»   » ‘ಕಂಬಾಲಹಳ್ಳಿ’ ನಿರ್ಮಾಪಕರ ವಿರುದ್ಧ ದೂರು

‘ಕಂಬಾಲಹಳ್ಳಿ’ ನಿರ್ಮಾಪಕರ ವಿರುದ್ಧ ದೂರು

Subscribe to Filmibeat Kannada

ಬೆಂಗಳೂರು : ಸೆನ್ಸಾರ್‌ ಪ್ರಮಾಣಪತ್ರವನ್ನು ಜಾಹಿರಾತು ಹಾಗೂ ಪೋಸ್ಟರ್‌ಗಳಲ್ಲಿ ಪ್ರಕಟಿಸದಿರುವ ಕಂಬಾಲಹಳ್ಳಿ ಸಿನಿಮಾ ನಿರ್ಮಾಪಕರು ಹಾಗೂ ವಿತರಕರ ವಿರುದ್ಧ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಕಂಬಾಲಹಳ್ಳಿ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದ್ದು , ಈ ಕುರಿತ ವಿವರಗಳು ಚಿತ್ರದ ಪೋಸ್ಟರ್‌ನಲ್ಲಾಗಲೀ ಅಥವಾ ಜಾಹಿರಾತಿನಲ್ಲಾಗಲೀ ಪ್ರದರ್ಶಿಸಲಾಗಿಲ್ಲ ಎಂದು ಸೆಂಟ್ರಲ್‌ ಬೋರ್ಡ್‌ ಆಫ್‌ ಫಿಲ್ಮ್‌ ಸರ್ಟಿಫಿಕೇಟ್‌ನ ಪ್ರಾದೇಶಿಕ ಅಧಿಕಾರಿ ಎಚ್‌.ವಿ.ಕೃಷ್ಣಮೂರ್ತಿ ಅವರು ಪೊಲೀಸ್‌ ಆಯುಕ್ತರಿಗೆ ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಪ್ರಸ್ತುತ ಸಂತೋಷ್‌ ಚಿತ್ರಮಂದಿರದಲ್ಲಿ ಕಂಬಾಲಹಳ್ಳಿ ಚಿತ್ರ ಪ್ರದರ್ಶನ ಕಾಣುತ್ತಿದ್ದು , ನಿರ್ಮಾಪಕರು/ವಿತರಕರ ಬಗ್ಗೆ ದಾಖಲಿಸಿಕೊಂಡಿರುವ ದೂರಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

(ಇನ್ಫೋ ವಾರ್ತೆ)

Post your Views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...