»   » 'ದೇವರನಾಡ'ಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಬೀಡು ಬಿಟ್ಟಿರುವುದೇಕೆ?

'ದೇವರನಾಡ'ಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಬೀಡು ಬಿಟ್ಟಿರುವುದೇಕೆ?

By: ಹರಾ
Subscribe to Filmibeat Kannada

ರಾಜಕೀಯ ರಂಗದಲ್ಲಿ ಸಿಕ್ಕಾಪಟ್ಟೆ ಬಿಜಿಯಿರುವ ಚಿರಂಜೀವಿ, ಫುಲ್ ಟೈಮ್ ಹೀರೋ ಆಗಿ ತೆರೆಮೇಲೆ ಕಾಣಿಸಿಕೊಂಡು ಬರೋಬ್ಬರಿ ಎಂಟು ವರ್ಷಗಳಾಗಿವೆ. ಅದರ ಮಧ್ಯೆ ಮುದ್ದಿನ ಮಗನ 'ಮಗಧೀರ' ಮತ್ತು 'ಜಗದ್ಗುರು ಆದಿ ಶಂಕರ' ಚಿತ್ರಗಳಲ್ಲಿ ಹೀಗೆ ಬಂದು ಹಾಗೆ ಹೋಗಿದ್ದ ಚಿರು, ಚಿತ್ರಗಳಲ್ಲಿ ತಮ್ಮ 'ಮೆಗಾ' ಪವರ್ ತೋರಿಸಿದ್ದೇ ಇಲ್ಲ.

ಸಿನಿ ಅಂಗಳದಲ್ಲಿ 149 ರನ್ ಬಾರಿಸಿರುವ ಚಿರಂಜೀವಿ, ತಮ್ಮ 150 ನೇ ಸ್ಕೋರ್ ಗೋಸ್ಕರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವರ್ಷಗಳಿಂದ ಉತ್ತಮ ಸ್ಕ್ರಿಪ್ಟ್ ಗಳಿಗಾಗಿ ಕಾಯುತ್ತಿರುವ ಚಿರಂಜೀವಿ, ಆಗಲೇ ತಮ್ಮ ಬಹುನಿರೀಕ್ಷಿತ ಚಿತ್ರಕ್ಕೋಸ್ಕರ ತಯಾರಿ ಶುರುಮಾಡಿದ್ದಾರೆ.

ಇದಕ್ಕೋಸ್ಕರ 'ದೇವರನಾಡು' ಕೇರಳಗೆ ಹಾರಿದ್ದಾರೆ 'ಮೆಗಾ ಸ್ಟಾರ್' ಚಿರಂಜೀವಿ. ಅಸಲಿಗೆ ಕೇರಳದಲ್ಲಿ ಚಿರು ಮಾಡುತ್ತಿರುವುದಾದರೂ ಏನಪ್ಪಾ ಅಂದ್ರೆ, ಅಲ್ಲಿನ ಪ್ರಸಿದ್ಧ 'ಸ್ಪಾ' ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರಂತೆ.

chiranjeevi

ತಮ್ಮ ದೇಹವನ್ನ ಕಟ್ಟುಮಸ್ತಾಗಿ ಮಾಡಿಕೊಳ್ಳಲು ಮತ್ತು ಚಿರಯೌವನವನ್ನ ಕಾಪಾಡಿಕೊಳ್ಳಲು ಕೇರಳದ ಸ್ಟೈಲ್ ನಲ್ಲಿ ಬಾಡಿ ಮಸಾಜ್ ಮತ್ತು ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರಂತೆ.

ಮೂಲಗಳ ಪ್ರಕಾರ, ಕೇರಳ ಆಯುರ್ವೇದ ಪಂಡಿತರ ಸಲಹೆಯ ಮೇರೆಗೆ ಚಿರಂಜೀವಿ ಡಯೆಟ್ ಕೂಡ ಶುರುಮಾಡಿದ್ದಾರೆ. ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, ಕೇರಳದಲ್ಲಿ ಚಿಕಿತ್ಸೆ ಪಡೆಯುವುದರ ಜೊತೆಗೆ ಸ್ಕ್ರಿಪ್ಟ್ ಡಿಸ್ಕಷನ್ ನಲ್ಲೂ ಪಾಲ್ಗೊಂಡಿದ್ದಾರಂತೆ ಚಿರಂಜೀವಿ. [ವೇದಿಕೆಯಲ್ಲಿ ಚಿರಂಜೀವಿ 'ಅನುರಾಗ ಅರಳಿದಾಗ']

ಸೂಪರ್ ಹಿಟ್ ಚಿತ್ರಗಳಾದ 'ಖೈದಿ', 'ಕೊಂಡವೀಟಿ ದೊಂಗ' ಮತ್ತು 'ಸ್ಟಾಲಿನ್' ಸೇರಿದಂತೆ ಅನೇಕ ಚಿತ್ರಗಳಿಗೆ ಕಥೆ ರಚಿಸಿದ್ದ ಪರುಚೂರಿ ಸಹೋದರರು ಚಿರಂಜೀವಿಯ 150ನೇ ಸಿನಿಮಾಗೆ ಚಿತ್ರಕಥೆ ರಚಿಸುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿರುವುದು ಕೇರಳದಲ್ಲೇ! [ಚಿರಂಜೀವಿ 150ನೇ ಚಿತ್ರಕ್ಕೆ ತಮಿಳಿನ ಶಂಕರ್ ಆಕ್ಷನ್ ಕಟ್]

ಅಭಿಮಾನಿಗಳ ಆಸೆಗೆ ತಣ್ಣೀರೆರಚದೇ, ತಮ್ಮ 150 ನೇ ಚಿತ್ರಕ್ಕೆ ಚಿರಂಜೀವಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಸ್ಕ್ರಿಪ್ಟ್ ಫೈನಲ್ ಆಗಿ ನಿರ್ದೇಶಕರ ಹೆಸರು ಅಧಿಕೃತವಾದರೆ, ಸದ್ಯದಲ್ಲೇ ಚಿರು ಬಣ್ಣ ಹಚ್ಚಿ ಅಖಾಡಕ್ಕೆ ಇಳಿಯುತ್ತಾರೆ. (ಏಜೆನ್ಸೀಸ್)

English summary
Mega Star Chiranjeevi is gearing up for his 150th film. The latest buzz is that, Chiranjeevi, who is currently in Kerala, has checked into a Spa for Ayurvedic massage and Rejuvenation Therapy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada