For Quick Alerts
  ALLOW NOTIFICATIONS  
  For Daily Alerts

  ಕೊಲೆ ಬೆದರಿಕೆ -ಸುಷ್ಮಾ ದೂರು

  By Staff
  |
  • ದಟ್ಸ್‌ಕನ್ನಡ ಬ್ಯೂರೊ
  ‘ಅಯ್ಯೋ ಪಾಂಡು’ ಚಿತ್ರದ ನಿರ್ಮಾಪಕರು ತಮಗೆ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಚಿತ್ರದ ನಾಯಕಿ ಸುಷ್ಮಾ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಎಸ್‌.ಮರಿಸ್ವಾಮಿ ಅವರಿಗೆ ದೂರು ಸಲ್ಲಿಸಿದ್ದಾರೆ.

  ಚಿತ್ರದ ನಿರ್ಮಾಪಕರಾದ ಉಮೇಶ್‌ ಬಣಕಾರ್‌, ನರೇಶ್‌ ಜೈನ್‌ ಹಾಗೂ ಭಾ.ಮಾ.ಹರೀಶ್‌ ತಮಗೆ ಕೊಲೆ ಬೆದರಿಕೆ ಒಡ್ಡಿದ್ದಾರೆ. ಈ ಮೂರು ಮಂದಿ ಮುಂಚಿನಿಂದಲೂ ತಮಗೆ ತೊಂದರೆ ಕೊಡುತ್ತಿದ್ದರು ಎಂದು ಸುಷ್ಮಾ ತಮ್ಮ ದೂರಿನಲ್ಲಿ ಆಪಾದಿಸಿದ್ದಾರೆ. ಈ ದೂರನ್ನು ಪೊಲೀಸ್‌ ಆಯುಕ್ತ ಮರಿಸ್ವಾಮಿ ಅವರು ಹೆಚ್ಚಿನ ತನಿಖೆಗಾಗಿ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ಹಸ್ತಾಂತರಿಸಿದ್ದಾರೆ.

  ಮಾ.13ರ ಶನಿವಾರ ರಾಜರಾಜೇಶ್ವರಿನಗರದ ಕ್ಲಬ್‌ ಒಂದರಲ್ಲಿ ತಮ್ಮನ್ನು ಭೇಟಿಯಾದ ಮೂವರು ನಿರ್ಮಾಪಕರು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆ್ಯಸಿಡ್‌ ಎರಚುವುದಾಗಿ, ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದರು ಎಂದು ಸುಷ್ಮಾ ಹೇಳಿದ್ದಾರೆ.

  ಆರೋಪಿಗಳ ಮಾತುಗಳನ್ನು ಮೊಬೈಲ್‌ ಫೋನ್‌ ರೆಕಾರ್ಡರ್‌ನಲ್ಲಿ ದಾಖಲಿಸಿಕೊಂಡಿದ್ದೇನೆ. ಆರೋಪಿಗಳು ನನ್ನ ಮೊಬೈಲ್‌ಗೆ ಮಾಡಿರುವ 18 ಕರೆಗಳನ್ನು ಸ್ವೀಕರಿಸಿದ್ದೇನೆ. 48 ಮಿಸ್ಡ್‌ ಕಾಲ್‌ಗಳು ಕೂಡ ಮೊಬೈಲ್‌ನಲ್ಲಿ ದಾಖಲಾಗಿವೆ ಎಂದು ಸುಷ್ಮಾ ದೂರಿನಲ್ಲಿ ತಿಳಿಸಿದ್ದಾರೆ.

  ಎಲ್ಲಾ ಬರೀ ಸುಳ್ಳು :

  ನಟಿ ಸುಷ್ಮಾ ಅವರು ತಮ್ಮ ವಿರುದ್ಧ ಸಲ್ಲಿಸಿರುವ ದೂರಿನಲ್ಲಿ ಸ್ವಲ್ಪವೂ ಸತ್ಯಾಂಶವಿಲ್ಲ ಎಂದು ನಿರ್ಮಾಪಕ ಭಾ.ಮ.ಹರೀಶ್‌ ಹೇಳಿದ್ದಾರೆ.

  ಮಾರ್ಚ್‌ 26ರಂದು ‘ಅಯ್ಯೋ ಪಾಂಡು’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಯುಗಾದಿ ದಿನದಂದು ಟೀವಿ ವಾಹಿನಿಯಾಂದರಲ್ಲಿ ಚಿತ್ರದ ಕುರಿತು ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಲು ಉದ್ದೇಶಿಸಿದ್ದು , ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಷ್ಮಾ ಅವರನ್ನು ಕೇಳಿದಾಗ ಅವರು ಅನಗತ್ಯ ವಿವಾದ ಸೃಷ್ಟಿಸಿದ್ದಾರೆ ಎಂದು ಹರೀಶ್‌ ದೂರಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ತಾವು ಸ್ಪರ್ಧಿಸುತ್ತಿದ್ದು , ಈ ಸಂದರ್ಭದಲ್ಲಿ ಸುಷ್ಮಾ ಅವರ ಆಪಾದನೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದೂ ಅವರು ಹೇಳಿದ್ದಾರೆ.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X