»   » 3 ಕೋಟಿ ರೂ. ಪರಿಹಾರಕ್ಕೆ ನಟಿ ಖುಷುಬೂರಿಂದ ಬೇಡಿಕೆ

3 ಕೋಟಿ ರೂ. ಪರಿಹಾರಕ್ಕೆ ನಟಿ ಖುಷುಬೂರಿಂದ ಬೇಡಿಕೆ

Subscribe to Filmibeat Kannada


ಸೆಕ್ಸಿ ಪೋಟೋ ಪುರಾಣ : ಮ್ಯಾಕ್ಸಿಮ್‌ ನಿಯತಕಾಲಿಕದ ಸಂಪಾದಕರಿಗೆ ನೋಟಿಸ್‌, ಮೂರು ವಾರಗಳ ಗಡುವು

ಚೆನ್ನೈ : ತಮ್ಮ ಅಸಭ್ಯ ಭಾವಚಿತ್ರ ಪ್ರಕಟಿಸಿದ ಮ್ಯಾಕ್ಸಿಮ್‌ ಆಂಗ್ಲ ನಿಯತಕಾಲಿಕದ ವಿರುದ್ಧ ಅಸಮಾಧಾನಗೊಂಡಿರುವ ನಟಿ ಖುಷುಬೂ, ಮೂರು ಕೋಟಿ ರೂ.ಗಳ ಪರಿಹಾರವನ್ನು ಕೇಳಿದ್ದಾರೆ.

ಬುಧವಾರ ಮ್ಯಾಕ್ಸಿಮ್‌ನ ಸಂಪಾದಕ ಮತ್ತು ಪ್ರಕಾಶಕರಿಗೆ ಕಾನೂನುಬದ್ಧ ನೋಟಿಸ್‌ ನೀಡಿರುವುದಾಗಿ ಸುದ್ದಿಗಾರರಿಗೆ ತಿಳಿಸಿರುವ ಅವರು, ತಮ್ಮ ಆಕ್ಷೇಪಗಳನ್ನು ವಿವರಿಸಿದರು.

ಬಿಕಿನಿಯಲ್ಲಿರುವ ಫೋಟೋವನ್ನು ಪ್ರಕಟಿಸಿರುವುದರಿಂದ ನನ್ನ ಮನಸ್ಸಿಗೆ ತುಂಬಾ ಕಷ್ಟವಾಗಿದೆ. ನನಗೆ ಪತ್ರಿಕೆಯ ಕ್ಷಮಾಪಣೆ ಬೇಕಿಲ್ಲ. ಮೂರು ವಾರದೊಳಗೆ ಮೂರು ಕೋಟಿ ರೂ.ಗಳನ್ನು ನೀಡದಿದ್ದರೆ, ಕಾನೂನು ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಖುಷುಬೂ ಎಚ್ಚರಿಸಿದರು.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada