್ಸೆಮ್ಮೆಸ್-
'ಕ್ಷಮಿಸಿ. ನಿಮ್ಮ ಸಿನಿಮಾದಲ್ಲಿ ನಟಿಸೋದು ನನಗೆ ಸಾಧ್ಯವಾಗ್ತಿಲ್ಲ..."

*

ಮೇಲಿನ ಸಂಭಾಷಣೆಯಲ್ಲಿನ ನಿರ್ದೇಶಕ ಹಾಗೂ ನಟಿ ಯಾರಿರಬಹುದು. ಸದ್ಯಕ್ಕದು ಗುಟ್ಟು. ನಿರ್ದೇಶಕರು ಹೊಸಬರಾದ್ದರಿಂದ ಅವರ ಹೆಸರನ್ನು ನೀವು ಊಹಿಸಲಾರಿರಿ. ನಾಯಕಿ ಬಗ್ಗೆ ಒಂದು ಸುಳಿವು. ಆಕೆಯ ಹೆಸರು ಜನಪ್ರಿಯ ನಾಯಕನಟನೊಬ್ಬನ ಜೊತೆ ಆಗಾಗ ಗಾಸಿಪ್ ಅಂಕಣಗಳಲ್ಲಿ ಮಿಂಚುತ್ತಿರುತ್ತದೆ. ಒಪ್ಪಿಕೊಂಡ ಪಾತ್ರವನ್ನು ನಟೀಮಣಿ ನಿರಾಕರಿಸಲಿಕ್ಕೆ ಆಕೆಯ ತಾರಾಗೆಳೆಯನ ತಕರಾರೇ ಕಾರಣ ಎನ್ನುತ್ತದೆ ಗಾಂಧಿನಗರ.

ಇಷ್ಟೆಲ್ಲ ಬರೆಯಲಿಕ್ಕೆ ಕಾರಣವಿದೆ. 'ಕನ್ನಡದ ಹುಡುಗಿಯರಿಗೆ ಅವಕಾಶವಿಲ್ಲ. ಪರಭಾಷಾ ಚೆಲುವೆಯರಿಗೆ ಇಲ್ಲಿ ಮಣೆ ಹಾಕಲಾಗುತ್ತದೆ" ಎಂದು ಎಲ್ಲರೂ ದೂರುತ್ತಾರೆ. ಅವಕಾಶ ಕೊಡುತ್ತೇವೆ ಎಂದು ಹೋದಾಗ ಈ ಎಲ್ಲ ರಂಪ ರಾಮಾಯಣ!

ಇದು ಸಂಪೂರ್ಣ ಗ್ರಾಮೀಣ ಹಿನ್ನೆಲೆ ಚಿತ್ರ: ಶಿವಣ್ಣ
ನಂ.1 ಪಟ್ಟಕ್ಕಾಗಿ ನಟಿ ರಮ್ಯಾ ಹೋರಾಟ!
ದಿನೇಶ್, ಸುದೀಪ್ ಸ್ನೇಹದ ಕಡಲಲ್ಲಿ ಹಾಲಾಹಲ
ವಿಜಯ್ ಮತ್ತು ಶುಭಾ ನಡುವಿನ ಗಾಸಿಪ್ ನಿಜವೇ?
ರು.3 ಕೋಟಿ ವೆಚ್ಚದಲ್ಲಿ ರಾಜ್ ಚಿತ್ರದ ಹಾಡುಗಳು!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada