ಲೈಂಗಿಕ ದೌರ್ಜನ್ಯಕ್ಕೊಳಗಾದ ಸೋನಾ ಬಿಚ್ಚಿಟ್ಟ ಕಥೆ?
ಚಿತ್ರ ನಿರ್ಮಾಪಕ ಮತ್ತು ಗಾಯಕರಾಗಿರುವ ಎಸ್ ಪಿ ಚರಣ್ ಅವರು ಕೇಸರಿ ಹರವೂ ಅವರು ನಿರ್ದೇಶಿಸಿದ್ದ ಕನ್ನಡ ಚಿತ್ರ 'ಭೂಮಿಗೀತ'ದಲ್ಲಿ ನಟಿಸಿದ್ದರು. ಚರಣ್ ಅವರು ಅಸಭ್ಯವಾಗಿ ವರ್ತಿಸಿದ್ದಲ್ಲದೆ ಅಶ್ಲೀಲ ಮಾತುಗಳನ್ನು ಕೂಡ ಆಡಿದರು ಎಂದು ಸೋನಾ ಪತ್ರಿಕಾಗೋಷ್ಠಿಯಲ್ಲಿ ಆರೋಪಗಳ ಸುರಿಮಳೆಗರೆದಿದ್ದಾರೆ.
ಈ ಘಟನೆ ನಡೆದಿರುವುದು 'ಮಂಕಾತ' ತಮಿಳು ಚಿತ್ರದ ಸಂತೋಷಕೂಟದಲ್ಲಿ. ಅಲ್ಲಿ ಇದ್ದವರು ಆರೇ ಆರು ಜನ. ಅವರಲ್ಲಿ ಸೋನಾ ಒಬ್ಬಳೇ ಹೆಂಗಸು. ವಿಪರೀತವಾಗಿ ಕುಡಿದಿದ್ದ ಚರಣ್ ಹೇಳಿಕೊಳ್ಳಲೂ ಅಸಹ್ಯವಾದ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಆದರೂ ಅವರ ವರ್ತನೆ ಎಲ್ಲರಿಗೂ ತಿಳಿಯಲಿ ಎಂದೇ ಇದನ್ನು ಬಹಿರಂಗಪಡಿಸಿದ್ದಾಗಿ ಸೋನಾ ಕಣ್ಣೀರುಗರೆದಿದ್ದಾರೆ.
ಅವರೇ ಹೇಳುವಂತೆ, "ಚರಣ್ ಹಿಂದೆ ಕೂಡ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ನಿನ್ನೆ ಕೂಡ ಅದನ್ನೇ ಮಾಡಿದರು. ನಾನು ಒಬ್ಬಳೇ ನಿಂತಿದ್ದಾಗ ಹತ್ತಿರ ಬಂದ ಚರಣ್, ಎದೆ ಮತ್ತಿತರ ಭಾಗದಲ್ಲೆಲ್ಲ ಕೈಯಾಡಿಸಿದನಲ್ಲದೆ ತನ್ನ ಜೊತೆ ಮಲಗಲು ಕೇಳಿದ. ಅವನು ಕುಡಿದದ್ದು ಗಮನಕ್ಕೆ ಬಂದು ದೂರ ತಳ್ಳಿದೆ. ನಾನು ಕೂಗಾಡಿದ್ದಕ್ಕೆ ಆತ ಕ್ಷಮೆ ಕೇಳಿದ."
"ಇಷ್ಟಕ್ಕೇ ಸುಮ್ಮನಾಗದೆ. ಚಿತ್ರಗಳಲ್ಲೆಲ್ಲ ಬಟ್ಟೆ ಬಿಚ್ತೀರಾ, ಈಗ ನಿಜವಾಗಿ ಬಿಚ್ಚಲು ಹಿಂದೇಟು ಏಕೆ ಅಂತ ಅಸಹ್ಯವಾಗಿ ಮಾತನಾಡಲು ಪ್ರಾರಂಭಿಸಿದ. ನನ್ನ ಜೊತೆ ಮಲಗಲು ಸಿದ್ಧವಿದ್ದರೆ ಎಷ್ಟೇ ದುಡ್ಡು ಕೊಡಲು ಸಿದ್ಧ ಎಂದೆಲ್ಲ ಅರಚಲು ಪ್ರಾರಂಭಿಸಿದ. ಅಷ್ಟರಲ್ಲಿ ಸ್ನೇಹಿತರಾದ ವೆಂಕಟ್ ಬಂದು ಅವನನ್ನು ದೂರ ತಳ್ಳಿದರು" ಎಂದು ಸೋನಾ ಅಳಲು ತೋಡಿಕೊಂಡಿದ್ದಾರೆ.
"ನನ್ನ ಆರೋಗ್ಯ ಸರಿಯಿಲ್ಲ. ಹೃದಯದ ತೊಂದರೆಯಿದೆ. ಖಿನ್ನತೆಯಿಂದ ಬಳಲುತ್ತಿದ್ದೇನೆ. ಹೆಚ್ಚು ದುಗುಡಕ್ಕೊಳಾಗಬಾರದ ನನಗೆ ಆತ ಅತೀವ ದುಃಖ ತಂದಿಟ್ಟಿದ್ದಾನೆ. ಆತನ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ. ಇನ್ನು 10 ದಿನಗಳೊಳಗಾಗಿ ಸಾರ್ವಜನಿಕವಾಗಿ ಕ್ಷಮೆ ಕೋರದಿದ್ದರೆ ಆತನನ್ನು ನಾನು ಬಿಡುವುದಿಲ್ಲ" ಎಂದು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಸೋನಾ.


Click it and Unblock the Notifications












