ಸಿಐಡಿಗೆ ಚಳ್ಳೆಹಣ್ನು ತಿನ್ನಿಸಿ ಅಮೆರಿಕಾಗೆ ಹಾರಿದ ರಂಜಿತಾ
ನಿತ್ಯಾನಂದ ರಾಸಲೀಲೆ ಪ್ರಸಂಗದ ಪ್ರಮುಖ ಪಾತ್ರಧಾರಿಣಿ ಕಮ್ ಸಾಕ್ಷಿಯಾಗಿರುವ ನಟಿ ರಂಜಿತಾ ಸಿಐಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಅಮೆರಿಕಕ್ಕೆ ಎಸ್ಕೇಪ್ ಆಗಿದ್ದಾರೆ. ಅಮೆರಿಕಾದಲ್ಲಿ ಸೋದರಿಯ ಜೊತೆಗಿರುವ ರಂಜಿತಾ ಎಸ್ಕೇಪ್ ಆಗಿದ್ದು ಯಾಕೆ ಎಂಬ ಪತ್ರವನ್ನು ಸಿಐಡಿಗೆ ಕಳುಹಿಸಿದ್ದಾರಂತೆ.
ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ವಿಚಾರಣೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ , ಆರೋಗ್ಯ ಸುಧಾರಿಸಿದ ನಂತರ ವಿಚಾರಣೆಗೆ ಖುದ್ದು ಹಾಜರಾಗುತ್ತೇನೆ. ಅಲ್ಲಿಯವರೆಗೂ ನನಗಾಗಿ ವ್ಯರ್ಥಹುಡುಕಾಟ ನಡೆಸಬೇಡಿ ಎಂದು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರಂತೆ.
ಆದರೆ, ರಂಜಿತಾಳಿಂದ ಯಾವುದೇ ಪತ್ರ ಬಂದಿಲ್ಲ. ಈ ವರೆಗೂ ವಿಚಾರಣೆಗೆ ಹಾಜರಾಗಿಲ್ಲ, ನಿತ್ಯಾನಂದ ಕಾಮಕೇಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ನೋಟಿಸ್ ಗೆ ಉತ್ತರವನ್ನೇ ನೀಡಿಲ್ಲ . ರಂಜಿತಾ ಆಗಲಿ , ಆಕೆಯ ವಕೀಲರಾಗಲಿ ನಮ್ಮ ಕಚೇರಿಯನ್ನು ಸಂಪರ್ಕಿಸಿಲ್ಲ ಎಂದು ಸಿಐಡಿ ಎಸ್ಪಿ ಯೋಗಪ್ಪ ಹೇಳುತ್ತಾರೆ.
ನಿತ್ಯಾನಂದನ ಲೈಂಗಿಕ ಹಗರಣ ಸಾಬೀತು ಪಡಿಸಲು ರಂಜಿತಾ ಅವರ ವಿಚಾರಣೆ ಅವಶ್ಯ ಹೆಚ್ಚಾಗಿದೆ. ಅವರನ್ನು ಕರೆತರುವ ಪ್ರಯತ್ನ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. ಆದರೆ, ನೋಟಿಸ್ ಗೆ ಉತ್ತರ ಕೊಡದ ರಂಜಿತಾ , ಅಮೆರಿಕದಲ್ಲಿ ಕೂತು ನಿತ್ಯಾನಂದನ ಪಂಚಾಗ್ನಿ ಶುದ್ಧಿಕರಣ ಯೋಗವನ್ನು ವೀಕ್ಷಿಸುತ್ತಿದ್ದಾರೆ ಎಂದು ಸುದ್ದಿ ಹಬ್ಬಿದೆ.


Click it and Unblock the Notifications











