»   » ಅರೆ ಬೆತ್ತಲೆ ಪೋಸ್‌ ಕೊಟ್ಟ ಸೋನಾಲಿ ಕೋರ್ಟಿಗೆ ಬೇಕಾಗಿದ್ದಾರೆ !

ಅರೆ ಬೆತ್ತಲೆ ಪೋಸ್‌ ಕೊಟ್ಟ ಸೋನಾಲಿ ಕೋರ್ಟಿಗೆ ಬೇಕಾಗಿದ್ದಾರೆ !

Posted By:
Subscribe to Filmibeat Kannada

ಮುಂಬಯಿ : 'ಪ್ರೀತ್ಸೆ" ಚಿತ್ರದ ಚುಕ್ಕಿ ಚೆಲುವೆ ಸೋನಾಲಿ ಬೇಂದ್ರೆ ವಿರುದ್ಧ ಸೋಮವಾರ ನಗರ ಮ್ಯಾಜಿಸ್ಟ್ರೇಟರು ಜಾಮೀನು ರಹಿತ ವಾರೆಂಟ್‌ ಹೊರಡಿಸಿದ್ದಾರೆ.

ಇದಕ್ಕೆ ಕಾರಣ ಇಷ್ಟೆ-
'ಶೋಟೈಮ್‌" ನಿಯತಕಾಲಿಕದ 1998ರ ಸಂಚಿಕೆಯಾಂದರ ಮುಖಪುಟದಲ್ಲಿ ಸೋನಾಲಿಯ ಅರೆಬೆತ್ತಲೆ ಚಿತ್ರ ಪ್ರಕಟವಾಗಿತ್ತು. ಫೋಟೋಗ್ರಾಫರ್‌ ಅಮಿತ್‌ ಅಶರ್‌, ವಸ್ತ್ರ ವಿನ್ಯಾಸಗಾರ ಆ್ಯಷ್ಲೆ ರೆಬೆಲ್ಲೊ ಸಮೇತ ಸೋನಾಲಿ ಬೇಂದ್ರೆಯನ್ನು ಮಾರ್ಚ್‌ 2001ರಲ್ಲಿ ನಗರದ ಸಮಾಜ ಸೇವಾ ಪೊಲೀಸ್‌ ಘಟಕ ಬಂಧಿಸಿತ್ತು. ನಿಯತಕಾಲಿಕದ ಪ್ರಕಾಶಕ ನೀಲಕಂಠ ಗಿರಿ ಇನ್ನೊಬ್ಬ ಆರೋಪಿ.

ಈ ಮೊದಲೇ ನಗರ ಮ್ಯಾಜಿಸ್ಟ್ರೇಟರು ಕೊಟ್ಟ ನೋಟೀಸಿನ ಪ್ರಕಾರ ಅಕ್ಟೋಬರ್‌ 14ರಂದು ಆರೋಪಿಗಳೆಲ್ಲಾ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಸೋನಾಲಿ ಕೈಕೊಟ್ಟರು. ಉಳಿದೆಲ್ಲರೂ ಹಾಜರಾದರು. ಸೋನಾಲಿ ವಕೀಲರಾದ ಧರ್ಮೇದ್ರ ರೋಹ್ರಾ ಮತ್ತು ಅಶೋಕ್‌ ಶಹಾನಿ ವಾರೆಂಟ್‌ಗೆ ನಿಲುಗಡೆ ತರುವ ಯತ್ನ ಮಾಡಿದರಾದರೂ, ಅದು ವಿಫಲವಾಯಿತು.

ಸೋನಾಲಿ ಬೇಂದ್ರೆ ಈಗ ಕೋರ್ಟಿಗೆ ಹಾಜರಾಗಲೇಬೇಕಿದೆ. ಯಾಕಪ್ಪಾ ಬೇಕಿತ್ತು ಅರೆ ಬೆತ್ತಲೆ ಆಟ !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada