ಸಲ್ಮಾನ್ ಖಾನ್ ಹೊಸ ಗರ್ಲ್ ಫ್ರೆಂಡ್ ಹೆಂಗವ್ಳೆ ಗೊತ್ತಾ!
ಇಷ್ಟು ದಿನ ಏಕಾಂಗಿಯಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಹೊಸ ಗರ್ಲ್‌ಫ್ರೆಂಡ್ ಸಿಕ್ಕಿದ್ದಾಳೆ. ಐಶ್ವರ್ಯ ರೈ ಗುಂಗಿನಲ್ಲೇ ಸಲ್ಲು ಕಾಲನೂಕುತ್ತಿದ್ದ ಸಲ್ಲುಗೆ ಆಕೆ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ವಿಲವಿಲ ಎಂದು ಒದ್ದಾಡಿದ್ದ. ಈಗ ಹೊಸ ಚೆಂದುಳ್ಳಿ ಚೆಲುವೆಗೆ ಮನಸ್ಸು ಕೊಟ್ಟಿದ್ದಾನೆ.
ಸದ್ಯಕ್ಕೆ 'ಏಕ್ ಥಾ ಟೈಗರ್' ಚಿತ್ರದಲ್ಲಿ ಸಲ್ಲು ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಡಬ್ಲಿನ್‌ನಲ್ಲಿ ನಡೆಯುತ್ತಿದ್ದು ನಟಿ ಕತ್ರಿನಾ ಕೈಫ್ ಕೂಡ ಪಾಲ್ಗೊಂಡಿದ್ದಾರೆ. ಅಲ್ಲೇ ಸಲ್ಲುಗೆ ಈ ಹಕ್ಕಿ ಸಿಕ್ಕಿದ್ದು. ರುಮೇನಿಯಾದ ಇಲುಲಿಯಾ ವಂತೂರ್ ಎಂಬ ಈಕೆ ಸಲ್ಲು ಪರ್ಸನಾಲಿಟಿಗೆ ಮಾರುಹೋಗಿದ್ದಾಳೆ ಎಂದು ರುಮೇನಿಯಾದ ನಿಯತಕಾಯಿಕೆಯೊಂದು ಸುದ್ದಿ ಲೀಕ್ ಮಾಡಿದೆ.
ಇವರಿಬ್ಬರನ್ನೂ ಪರಸ್ಪರ ಪರಿಚಯಿಸಿದ್ದು ನಿರ್ಮಾಪಕನೊಬ್ಬ. ಬಳಿಕ ಈಕೆ ಭಾರತಕ್ಕೆ ಒಮ್ಮೆ ಪ್ರವಾಸ ಬಂದಿದ್ದಾಗ ಸಲ್ಲುರನ್ನು ಭೇಟಿ ಮಾಡಿದ್ದಳು. ಆಗ ಇವರಿಬ್ಬರ ನಡುವೆ ಪ್ರೇಮ ಚಿಗುರೊಡೆದದ್ದು. ಈಕೆ ಕೂಡ ಸಲ್ಲು ತರಹ ಭಗ್ನಪ್ರೇಮಿ. ಈಕೆಯ ಬಾಯ್‌ಫ್ರೆಂಡ್ ಕೈಕೊಟ್ಟ ಮೇಲೆ ಈಕೆ ಏಕಾಂಗಿಯಾಗಿದ್ದಳು. ಈಗ ಇಬ್ಬರು ಏಕಾಂಗಿಗಳು ಒಂದಾಗಿದ್ದಾರೆ.
ಇಬ್ಬರ ಫೋನ್‌ಗಳಲ್ಲೂ ಈಗ ಈ ಸಂಭಾಷಣೆ ಪ್ರೇಮ ಸಂಭಾಷಣೆ...ಸಲ್ಲು ಇಷ್ಟವಾದಂತೆ ಈಕೆಗೆ ಭಾರತದ ಸಂಸ್ಕೃತಿ, ಚೂಡಿದಾರ ಕೂದ ಇಷ್ಟವಾಗಿದೆಯಂತೆ. ಜೀವನದಲ್ಲಿ ಒಮ್ಮೆಯಾದರೂ ಸೀರೆ ಉಟ್ಟಿಕೊಳ್ಳುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಸಂಬಂಧ ಕೇವಲ ಮೂರು ದಿನ ಉಳಿಯದೆ ಚಿರಕಾಲ ಇರುತ್ತಾ ಎಂಬ ಪ್ರಶ್ನೆ ಬಾಲಿವುಡ್‌ನಲ್ಲಿ ಕಾಡುತ್ತಿದೆ. (ಏಜೆನ್ಸೀಸ್)


Click it and Unblock the Notifications











