»   » ಜಯಮಾಲಾ ಮೇಲೆ ವಿಹೆಚ್‌ಪಿ ಕಾರ್ಯಕರ್ತರಿಂದ ಹಲ್ಲೆ

ಜಯಮಾಲಾ ಮೇಲೆ ವಿಹೆಚ್‌ಪಿ ಕಾರ್ಯಕರ್ತರಿಂದ ಹಲ್ಲೆ

Subscribe to Filmibeat Kannada


ಬೆಂಗಳೂರು : ನಟಿ ಜಯಮಾಲಾ ಮೇಲೆ ಹಲ್ಲೆಗೆ ಯತ್ನಿಸಿದ ವಿಶ್ವ ಹಿಂದೂ ಪರಿಷತ್ತು ವರ್ತನೆ ಬಗ್ಗೆ, ರಾಜ್ಯದಲ್ಲಿ ಮಂಗಳವಾರ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ವಿಶ್ವ ಹಿಂದೂ ಪರಿಷತ್ತಿನ ಕಾಸರಗೋಡು ಘಟಕ, ಜಯಮಾಲಾ ಮೇಲೆ ಭಾನುವಾರ ಹಲ್ಲೆಗೆ ಯತ್ನಿಸಿತ್ತು. ಅವರ ಕಾರಿಗೆ ಚಪ್ಪಲಿ ಮತ್ತು ಕಲ್ಲು ತೂರಿತ್ತು. ಪ್ರತಿರೋಧದಿಂದಾಗಿ ಕೇರಳವನ್ನು ಜಯಮಾಲಾ ತೊರೆದಿದ್ದರು.

ಜಯಮಾಲಾ ವಿರುದ್ಧದ ಸಿಡಿಮಿಡಿಗೆ, ಶಬರಿ ಮಲೆ ಅಯ್ಯಪ್ಪ ಸ್ವಾಮಿಯ ಪಾದಸ್ಪರ್ಶ ಪ್ರಕರಣವೇ ಮೂಲ ಕಾರಣ. ಕಾಸರಗೋಡು ಸಮೀಪದ ಪೆರ್ಲಗೆ ರಂಗ ಚಟುವಟಿಕೆಯಾಂದರ ಉದ್ಘಾಟನೆಗಾಗಿ ಜಯಮಾಲಾ ಭಾನುವಾರ ಆಗಮಿಸಿದ್ದರು. ಆ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತು ಕಾರ್ಯಕರ್ತರು, ಪ್ರತಿಭಟನೆಗೆ ಮುಂದಾದರು.

ಕೂಡಲೇ ಕಾರು ಹತ್ತಿದ ಜಯಮಾಲಾ ಬೆಂಗಳೂರಿಗೆ ಮರಳಿದರು. ಈ ಸಂದರ್ಭದಲ್ಲಿ ಅವರ ಕಾರಿಗೆ ಚಪ್ಪಲಿ ತೂರಿದರು ಎನ್ನಲಾಗಿದೆ.

(ಏಜನ್ಸೀಸ್‌)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada