twitter
    For Quick Alerts
    ALLOW NOTIFICATIONS  
    For Daily Alerts

    ಹಿಂದಿ ಸೀರಿಯಲ್ ಡಬ್ಬಿಂಗ್ : ಜೀ ಟಿವಿ ಕಚೇರಿ ಧ್ವಂಸ

    |

    Zee Kannada office attacked
    ಕರ್ನಾಟಕ ಟಿವಿ ಅಸೋಸಿಯೇಶನ್ ಮತ್ತು ಕನ್ನಡ ಧಾರಾವಾಹಿ ಕಲಾವಿದರು ಜಂಟಿಯಾಗಿ ಜೀ ಟಿವಿ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ರವಿ ಕಿರಣ್ ಮುಂದಾಳತ್ವದಲ್ಲಿ ಮಹಾತ್ಮಾ ಗಾಂಧೀ ರಸ್ತೆಯಲ್ಲಿರುವ ವಾಹಿನಿಯ ಕಚೇರಿ ಮುಂದೆ ಪ್ರತಿಭಟನೆ ಮತ್ತು ದಾಳಿ ನಡೆಸಿದ್ದಕ್ಕಾಗಿ ಅಶೋಕ್ ನಗರ ಪೊಲೀಸರು 35 ಕಲಾವಿದರನ್ನು ಬಂಧಿಸಿದ್ದಾರೆ.

    'ಝಾನ್ಸಿ ಕಿ ರಾಣಿ' ಹಿಂದಿ ಧಾರವಾಹಿಯನ್ನು ಯಥಾವತ್ತಾಗಿ ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲಾಗುತ್ತಿತ್ತು. ಈ ಸಂಬಂಧ ಲಿಖಿತ ಮನವಿಗೆ ಸ್ಪಂದಿಸದ ಜೀ ಟಿವಿ ಆಡಳಿತ ಮಂಡಳಿ ವಿರುದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕಲಾವಿದರು ಕಚೇರಿಯ ಕಂಪ್ಯೂಟರ್, ಕಿಟಕಿ, ಗಾಜುಗಳನ್ನು ಪುಡಿಗೈದಿದ್ದಾರೆ. ರವಿಕಿರಣ್, ಅಭಿನಯಾ ಮುಂತಾದ ಕಲಾವಿದರ ವಿರುದ್ದ ಆಡಳಿತ ಮಂಡಳಿ ದೂರು ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ತದನಂತರ, ಜೀ ಟಿವಿ ದೂರು ವಾಪಸು ಪಡೆದುಕೊಂಡ ಮೇಲೆ ಎಲ್ಲಾ ಕಲಾವಿದರನ್ನು ಬಿಡುಗಡೆ ಗೊಳಿಸಲಾಗಿದೆ.

    "ನಾವು ಕಚೇರಿಗೆ ಏನೂ ತೊಂದರೆ ಮಾಡಿಲ್ಲ. ಮನವಿ ಸಲ್ಲಿಸಲಷ್ಟೇ ಹೋಗಿದ್ದೆವು. ನಗರದ ಎರಡು ಕೇಬಲ್ ಆಪರೇಟರ್ ಗಳು ಜೀ ಟಿವಿ ಪ್ರಸಾರವನ್ನು ಎರಡು ದಿನ ನಿಷೇಧಿಸಲು ಒಪ್ಪಿಕೊಂಡಿವೆ. ಕಳೆದ ಮೂರು ತಿಂಗಳಿನಿಂದ ನಾವು ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಸುಮಾರು ಹತ್ತು ಸಾವಿರ ಕಲಾವಿದರು ಇದನ್ನೇ ನಂಬಿ ಬದುಕುತ್ತಿದ್ದೇವೆ. ನಮ್ಮ ನೋವು ಅವರಿಗೆ ತಿಳಿಯಬೇಕು" ಎಂದು ರವಿ ಕಿರಣ್ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಜೀ ಟಿವಿ ಡಬ್ಬಿಂಗ್ ಧಾರವಾಹಿಯನ್ನು ತಕ್ಷಣದಿಂದ ನಿಲ್ಲಿಸಲಾಗುವುದು ಎಂದು ಹೇಳಿಕೆ ನೀಡಿ ನಡೆದ ಘಟನೆಗೆ ಜೀ ಕನ್ನಡ ಚಾನಲ್ ಕ್ಷಮೆ ಯಾಚಿಸಿದೆ.

    English summary
    TV artists lead by actor and director Ravi Kiran and actress Abhinaya attacked Zee Kannada office in Bangalore for telecasting dubbed Hindi serial Zansi Ki Rani in Kannada. The artists were arrested and later released. Zee Kannada has stopped telecasting the serial.
    Tuesday, August 16, 2011, 11:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X