»   » ಸಿಮ್ರಾನ್‌ ತಂಗಿ ಮೋನಾಲ್‌ ಆತ್ಮಹತ್ಯೆ

ಸಿಮ್ರಾನ್‌ ತಂಗಿ ಮೋನಾಲ್‌ ಆತ್ಮಹತ್ಯೆ

Posted By:
Subscribe to Filmibeat Kannada

ಸೂರ್ಯ ಹುಟ್ಟುವ ಮುನ್ನವೇ ಜಾಗಿಂಗ್‌ಗೆ ಹೊರಡುತ್ತಿದ್ದ ನೀಳ ಕಾಯದ ಚೆಲುವೆ, ತಮಿಳು ಸಿನಿಮಾ ನಟಿ ಮೋನಾಲ್‌ ಇನ್ನಿಲ್ಲ!

ಈ ಮಾತನ್ನು ಕೇಳಿದೊಡನೆ ಅನೇಕರು ನಂಬಲಿಲ್ಲ. ಇನ್ನೂ ಇಪ್ಪತ್ತೊಂದು ವಯಸ್ಸು. ಯಾವುದೇ ಪ್ರೇಮ ಪ್ರಕರಣದ ಗಾಳಿ ಸುದ್ದಿಯೂ ಚಾಲ್ತಿಯಲ್ಲಿರಲಿಲ್ಲ. ಭರಪೂರ ಪ್ರತಿಭೆ. ಅದಕ್ಕೆ ತಕ್ಕ ಛಾತಿ. ಸಿನಿಮಾ ಲೋಕದಲ್ಲಿ ತಳವೂರಿರುವ ಅಕ್ಕ ಸಿಮ್ರಾನ್‌ ಬೆಂಬಲ, ಮಾಡೆಲಿಂಗ್‌ ಹಾಗೂ ಬಾಲಿವುಡ್‌ಗೆ ಬುಲಾವು ಇಷ್ಟೆಲ್ಲಾ ಅವಕಾಶಗಳು ಈಕೆಯತ್ತ ಹರಿದು ಬರುತ್ತಿತ್ತು. ಇಂಥಾದರಲ್ಲೂ ಮೊನಾಲ್‌ ನೇಣು ಹಾಕಿಕೊಂಡಿದ್ದಾಳೆ. ಇದಕ್ಕೆ ನಿಖರ ಕಾರಣ ಗೊತ್ತಾಗಿಲ್ಲ.

ಭಾನುವಾರ ಮೋನಾಲ್‌ ತನ್ನ ರೂಮಿನಲ್ಲಿ ನೇಣು ಹಾಕಿಕೊಂಡಿದ್ದಳು. ಕಾರ್ಪೊರೇಟ್‌ ಆಸ್ಪತ್ರೆಗೆ ಒಯ್ದರೂ, ಅಷ್ಟು ಹೊತ್ತಿಗೆ ಪ್ರಾಣಪಕ್ಷಿ ಹಾರಿಹೋಗಿತ್ತು. ಅಪ್ಪ- ಅಮ್ಮ ಹಾಗೂ ಮೂವರು ಸೋದರಿಯರನ್ನು ಮೋನಾಲ್‌ ಅಗಲಿದ್ದಾಳೆ. ತನ್ನ ಅಮ್ಮನ ಸೋದರಿಯಿಂದ ದತ್ತು ತೆಗೆದುಕೊಳ್ಳಲ್ಪಟ್ಟ ಮೋನಾಲ್‌ ಕಳೆದ ಮೂರು ವರ್ಷಗಳಿಂದ ಆಕೆಯ ಜೊತೆಯಲ್ಲೇ ಇದ್ದಳು.

ಮುಂಬಯಿಯ ಮಿಥಿಬಾಯ್‌ ಕಾಲೇಜಲ್ಲಿ ಬಿಕಾಂ ಓದುತ್ತಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸೈ ಎನಿಸಿಕೊಂಡಿದ್ದ ಮೋನಾಲ್‌, ಚಿಕ್ಕ ವಯಸ್ಸಿನಲ್ಲೇ ಮಿಸ್‌ ಬಾಂಬೆ, ಮಿಸ್‌ ಮೀಡಿಯಾ ಅಗ್ಗಳಿಕೆಗೆ ಪಾತ್ರವಾದವಳು. ಮೊದಲ ತಮಿಳು ಸಿನಿಮಾ ‘ಬದ್ರಿ’ಯಲ್ಲಿ ಮಿಂಚಿದ ಮೋನಾಲ್‌ಗೆ ಸಮುತಿರಂ ಹಾಗೂ ಚಾರ್ಲಿ ಚಾಪ್ಲಿನ್‌ ಹೆಸರು ತಂದುಕೊಟ್ಟವು. ಒಟ್ಟು 6 ತಮಿಳು, ಎರಡು ಮಲೆಯಾಳಂ ಹಾಗೂ ಒಂದು ಹಿಂದಿ ಸಿನಿಮಾದಲ್ಲಿ ನಟಿಸಿರುವ ಮೋನಾಲ್‌ ಸೆಳಕಿನ ಬಿಂದಾಸ್‌ ಹುಡುಗಿ. ಈಜಾಡುವುದು ಈಕೆಗೆ ತುಂಬಾ ನೆಚ್ಚಾಗಿತ್ತು.

ಶಾರುಖ್‌ ಖಾನ್‌ ಜೊತೆ ನಟಿಸಬೇಕೆಂಬ ಈಕೆಯ ಕನಸು ಕನಸಾಗೇ ಸತ್ತುಹೋಗಿದೆ. ಸಾವಿನ ಸುತ್ತ ಹತ್ತು ಹಲವು ಕತೆಗಳು ಬಿಚ್ಚಿಕೊಳ್ಳತೊಡಗಿವೆ. ಇವುಗಳಲ್ಲಿ ಯಾವುದು ನಿಜ ಎಂಬುದರ ಬೆನ್ನೇರಿ ಚೆನ್ನೈ ಪೊಲೀಸರು ಹೊರಟಿದ್ದಾರೆ.

Post Your Views?

ವಾರ್ತಾ ಸಂಚಯ
ತಾರಾತೋಟದಲ್ಲಿ ಉಲ್ಕಾಪಾತ : ಆತ್ಮಹತ್ಯೆ ರೂಪದ ಜೀವಪಾತ!

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada