»   » ಸಿನಿಮಾ ಬಿಕ್ಕಟ್ಟಿನ ಮದ್ದಿಗೆ ಡಿ.17ರಂದು ಮಾತುಕತೆ -ಪರಮೇಶ್ವರ್‌

ಸಿನಿಮಾ ಬಿಕ್ಕಟ್ಟಿನ ಮದ್ದಿಗೆ ಡಿ.17ರಂದು ಮಾತುಕತೆ -ಪರಮೇಶ್ವರ್‌

Subscribe to Filmibeat Kannada

ಬೆಂಗಳೂರು : ಸೇವಾಶುಲ್ಕ ಸಂಬಂಧ ಕನ್ನಡ ಚಿತ್ರೋದ್ಯಮದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸುವುದಕ್ಕಾಗಿ, ಚಿತ್ರ ನಿರ್ಮಾಪಕರು ಹಾಗೂ ಪ್ರದರ್ಶಕರ ಸಭೆ ಕರೆಯುವುದಾಗಿ ನೂತನ ಉನ್ನತ ಶಿಕ್ಷಣ ಹಾಗೂ ವಾರ್ತಾ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಡಿ.17ರಂದು ಪ್ರದರ್ಶಕರು ಹಾಗೂ ನಿರ್ಮಾಪಕರ ಸಭೆ ಕರೆಯುವುದಾಗಿ ಸಚಿವ ಪರಮೇಶ್ವರ್‌ ಸೋಮವಾರ (ಡಿ.15) ಸುದ್ದಿಗಾರರಿಗೆ ತಿಳಿಸಿದರು.

ಸೇವಾಶುಲ್ಕವನ್ನು ರದ್ದುಪಡಿಸಿರುವ ಸರ್ಕಾರದ ಆದೇಶವನ್ನು ಪ್ರತಿಭಟಿಸಿ ಡಿ.22ರಿಂದ ಚಿತ್ರಪ್ರದರ್ಶನವನ್ನು ನಿಲ್ಲಿಸಲು ಚಿತ್ರಮಂದಿರಗಳ ಮಾಲಿಕರು ನಿರ್ಧರಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್‌, ಮಾತುಕತೆಯ ಮೂಲಕ ಬಿಕ್ಕಟ್ಟು ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಅಲ್ಲಂ ವೀರಭದ್ರಪ್ಪ ಅವರು ಈ ಮುನ್ನ ವಾರ್ತಾ ಸಚಿವರಾಗಿದ್ದರು. ಕಳೆದ ವಾರ ನಡೆದ ಮಂತ್ರಿ ಮಂಡಳ ಪರಿಷ್ಕರಣೆ ಸಂದರ್ಭದಲ್ಲಿ ಪರಮೇಶ್ವರ್‌ ಅವರಿಗೆ ಉನ್ನತ ಶಿಕ್ಷಣ ಖಾತೆಯಾಂದಿಗೆ ವಾರ್ತಾ ಇಲಾಖೆಯ ನಿರ್ವಹಣೆಯೂ ದೊರೆತಿದೆ. ವಾರ್ತಾ ಇಲಾಖೆಯ ನೂತನ ಸಚಿವರಿಗೆ ಚಿತ್ರೋದ್ಯಮದ ಬಿಕ್ಕಟ್ಟು ಸವಾಲಾಗಿ ಪರಿಣಮಿಸಿದೆ.

(ಇನ್ಫೋ ವಾರ್ತೆ)

Post your views

ವಾರ್ತಾ ಸಂಚಯ
ಬೆಳ್ಳಿತೆರೆಗೆ ಡಿ.22ರಿಂದ ಕಪ್ಪು !


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada