ಶ್ರುತಿ ಒಂಟಿ ಬಾಳಿನಲ್ಲಿ ಮತ್ತೆ ಮುಂಗಾರು?

By Shami

Kannada Actress Shruthi
ಕೌರವ, ಗಂಡನ ಮನೆ, ಕರ್ಪೂರದಾ ಗೊಂಬೆ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಮಹೇಂದರ್ ಮತ್ತು ತಾಯಿಯಿಲ್ಲದ ತಬ್ಬಲಿ, ಗಟ್ಟಿಮೇಳ, ಬೊಂಬಾಟ್ ಹೆಂಡ್ತಿ ಚಿತ್ರಗಳ ನಟಿ ಶ್ರುತಿ ಅವರ ದಾಂಪತ್ಯ ಜೀವನಕ್ಕೆ ನಿನ್ನೆ ವಿವಾಹ ವಿಚ್ಛೇದನದ ಸರಕಾರಿ ಮೊಹರು ಬಿತ್ತು.

ಈ ಮೂಲಕ ಬಣ್ಣದ ಲೋಕದ ಮಂದಿಯ ಖಾಸಗಿ ಬದುಕಿನ ಮತ್ತೊಂದು ಕಪ್ಪು ಬಿಳುಪು ಚಿತ್ರ ಬಿಡುಗಡೆ ಆಯಿತು. ಈ ಸುದ್ದಿಯನ್ನು ಓದಿದ ಸಹಸ್ರಾರು ಮಂದಿ ನಮಗೆ ಕೇಳಿದ ಪ್ರಶ್ನೆಯೆಂದರೆ ಇಂಥ ಘಟನೆಗಳು ಎಲ್ಲಾ ಕಡೆ ನಡೆಯುತ್ತವೆ. ಅದನ್ನೂ ದಟ್ಸ್ ಕನ್ನಡದಲ್ಲಿ ಬರೆಯಿರಿ ಎಂದು ಚನ್ನಪಟ್ಟಣದ ಉಷಾ ಕೇಳಿದರು.

ಅವರ ಕೋರಿಕೆ ಸರಿನೇ. ಆದರೆ, ಮನೆಮನೆ ಕಥೆಗಳನ್ನು ಪದರಪದರವಾಗಿ ಬಿಚ್ಚಿ ಬರೆಯುವಷ್ಟು ಬ್ಯಾಂಡ್ ವಿಡ್ತ್ ನಮ್ಮಲ್ಲಿಲ್ಲ. ಆ ಶಕ್ತಿ ನಮ್ಮ ವೆಬ್ ಸೈಟಿಗೆ ಬರಲಿ ಎಂದು ನೀವೆಲ್ಲರೂ ಆಶೀರ್ವದಿಸುತ್ತೀರೆಂಬ ಆಶಾಭಾವನೆ ಇದೆ.

ಈ ಮಧ್ಯೆ, ಮಹೇಂದರ್ ಅವರಿಂದ ಡೈವೋರ್ಸ್ ಪಡೆದು ಚಕ್ರವರ್ತಿ ಲೇಔಟಿನಲ್ಲಿ ಮನೆ ಮಾಡಿಕೊಂಡಿದ್ದು, ಮತ್ತೆ ಎರಡನೇ ಮದುವೆಯನ್ನೂ ತಿರಸ್ಕರಿಸಿ ಚಂದ್ರಚೂಡನನ್ನು ಆಚೆ ಹಾಕಿದ್ದ ಶ್ರುತಿ ಮತ್ತೆ ಅದೇ ಚಂದ್ರಚೂಡ್ ಅವರ ಜತೆ ಸಂಸಾರ ಮಾಡುತ್ತಿದ್ದಾರಾ?

ಒಂಥರಾ ಹೌದು ಎನ್ನುತ್ತಿದೆ ಗಾಂಧಿನಗರ, ಆರ್ ಟಿ ನಗರದ ಮೂಲಗಳು. ಶ್ರುತಿ ಮತ್ತು ಚಂದ್ರಚೂಡ ಒಂದೇ ಮನೆಯಲ್ಲಿ ವಾಸವಾಗಿರುವುದನ್ನು ಮತ್ತು ಶ್ರುತಿಯವರ ಹತ್ತು ವರ್ಷದ ಮಗಳು ಸಹ ಅವರ ಜೊತೆ ಇರುವುದನ್ನು ಇತ್ತೀಚಿಗೆ ಒಂದಷ್ಟು ಮಂದಿ ನೋಡಿರುವ ಬಗ್ಗೆ ಖಚಿತ ಮಾಹಿತಿ ಇದೆ.

ಶ್ರುತಿ ತನ್ನ ಆಸ್ತಿಪಾಸ್ತಿ ವಿಚಾರದಲ್ಲಿ ಚಂದ್ರಚೂಡ್ ಜೊತೆ ಜಗಳ ಮಾಡಿಕೊಂಡು ಆತನನ್ನು ಮನೆಯಿಂದ ಹೊರಗೆ ಹಾಕಿದ್ದರೆಂದು ವರ್ಷದೀಚೆಗೆ ಕೆಲವು ಮಾಧ್ಯಮಗಳು ಸುದ್ದಿ ಮಾಡಿದ್ದವು. ಆದೇ ಶ್ರುತಿ - ಚಂದ್ರಚೂಡ್ ಮತ್ತೆ ಒಂದಾಗಿದ್ದಾರೆನ್ನುವುದು ಸತ್ಯವಾದ ಗಾಸಿಪ್ಪು.

More from Filmibeat

English summary
Kannada actress, divorcee Shurthi is back in live-in relationship with journalist Chandrachud
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X