»   » ಕನ್ನಡ ನಟ ಪ್ರಕಾಶ್ ರೈ ಬಂಧನಕ್ಕೆ ವಾರಂಟ್?

ಕನ್ನಡ ನಟ ಪ್ರಕಾಶ್ ರೈ ಬಂಧನಕ್ಕೆ ವಾರಂಟ್?

Posted By:
Subscribe to Filmibeat Kannada

ಚೆಕ್ ಬೌನ್ಸ್‌ಗೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲಾ ನ್ಯಾಯಾಲಯ ಕನ್ನಡ, ತಮಿಳು, ತೆಲುಗು ನಟ ಮತ್ತು ನಿರ್ಮಾಪಕ ಪ್ರಕಾಶ್ ರೈ(ರಾಜ್) ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ ಮಾಡಿದೆ.

ಎನ್. ಜನಾರ್ಧನ ರೆಡ್ಡಿ ಎಂಬ ಫೈನಾನ್ಸರ್‌ನಿಂದ 5 ಲಕ್ಷ ರು. ಹಣ ಪಡೆದಿದ್ದಕ್ಕೆ ಪ್ರತಿಯಾಗಿ ಪ್ರಕಾಶ್ ಚೆಕ್ ನೀಡಿದ್ದು ಬೌನ್ಸ್ ಆಗಿರುವ ಕಾರಣ ರೆಡ್ಡಿ ರೈ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ನ್ಯಾಯಾಧೀಶರು ನ್ಯಾಯಾಲಯಕ್ಕೆ ಹಾಜರಾಗುವಂತೆ ಪ್ರಕಾಶ್‌ಗೆ ಸಮನ್ಸ್ ಜಾರಿ ಮಾಡಿದ್ದರು. ಆದರೆ, ಪ್ರಕಾಶ್ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಅವರ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ ಮಾಡಿದೆ. ಯಾವುದೇ ಕ್ಷಣದಲ್ಲಿ ಪ್ರಕಾಶ್ ಬಂಧಿತರಾಗುವ ಸಾಧ್ಯತೆಯಿದೆ.

ಪ್ರಕಾಶ್ ವಿರುದ್ಧ ತೆಲುಗು ಚಿತ್ರರಂಗದ ಎರಡನೇ ಪ್ರಹಾರ ಈ ಚೆಕ್ ಬೌನ್ಸ್ ಪ್ರಕರಣ. ಕೆಲ ದಿನಗಳ ಹಿಂದೆ, ಪ್ರಕಾಶ್ ಚಿತ್ರೀಕರಣಕ್ಕೆ ತಡವಾಗಿ ಬರುತ್ತಾರೆ, ಕಾಲ್‌ಶೀಟ್ ನೀಡಿದರೂ ಚಿತ್ರೀಕರಣಕ್ಕೆ ಹಾಜರಾಗುವುದಿಲ್ಲ, ನಿರ್ಮಾಪಕರನ್ನು ಸತಾಯಿಸುತ್ತಿದ್ದಾರೆ ಎಂಬ ಕಾರಣ ಒಡ್ಡಿ ಅವರನ್ನು ತೆಲುಗು ಚಿತ್ರರಂಗದಲ್ಲಿ ನಟಿಸದಂತೆ ನಿಷೇಧ ಹೇರಲಾಗಿತ್ತು. ತೆಲುಗು ಚಿತ್ರರಂಗದಲ್ಲಿ ಪ್ರಕಾಶ್ ಅವರ ಏಳಿಗೆಯನ್ನು ಸಹಿಸದ ಕೆಲ ಸ್ವಹಿತಾಸಕ್ತರು ಅವರನ್ನು ಚಿತ್ರರಂಗದಿಂದಲೇ ಎತ್ತಂಗಡಿ ಮಾಡಲು ಹುನ್ನಾರ ನಡೆಸಿದ್ದಾರೆಂಬ ಮಾತೂ ಕೇಳಿಬಂದಿತ್ತು.

ಈಗ ಹೂಡಲಾಗಿರುವ ಚೆಕ್ ಬೌನ್ಸ್ ಪ್ರಕರಣದ ಪ್ರಕಾಶ್ ತೆಲುಗು ಚಿತ್ರರಂಗದಲ್ಲಿ ಪ್ರಕಾಶಿಸದಂತೆ ಮತ್ತಷ್ಟು ತಡೆಯೊಡ್ಡಿದೆ.

'ರೈ'ಟ್ ಹೇಳಲು ಪ್ರಕಾಶ್‌ಗೆ ತೆಲುಗು ಚಿತ್ರರಂಗ ತಾಕೀತು
ಪ್ರತಿಭಾವಂತ ಕನ್ನಡ ನಟ ಪ್ರಕಾಶ್ ರೈ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada