ಸೋನಾ ರೇಪ್ ಮಾಡಲು ಎಸ್ಪಿಬಿ ಮಗ ಚರಣ್ ಯತ್ನ?

ತಮಿಳಿನ ಹೊಸ ಸೆಕ್ಸ್ ಬಾಂಬ್ ಸೋನಾ ಅವರು ಚರಣ್ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಯತ್ನ ಹೊರೆಸಿ ಪಾಂಡಿ ಬಜಾರ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ ಎಂದು ಕಾಲಿವುಡ್ ನಲ್ಲಿ ಸುದ್ದಿ ಹಬ್ಬಿದೆ.
ನಡೆದಿದ್ದಾರೂ ಏನು?: ಅಜಿತ್ ಅಭಿನಯದ 'ಮಂಕಾತ' ಚಿತ್ರದ ಸಂತೋಷ ಕೂಟದಲ್ಲಿ ಸೋನಾ ಕೂಡಾ ಬಂದಿದ್ದರು. ವೈಭವ್ ರೆಡ್ಡಿ ಎಂಬುವರ ಕಡೆಯಿಂದ ಈ ಕೂಟಕ್ಕೆ ಸೋನಾಗೆ ಆಹ್ವಾನ ಬಂದಿತ್ತು.
ವೆಂಕಟ್ ಪ್ರಭು ಜೊತೆ ಮುಂದಿನ ಸಿನಿಮಾ ಬಗ್ಗೆ ಮಾತುಕತೆಗೆ ಸಹಾಯವಾಗಲಿದೆ ಎಂದು ಭಾವಿಸಿ ಸೋನಾ ಭಾಗವಹಿಸಿದ್ದಾರೆ. ಆದರೆ, ವೆಂಕಟ್ ಪ್ರಭು ನಿನ್ನ ನೈಟ್ ರೇಟ್ ಎಷ್ಟು ಎಂದು ತುಂಬಾ ಕೇವಲವಾಗಿ ಮಾತನಾಡಿದರು, ಅಸಹ್ಯ ರೀತಿಯಲ್ಲಿ ವರ್ತಿಸಿ ಅವಮಾನ ಮಾಡಿದ್ದಾರೆ ಎಂದು ಸೋನಾ ಆರೋಪಿಸಿದ್ದಾರೆ.
ನಂತರ ಕುಡಿತದ ಅಮಲಿನಲ್ಲಿದ್ದ ಚರಣ್ ಗೆ ಸುಂದರಿ ಸೋನಾ ಮೈಕಟ್ಟು ನೋಡಿ ಆಸಕ್ತಿ ಕೆರಳಿದೆ.ಸೋನಾಳನ್ನು ಎಳೆದಾಡುತ್ತಾ ಕುಣಿದಾಡತೊಡಗಿದ್ದಾನೆ. ಇದಕ್ಕೆ ನಿರ್ದೇಶಕ ವೆಂಕಟ್ ಪ್ರಭು ಕೂಡಾ ಸಾಥ್ ನೀಡಿದ್ದರು ಎನ್ನಲಾಗಿದೆ.
ಚರಣ್ ತನ್ನ ಎಲ್ಲೆ ಮೀರಿ ಸೋನಾ ಶೀಲಕ್ಕೆ ಕೈ ಹಾಕಿದಾಗ ಎಚ್ಚೆತ್ತುಕೊಂಡ ನಟಿ, ಮೈಕೊಡವಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಎಸ್ ಪಿ ಚರಣ್ ಹಾಗೂ ವೆಂಕಟ್ ಪ್ರಭು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡದಿದ್ದರೆ, ಸೀಮೆಎಣ್ಣೆ ಹಚ್ಚಿಕೊಂಡು ಸಾಯುವುದಾಗಿ ಸೋನಾ ಬೆದರಿಸಿದ್ದಾರೆ. ಪ್ರಕರಣ ಪಾಂಡಿ ಬಜಾರ್ ಪೊಲೀಸರ ಕೈಲಿದ್ದು, ಯಾವ ರೀತಿ ತಿರುಗುವುದೋ ಕಾದು ನೋಡೋಣ.


Click it and Unblock the Notifications











