»   » ತಾತ್ಕಾಲಿಕ ಕದನ ವಿರಾಮ ; ಹೊಸ ಕನ್ನಡ ಚಿತ್ರಗಳಿಗೆ ಸ್ವಾತಂತ್ರ್ಯ

ತಾತ್ಕಾಲಿಕ ಕದನ ವಿರಾಮ ; ಹೊಸ ಕನ್ನಡ ಚಿತ್ರಗಳಿಗೆ ಸ್ವಾತಂತ್ರ್ಯ

Subscribe to Filmibeat Kannada

ಬೆಂಗಳೂರು : ಸರ್ಕಾರದ ಮಧ್ಯ ಪ್ರವೇಶದಿಂದ ರಾಜ್ಯ ಚಲನಚಿತ್ರ ಪ್ರದರ್ಶಕರ ಮಹಾ ಮಂಡಲ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದು , ಆಗಸ್ಟ್‌ 15ರ ಶುಕ್ರವಾರದಿಂದ ಹೊಸ ಕನ್ನಡ ಚಿತ್ರಗಳನ್ನು ತೆರೆ ಕಾಣಿಸಲು ಒಪ್ಪಿಕೊಂಡಿದೆ.

ವಾರ್ತಾ ಸಚಿವ ಅಲ್ಲಂ ವೀರಭದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಆ.14ರ ಗುರುವಾರ ನಡೆದ ಖಾಜಿ ನ್ಯಾಯದ ಸಭೆ ಫಲಕೊಟ್ಟಿತು. ಪ್ರದರ್ಶಕರ ಬೇಡಿಕೆಗಳನ್ನು ಮುಂದಿನ ಸಂಪುಟ ಸಭೆಯಲ್ಲಿ ಪರಿಶೀಲಿಸುವುದಾಗಿ ಅಲ್ಲಂ ವೀರಭದ್ರಪ್ಪ ಅವರು ನೀಡಿದ ಭರವಸೆಯನ್ನು ಒಪ್ಪಿಕೊಂಡ ಪ್ರದರ್ಶಕರು- ಶುಕ್ರವಾರದಿಂದ ಹೊಸ ಚಿತ್ರಗಳನ್ನು ಪ್ರದರ್ಶಿಸಲು ಸಮ್ಮತಿಸಿದರು.

ಸುಮಾರು ಎರಡೂ ಗಂಟೆಗಳ ಕಾಲ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಪ್ರದರ್ಶಕರ ಮಹಾ ಮಂಡಳಿ ಹಾಗೂ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ನಿರ್ಮಾಪಕರ ವೇದಿಕೆಯ ಪ್ರತಿನಿಧಿಗಳು ಭಾಗವಹಿಸಿದ್ದರು.

ಚಂದ್ರಚಕೋರಿ ತೆರೆಗೆ : ತಾತ್ಕಾಲಿಕ ಕದನ ವಿರಾಮದ ಅಂಗವಾಗಿ ಎಚ್‌.ಡಿ.ಕುಮಾರಸ್ವಾಮಿ ನಿರ್ಮಿಸಿರುವ ಚಂದ್ರ ಚಕೋರಿ ಚಿತ್ರ ಆಗಸ್ಟ್‌ 15ರಂದು ತೆರೆ ಕಾಣುವುದು ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ರಮೇಶ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಕೃಷ್ಣ ಪಡಸಾಲೆಗೆ ಸಿನಿಮಾ ಕಿರಿಕ್ಕಿಗೆ ಪರಿಹಾರ ಕೋರಿ ಮನವಿ ಪತ್ರ
ರಾಜ್‌ಕುಮಾರ್‌ ಮನಸ್ಸಿಗೆ ಆಘಾತ


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada