ದುಡ್ಡು ಕೊಡಲಿಲ್ಲಾಂದ್ರೆ ಅಷ್ಟೇ ಹುಷಾರ್ ಎಂದ ನಟಿ
ಎಸ್ ಎಂಎಸ್ ಮೂಲಕ ನನಗೆ ಮೋನಿಕಾ ಬೆದರಿಕೆ ಒಡ್ಡುತ್ತಿದ್ದಾಳೆ ಎಂದು ಪಾಂಡೆ ದೂರಿದ್ದಾರೆ. ಎಸ್ ಎಂಎಸ್ ಪ್ರತಿಯಲ್ಲಿ "U guys have to pay now, otherwise I will see u." ಎಂಬ ಸಂದೇಶ ಬಂದಿರುವುದು ದಾಖಲಾಗಿದೆ.
ಆಕೆ ಹಿನ್ನೆಲೆ ಗೊತ್ತಿರುವ ಯಾರಾದರೂ ಆಕೆಯನ್ನು ಹೆಚ್ಚು ಮಾತನಾಡಿಸಲು ಹೋಗುವುದಿಲ್ಲ. ಈ ರೀತಿ ಎಸ್ ಎಂಎಸ್ ಬೆದರಿಕೆ ಬಂದ ಮೇಲೆ ನಾನು ತಕ್ಷಣವೇ ಪೊಲೀಸರಿಗೆ ವಿಷಯ ತಿಳಿಸಿದ್ದೇನೆ.
ನಾನು ಮೋನಿಕಾಗೆ ಸಂಭಾವನೆ ಬಾಕಿ ಉಳಿಸಿಕೊಂಡಿಲ್ಲ.ಒಪ್ಪಂದದ ಪ್ರಕಾರ 5 ಲಕ್ಷ ಸಂಭಾವನೆ, 3 ಲಕ್ಷ ಮೇಕಪ್, ವಸ್ತ್ರವಿನ್ಯಾಸಕ್ಕೆ ಹಾಗೂ ಸಹಾಯಕರಿಗೆ 1 ಲಕ್ಷ ರು ನೀಡಿದ್ದೇನೆ.
ಭಾರತದಲ್ಲಿ ಚಿತ್ರ ಬಿಡುಗಡೆಯಾದ ಮೇಲೆ ಇನ್ನು 5 ಲಕ್ಷ ನೀಡುವ ಭರವಸೆ ನೀಡಲಾಗಿದೆ. ಆದರೆ, ಅಷ್ಟರಲ್ಲೇ ಮೋನಿಕಾ ತಕ್ಷಣವೇ 5 ಲಕ್ಷ ರು ನೀಡುವಂತೆ ಪೀಡಿಸುತ್ತಿದ್ದಾಳೆ. ನನ್ನ ಮಾತನ್ನು ಕೇಳಲು ಆಕೆ ತಯಾರಿಲ್ಲ. ಪದೇ ಪದೇ ಎಸ್ ಎಂಎಸ್ ಮೂಲಕ ಬೆದರಿಕೆ ಒಡ್ಡುತ್ತಿದ್ದಾಳೆ.
ಮಿಡ್ ಡೇ ನಲ್ಲಿ ಮೋನಿಕಾ ಬೇಡಿ ಕಳಿಸಿರುವ ಸಂದೇಶದ ಪೂರ್ಣ ಪ್ರತಿ ಲಭ್ಯವಿದೆ. ಅದರ ಸ್ಯಾಂಪಲ್ ಇಲ್ಲಿದೆ.
-"U guys have to pay now... otherwise I will c u."
-"I wl snd cntrct and notice."
-"Please ask Sanjayji (producer) to talk to me. Avoiding me wl only harm him legally."
-"Please take advise frm a good lawyer he wl tell how serious I d offense of issuing a non payment cheque. Its straight fraud case."
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬಿ ಬೆಡಗಿ ಮೋನಿಕಾ, ನಾನು ಯಾರಿಗೂ ಬೆದರಿಕೆ ಒಡ್ಡಿಲ್ಲ. ಎಲ್ಲವೂ ಸುಳ್ಳು ಸುದ್ದಿ ಎಂದಿದ್ದಾಳೆ.


Click it and Unblock the Notifications












