»   » ಜಗ್ಗೇಶ್‌ ಸಿನಿಮಾಗೆ ಯಲ್ಲಮ್ಮ ದೇವಿ ಅವಕೃಪೆ

ಜಗ್ಗೇಶ್‌ ಸಿನಿಮಾಗೆ ಯಲ್ಲಮ್ಮ ದೇವಿ ಅವಕೃಪೆ

Subscribe to Filmibeat Kannada

ಬೆಂಗಳೂರು : ‘ಯಾರ್ದೋ ದುಡ್ಡು , ಯಲ್ಲಮ್ಮನ ಜಾತ್ರೆ’ ಎನ್ನುವ ಹೆಸರನ್ನು ಸಿನಿಮಾಕ್ಕೆ ಇಡುವ ಮೂಲಕ ಚಿತ್ರಕ್ಕೆ ಸಂಬಂಧಪಟ್ಟವರು ಯಲ್ಲಮ್ಮ ದೇವಿಯ ಭಕ್ತರ ಭಾವನೆಗಳನ್ನು ನೋಯಿಸಿದ್ದಾರೆ ಎಂದು ಶ್ರೀ ಯಲ್ಲಮ್ಮ ದೇವಿ ಅಭಿಮಾನಿಗಳ ಒಕ್ಕೂಟ ಆರೋಪಿಸಿದೆ.

‘ಯಾರ್ದೋ ದುಡ್ಡು , ಯಲ್ಲಮ್ಮನ ಜಾತ್ರೆ’ ಎನ್ನುವ ಹೆಸರು ಬದಲಾಯಿಸುವವರೆಗೂ ನಾವು ಹೋರಾಟ ನಡೆಸುತ್ತೇವೆ ಎಂದು ಒಕ್ಕೂಟದ ಅಧ್ಯಕ್ಷ ಜೆ.ರವಿ ತಿಳಿಸಿದ್ದಾರೆ. ಕಾವೇರಿ ಕನ್ನಡ ವೇದಿಕೆ ಹಾಗೂ ಗೆಳೆಯರ ಬಳಗ ನಾಗರಿಕ ವೇದಿಕೆ ಕೂಡ ಯಲ್ಲಮ್ಮ ದೇವಿ ಭಕ್ತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ.

ಜಗ್ಗೇಶ್‌ ಅಭಿಮಾನಿಗಳದು ದುರದ್ದೇಶ

‘ಯಲ್ಲಮ್ಮ ದೇವಿ ಭಕ್ತರು ಯಾರಿಂದಲೋ ದುಡ್ಡು ಪಡೆದು ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಜಗ್ಗೇಶ್‌ ಅಭಿಮಾನಿಗಳು ಆಪಾದಿಸಿರುವುದನ್ನು ದುರುದ್ದೇಶದ ಹೇಳಿಕೆ ಎಂದು ಯಲ್ಲಮ್ಮ ದೇವಿ ಅಭಿಮಾನಿಗಳ ಒಕ್ಕೂಟದ ಹೋರಾಟದಲ್ಲಿ ಭಾಗವಹಿಸಿರುವ ತಲಕಾಡು ಚಿಕ್ಕರಂಗೇಗೌಡ ಹೇಳಿದ್ದಾರೆ.

ಯಲ್ಲಮ್ಮ ದೇವಿ ಭಕ್ತರು ತಮ್ಮ ದುಡಿಮೆಯಿಂದ ಜಾತ್ರೆ ನಡೆಸುತ್ತಾರೆಯೇ ಹೊರತು ಮತ್ತಾರದೋ ದುಡ್ಡಿನಿಂದಲ್ಲ ಎಂದೂ ಚಿಕ್ಕರಂಗೇಗೌಡ ಹೇಳಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada