ಶಿಶ್ನಕವಚದ ಬಗ್ಗೆ ಟ್ವೀಟಿದ ಐಟಂ ಬಾಂಬ್ ಮುಮೈತ್ ಖಾನ್
ದಕ್ಷಿಣ ಭಾರತದ ಸೆಕ್ಸಿ ಐಟಂ ಬಾಂಬ್ ಮುಮೈತ್ ಖಾನ್ ಗೊತ್ತಿರಬೇಕಲ್ಲ. ಮರೆಯುವಂತಹ ಬೆಡಗಿಯಲ್ಲ ಬಿಡಿ ಈಕೆ. ಕನ್ನಡದಲ್ಲಿ ದರ್ಶನ್ ಜೊತೆ 'ಶೌರ್ಯ' ಚಿತ್ರದಲ್ಲಿ ಪಡ್ಡೆಗಳು ಹಾಸಿಗೆ ಉರುಳುವಂತೆ ಮಾಡಿದ್ದ ಈಕೆ ಈಗೆ ಬಹುತೇಕ ನಾಪತ್ತೆಯಾಗಿದ್ದಾರೆ. ಅಕ್ಕ ಪಕ್ಕದ ತೆಲುಗು, ತಮಿಳು ಚಿತ್ರರಂಗದಲ್ಲೂ ಈಕೆ ಸುಳಿವಿಲ್ಲ.
ಈಕೆಯ ಸ್ಥಾನಕ್ಕೆ ಈಗ ನಾಯಕ ನಟಿಯರೇ ಬಂದು ಕೂತಿರುವ ಕಾರಣ ಈಕೆಯ ಕೈಯಲ್ಲಿ ಕೆಲಸವಿಲ್ಲದಂತಾಗಿದೆ. ರಾಗಿಣಿ, ಯೋಗಿಣಿ, ತಾರಿಣಿಯಂತಹ ನಾಯಕಿಯರೇ ಈಗ ಐಟಂ ರಾಣಿಯರಾಗಿದ್ದಾರೆ. ಆದರೂ ಮುಮೈತ್ ಖಾನ್ ತಮ್ಮ ಸಮೃದ್ಧ ನಿತಂಬಗಳು, ಉಬುಕಿದ ಎದದೆಯನ್ನು ತೋರಿಸುತ್ತಾ ಪಡ್ಡೆಗಳ ನಿದ್ದೆಗೆಡಿಸುತ್ತಿದ್ದಾರೆ.
ಈಗ ನೇರವಾಗಿ ವಿಷಯಕ್ಕೆ ಬರೋಣ. ಇತ್ತೀಚೆಗೆ ಈಕೆ ಶಿಶ್ನಕವಚದ (ಕಾಂಡೋಮ್) ಬಗ್ಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟಿದ್ದಾರೆ. ಕಾಂಡೋಮ್ ಎಂಬ ಪದ ಡಾಕ್ಟರ್ ಚಾರ್ಲೆಸ್ ಎಂಬ ಹೆಸರಿನಿಂದ ಹುಟ್ಟಿದೆಯಂದೂ ಹೇಳಿದ್ದಾರೆ. ಇದ್ದಕ್ಕಿದ್ದಂತೆ ಈಕೆಗೆ ಕಾಂಡೋಮ್ ಬಗ್ಗೆ ಮಾತನಾಡಲು ಕಾರಣ ಎಂಬುದು ಮಾತ್ರ ಅರ್ಥವಾಗಿಲ್ಲ. ಅಂದಹಾಗೆ ಕಾಂಡೋಮ್‌ಗೆ ಕನ್ನಡ ಪದ ಯಾವ ಹೆಸರಿನಿಂದ ಹುಟ್ಟಿತೋ!
ಈಕೆಯ ಟ್ವೀಟ್ ಓದಿದವರಿಗೆ ಒಂದು ಸಣ್ಣ ಅನುಮಾನವೂ ಕಾಡುತ್ತಿದೆ. ಈಕೆಯೇನಾದರೂ ಕಾಂಡೋಮ್ ಮೇಲೆ ಸಂಶೋಧನೆ ಏನಾದರೂ ಮಾಡುತ್ತಿದ್ದಾರೆಯೇ? ಅಥವಾ ಯಾವುದಾದರೂ ಕಾಂಡೋಮ್ ಒಂದರ ಬ್ರ್ಯಾಂಡ್ ಅಂಬಾಸಿಡರ್ ಆಗಿ ಏನಾದರೂ ಆಯ್ಕೆಯಾಗಿದ್ದಾರಾ? ಸದ್ಯಕ್ಕೆ ಈ ಬಗ್ಗೆ ಅಧಿಕೃತ ವರ್ತಮಾನವಿಲ್ಲ. (ಏಜೆನ್ಸೀಸ್)


Click it and Unblock the Notifications











